# ಹೊಸಕನ್ನಡ

- Site: https://hosakannada.com/

## ಅಂಬಾರಿ ಸರ್ಕಾರದ್ದಾ ಅಥವಾ ಅರಮನೆದ್ದಾ?’

- Link: https://hosakannada.com/latest/is-the-ambulance-government-owned-or-palace-owned/
- Published: 2026-10-26T09:35:17+00:00
- Author: ಹೊಸಕನ್ನಡ ನ್ಯೂಸ್

ಇದು ಕರ್ನಾಟಕದ, ಅದರಲ್ಲೂ ವಿಶೇಷವಾಗಿ ಮೈಸೂರು ದಸರೆಯ ಸಂದರ್ಭದಲ್ಲಿ ಪ್ರತಿಯೊಬ್ಬ ಕನ್ನಡಿಗನ ಮನಸ್ಸಿನಲ್ಲಿ
ಮೂಡುವ ಅತ್ಯಂತ ಕುತೂಹಲಕಾರಿ ಪ್ರಶ್ನೆ. ಅಂಬಾರಿ ಎಂದರೆ ಕೇವಲ ಮರದ ಮೇಲಿರುವ ಚಿನ್ನದ ಮಂಟಪವಷ್ಟೇ 
ಅಲ್ಲ; ಅದು ನಾಡಿನ ಸಾಂಸ್ಕೃತಿಕ ಅಸ್ಮಿತೆ, ಪರಂಪರೆ ಮತ್ತು ಸಾಮೂಹಿಕ ಹೆಮ್ಮೆಯ ಪ್ರತೀಕ.
​**ಚಾರಿತ್ರಾತ್ಮಕ
ಹಿನ್ನೆಲೆ ಮತ್ತು ಅರಮನೆಯ ಒಡೆತನಮೈಸೂರು ಒಡೆಯರ ಕಾಲದಲ್ಲಿ ದಸರಾ ಮಹೋತ್ಸವವು ರಾಜರ ಖಾಸಗಿ ಉತ್ಸವವಾಗಿತ್ತು.
ರಾಜಪ್ರಭುತ್ವದ ಅವಧಿಯಲ್ಲಿ ಆನೆ ಮೇಲೆ ಕೂರಿಸುವ ಚಿನ್ನದ ಅಂಬಾರಿ ಹಾಗೂ ಅದರಲ್ಲಿ ಕುಳಿತು ಪೂಜೆ ಸಲ್ಲಿಸುವ
ರಾಜರು ಅರಮನೆಗೆ ನೇರವಾಗಿ ಸೇರಿದ್ದರು. 1971ರಲ್ಲಿ ಪ್ರಭುತ್ವ ವ್ಯವಸ್ಥೆಯಲ್ಲಿ ರಾಜಧನ ಮತ್ತು ರಾಜರ
ಅಧಿಕಾರ ರದ್ದಾದ ನಂತರವೂ, ಮೈಸೂರು ರಾಜಮನೆತನವು ತಮ್ಮ ಬಳಿಯಿದ್ದ ಅನೇಕ ಪಾರಂಪರಿಕ ವಸ್ತುಗಳನ್ನು 
ಹಾಗೂ ದಸರಾ ಆಚರಣೆಯ ಕೆಲವು ಪ್ರಮುಖ ವಿಧಿ-ವಿಧಾನಗಳನ್ನು ಮುಂದುವರೆಸಿಕೊಂಡು ಬಂದಿದೆ. ಇಂದಿಗೂ ದಸರಾ
ಉತ್ಸವದ ಖಾಸಗಿ ದರ್ಬಾರ್ ಮತ್ತು ಧಾರ್ಮಿಕ ವಿಧಿಗಳಲ್ಲಿ ರಾಜಮನೆತನದ ಪಾತ್ರ ಪ್ರಮುಖವಾಗಿದೆ.

**​ಪ್ರಸ್ತುತ ವ್ಯವಸ್ಥೆ ಮತ್ತು ಸರ್ಕಾರದ ಜವಾಬ್ದಾರಿಸ್ವಾತಂತ್ರ್ಯದ ನಂತರ ಮತ್ತು ರಾಜಪ್ರಭುತ್ವದ
ಅಂತ್ಯದ ಬಳಿಕ, ಮೈಸೂರು ದಸರಾವನ್ನು “ನಾಡಹಬ್ಬ”ವನ್ನಾಗಿ ಘೋಷಿಸಿ ಸರ್ಕಾರದ ವತಿಯಿಂದ ಆಚರಿಸಲು ಆರಂಭಿಸಲಾಯಿತು.
ಇಂದಿನ ಜಂಬೂಸವಾರಿಯಲ್ಲಿ ಬಳಸುವ 750 ಕೆಜಿ ತೂಕದ ಚಿನ್ನದ ಅಂಬಾರಿ, ಅದರಲ್ಲಿ ಪ್ರತಿಷ್ಠಾಪಿಸುವ ಚಾಮುಂಡೇಶ್ವರಿ
ದೇವಿಯ ಮೂರ್ತಿ, ಆನೆಗಳ ಪಾಲನೆ, ಮಾವುತರ ನಿರ್ವಹಣೆ, ಉತ್ಸವದ ವೆಚ್ಚ, ಭದ್ರತೆ ಮತ್ತು ಇಡೀ ಸಿದ್ಧತೆಯ
ಸಂಪೂರ್ಣ ಜವಾಬ್ದಾರಿಯನ್ನು ಕರ್ನಾಟಕ ಸರ್ಕಾರವೇ (ಮೈಸೂರು ಜಿಲ್ಲಾ ಆಡಳಿತ ಮತ್ತು ಕನ್ನಡ ಹಾಗೂ ಸಂಸ್ಕೃತಿ
ಇಲಾಖೆ) ವಹಿಸಿಕೊಳ್ಳುತ್ತದೆ. ದಸರಾ ಮಹೋತ್ಸವಕ್ಕೆ ಕೋಟ್ಯಂತರ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡುವುದು
ಸರ್ಕಾರದ ಕೆಲಸವಾಗಿದೆ. ಹಾಗಾಗಿ, ಸಾರ್ವಜನಿಕವಾಗಿ ನಡೆಯುವ ವಿಜಯದಶಮಿ ಮೆರವಣಿಗೆ ಮತ್ತು ಅಂಬಾರಿ 
ಹೊರುವ ಆನೆಯ ಮೆರವಣಿಗೆಯ ಸಂಪೂರ್ಣ ನಿರ್ವಹಣೆ ಸರ್ಕಾರದ ಅಧೀನದಲ್ಲಿದೆ.

**​ಪ್ರಮೋದಾ ದೇವಿ ಅವರ ಆಕ್ಷೇಪ ಮತ್ತು ಸರ್ಕಾರದ ಸ್ಪಷ್ಟನೆಇತ್ತೀಚಿನ ದಸರಾ ಮಹೋತ್ಸವದ ಸಂದರ್ಭದಲ್ಲಿ
ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರು ಅಂಬಾರಿ ಮತ್ತು ಆಡಳಿತಾತ್ಮಕ ವ್ಯವಸ್ಥೆಗಳ ಕುರಿತು ಅಸಮಾಧಾನ
ವ್ಯಕ್ತಪಡಿಸಿದ್ದು ಈ ಚರ್ಚೆಗೆ ಮತ್ತಷ್ಟು ಪುಷ್ಟಿ ನೀಡಿದೆ. “ಚಿನ್ನದ ಅಂಬಾರಿ ಮೈಸೂರು ಅರಮನೆಯ ಖಾಸಗಿ
ಸ್ವತ್ತೇ ಹೊರತು ಸರ್ಕಾರದ್ದಲ್ಲ” ಎಂದು ಪ್ರತಿಪಾದಿಸಿರುವ ಅವರು, ದಸರಾ ಸಿದ್ಧತೆಗಳಲ್ಲಿ ಅಧಿಕಾರಿಗಳ
ಹಸ್ತಕ್ಷೇಪ ಹಾಗೂ ಸಂಪ್ರದಾಯದ ವಿಚಾರದಲ್ಲಿ ಕೆಲವು ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆ
ಪ್ರತಿಕ್ರಿಯಿಸಿರುವ ಸರ್ಕಾರದ ವಲಯದಿಂದ (ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಇತರ ಪ್ರಮುಖರು), ರಾಜಮನೆತನದ
ಸಂಪ್ರದಾಯಗಳಿಗೆ ಯಾವುದೇ ಚ್ಯುತಿ ಬಾರದಂತೆ ನೋಡಿಕೊಳ್ಳಲಾಗುತ್ತಿದೆಯಾದರೂ, ಆಡಳಿತಾತ್ಮಕವಾಗಿ ಜಂಬೂಸವಾರಿಯ
ನಿರ್ವಹಣೆಯನ್ನು ಸರ್ಕಾರದ ಚೌಕಟ್ಟಿನಲ್ಲೇ ನಡೆಸಲಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

**​ಸಮನ್ವಯತೆಯ ಪ್ರತೀಕ ಅಂಬಾರಿಹಾಗಾದರೆ ಅಂಬಾರಿ ಯಾರದ್ದು? ಕಾನೂನು ಮತ್ತು ಆಡಳಿತ ದೃಷ್ಟಿಯಿಂದ 
ನೋಡಿದರೆ, ಜಂಬೂಸವಾರಿಯಲ್ಲಿ ಬಳಸುವ ಚಿನ್ನದ ಅಂಬಾರಿ ಮತ್ತು ಅದರ ನಿರ್ವಹಣೆಯು ಸರ್ಕಾರದ (ಜಿಲ್ಲಾಡಳಿತದ)
ಉಸ್ತುವಾರಿಯಲ್ಲಿದೆ. ಆದರೆ ಇದರ ಮೂಲ ಬೇರುಗಳು ಅರಮನೆ ಹಾಗೂ ರಾಜಮನೆತನದ ಸಂಪ್ರದಾಯದೊಂದಿಗೆ ಆಳವಾಗಿ
ಬೆಸೆದುಕೊಂಡಿವೆ. ಇಂದಿನ ವ್ಯವಸ್ಥೆಯಲ್ಲಿ ಅಂಬಾರಿಯು ಸಾಂಪ್ರದಾಯಿಕವಾಗಿ ಅರಮನೆಯ ಇತಿಹಾಸವನ್ನು ಪ್ರತಿನಿಧಿಸಿದರೆ,
ಆಡಳಿತಾತ್ಮಕವಾಗಿ ಮತ್ತು ಸಾರ್ವಜನಿಕವಾಗಿ ಅದು ಸರ್ಕಾರದ ನಾಡಹಬ್ಬದ ಕಿರೀಟವಾಗಿದೆ. ರಾಜಪ್ರಭುತ್ವದ
ಕಾಲದ ವೈಭವವನ್ನು ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಎಲ್ಲರೂ ಸೇರಿ ಆಚರಿಸುವ ಹಬ್ಬ ಇದಾಗಿದ್ದು, ಸಣ್ಣಪುಟ್ಟ
ಭಿನ್ನಾಭಿಪ್ರಾಯಗಳ ನಡುವೆಯೂ ಅಂಬಾರಿಯು ಸರ್ಕಾರ ಮತ್ತು ಅರಮನೆ ಎರಡರ ಸಾಂಸ್ಕೃತಿಕ ಕೊಂಡಿಯಾಗಿ ಇಂದಿಗೂ
ಬೆಳಗುತ್ತಿದೆ.

## ಗೃಹ ಸಚಿವ ಅಮಿತ್‌ ಶಾ ವಿರುದ್ಧದ ಮಾನನಷ್ಟ ಪ್ರಕರಣ: ರಾಹುಲ್‌ ಗಾಂಧಿ ನಿರ್ದೋಷಿ

- Link: https://hosakannada.com/latest/defamation-case-against-home-minister-amit-shah-rahul-gandhi-is-innocent/
- Published: 2026-10-26T08:01:10+00:00
- Author: ಹೊಸಕನ್ನಡ ನ್ಯೂಸ್

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಕುರಿತು ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು 2018ರಲ್ಲಿ
ನಡೆದ ಚುನಾವಣಾ ರ್ಯಾಲಿಯೊಂದರಲ್ಲಿ ನೀಡಿದ ಹೇಳಿಕೆ ಕುರಿತು ಆಧರಿಸಿ ಮಾನಹಾನಿ ಪ್ರಕರಣ ದಾಖಲು ಮಾಡಲಾಗಿತ್ತು.
ಈ ಪ್ರಕರಣದ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯವು ರಾಹುಲ್‌ ಗಾಂಧಿ ಪರ ತೀರ್ಪು ನೀಡಿದೆ.

ಉತ್ತರ ಪ್ರದೇಶದ ಸುಲ್ತಾನ್‌ಪುರ ನ್ಯಾಯಾಲಯವು ರಾಹುಲ್‌ ಗಾಂಧಿ ಅವರನ್ನು ಖುಲಾಸೆಗೊಳಿಸಿ ಅ.26 ರಂದು
ತೀರ್ಪು ನೀಡಿ ನಿರ್ದೋಷಿ ಎಂದು ಘೋಷಿಸಿದೆ.

## ದೆಹಲಿ ಪ್ರವೇಶಿಸುವ ವಾಹನಗಳಿಗೆ ಹೊಸ ನಿಯಮ ಜಾರಿ

- Link: https://hosakannada.com/latest/new-rules-implemented-for-vehicles-entering-delhi/
- Published: 2026-10-26T07:51:33+00:00
- Author: ಹೊಸಕನ್ನಡ ನ್ಯೂಸ್

**ರಾಜಧಾನಿ ದೆಹಲಿಯಲ್ಲಿ ಚಳಿಗಾಲದ ಅವಧಿಯಲ್ಲಿ ಉಂಟಾಗುವ ವಾಯುಮಾಲಿನ್ಯವನ್ನು ನಿಯಂತ್ರಣ ಮಾಡಲು ದೆಹಲಿ
ಸರಕಾರವು ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ. ಹಾಗಾಗಿ ನ.1 ರಿಂದ ಜನವರಿ 31,2027 ರವರೆಗೆ ಹೊರ ರಾಜ್ಯಗಳಿಂದ
ಬರುವ ಬಿಎಸ್‌-6 ಮಾನದಂಡ ಇಲ್ಲದ ವಾಹನಗಳ ಪ್ರವೇಶವನ್ನು ನಗರದಾದ್ಯಂತ ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ.**

ಗುರುಗ್ರಾಮ, ಫರೀದಾಬಾದ್‌, ನೋಯ್ಡಾ, ಗ್ರೇಟರ್‌ ನೋಯ್ಡಾ ಮತ್ತು ಗಾಜಿಯಾಬಾದ್‌ಗಳಲ್ಲಿ ಬಿಎಸ್-6 ಮಾನದಂಡಕ್ಕಿಂತ
ಕೆಳಗಿರುವ 10 ಲಕ್ಷಕ್ಕೂ ಹೆಚ್ಚು ವಾಹನಗಳಿದೆ ಎಂದು ಅಂದಾಜಿಸಲಾಗಿದೆ.

ವಿನಾಯಿ ಯಾವ ವಾಹನಕ್ಕೆ?
ಸಿಎನ್‌ಜಿ ಮತ್ತು ವಿದ್ಯುತ್‌ ಚಾಲಿತ ವಾಹನಗಳಿಗೆ ಪ್ರವೇಶಕ್ಕೆ ವಿನಾಯಿತಿ
ನೀಡಲಾಗಿದೆ.ಆಂಬುಲೆನ್ಸ್‌, ಅಗ್ನಿಶಾಮಕ ವಾಹನಗಳು ಮತ್ತು ಅಗತ್ಯ ಸೇವೆಗಳಲ್ಲಿ ತೊಡಗಿಸಿಕೊಂಡಿರುವ 
ವಾಹನಗಳಿಗೆ ನಿಷೇಧ ಅನ್ವಯವಿಲ್ಲ.ಹೊರರಾಜ್ಯದ ಬಿಎಸ್‌-6 ಮಾನದಂಡ ಹೊಂದಿರುವ ವಾಹನಗಳು ಮುಕ್ತವಾಗಿ 
ಪ್ರವೇಶ ಮಾಡಬಹುದು.ದೆಹಲಿ ನೋಂದಾಯಿತ ವಾಹನಗಳಿಗೆ ಈ ನಿರ್ದಿಷ್ಟ ಪ್ರವೇಶ ನಿಷೇಧ ನಿಯಮವು ಅನ್ವಯಿಸುವುದಿಲ್ಲವಾದರೂ,
ದೆಹಲಿಯ ಇತರ ವಾಯು ಮಾಲಿನ್ಯ ನಿಯಂತ್ರಣ ಮತ್ತು ವಾಹನದ ವಿನಾಯಿತಿ ನಿಯಮಗಳು ಅವುಗಳಿಗೆ ಅನ್ವಯಿಸುತ್ತದೆ.

## ಕಟಪಾಡಿ: ಕಾರು-ಬೈಕ್‌ ಡಿಕ್ಕಿ: ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

- Link: https://hosakannada.com/accident/katapadi-car-bike-collision-engineering-student-dies/
- Published: 2026-10-26T07:36:32+00:00
- Author: ಹೊಸಕನ್ನಡ ನ್ಯೂಸ್

**ಕಟಪಾಡಿ: ರಾ.ಹೆ.66 ರ ಕಟಪಾಡಿ ಕಲ್ಲಾಪು ಬಳಿ ಕಾರು ಮತ್ತು ಬೈಕ್‌ ನಡುವೆ ಅಪಘಾತ ಸಂಭವಿಸಿದ್ದು
ಸಹ ಸವಾರ ಸಾವಿಗೀಡಾಗಿದ್ದು, ಸವಾರ ಗಂಭೀರ ಗಾಯಗೊಂಡ ಘಟನೆಯು ಅ.25 ರಂದು ಸಂಭವಿಸಿದೆ.**

ಬಂಟಕಲ್ಲು ಎಂಜಿನಿಯರಿಂಗ್‌ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ಬಿಜಾಪುರ ಮೂಲದ ಸುನಿಲ್‌ ಕುಮಾರ್‌(
19) ಮೃತ ವಿದ್ಯಾರ್ಥಿ. ಸವಾರ ಬಂಟಕಲ್ಲು ಅನಂತರ ಪದ್ಮನಾಭ ಭಟ್‌ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

## ರಾಹುಲ್‌ ಗಾಂಧಿ ಬೆಂಗಾವಲು ವಾಹನ ಅಪಘಾತ: ಕಾಂಗ್ರೆಸ್‌ ಕಾರ್ಯಕರ್ತರಿಗೆ ಗಾಯ

- Link: https://hosakannada.com/latest/rahul-gandhi-bengaluru-vehicle-accident-congress-workers-injured/
- Published: 2026-10-26T06:46:07+00:00
- Author: ಹೊಸಕನ್ನಡ ನ್ಯೂಸ್

ಲಕ್ನೋ: ರಾಹುಲ್‌ ಗಾಂಧಿ ಅವರು ನ್ಯಾಯಾಲಯಕ್ಕೆ ತೆರಳುತ್ತಿದ್ದ ವೇಳೆ, ಉತ್ತರಪ್ರದೇಶದ ಪೂರ್ವಾಂಚಲ್‌
ಎಕ್ಸ್‌ಪ್ರೆಸ್‌ವೇ 90ನೇ ಮೈಲಿಗಲ್ಲಿನ ಸಮೀಪ ಅವರ ಬೆಂಗಾವಲು ಪಡೆಯ ಹಲವು ವಾಹನಗಳು ಸರಣಿ ಅಪಾತಕ್ಕೀಡಾಗಿರುವ
ಘಟನೆ ಅ.26 (ಸೋಮವಾರ) ನಡೆದಿದೆ. ಈ ಘಟನೆಯಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯವಾಗಿದೆ. ರಾಹುಲ್‌ ಗಾಂಧಿ
ಅವರಿಗೆ ಯಾವುದೇ ಗಾಯವಾಗಿಲ್ಲ ಎಂದು ತಿಳಿದು ಬಂದಿದೆ.

ಐದು ವಾಹನಗಳು ಹಾಗೂ ಒಂದು ಆಂಬುಲೆನ್ಸ್‌ ಪರಸ್ಪರ ಡಿಕ್ಕಿಯಾಗಿದೆ. ಹಲಿಯಾಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ
ಈ ಘಟನೆ ನಡೆದಿದೆ.

## ಮೀಟರ್‌ ಬಡ್ಡಿಕೋರರ ಅಟ್ಟಹಾಸ: ವ್ಯಕ್ತಿಯ ಅಪಹರಣ, ಚಿತ್ರಹಿಂಸೆ, ಬಾಯಿಗೆ ಮೂತ್ರ ಸುರಿದು ವಿಕೃತಿ

- Link: https://hosakannada.com/crime/meter-loan-sharks-madness-kidnapping-a-person-filming-violence-urinating-on-the-mouth-and-perversion/
- Published: 2026-10-26T06:34:20+00:00
- Author: ಹೊಸಕನ್ನಡ ನ್ಯೂಸ್

**ಹಾವೇರಿ: ಮೀಟರ್‌ ಬಡ್ಡಿ ಕಟ್ಟಲಿಲ್ಲ ಎನ್ನುವ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಅಪಹರಣ ಮಾಡಿ, ನಾಲ್ಕು
ದಿನ ಕಾಲ ಕೂಡಿಹಾಕಿ ಭೀಕರವಾಗಿ ಹಲ್ಲೆ ಮಾಡಿ, ಬಾಯಿಗೆ ಮೂತ್ರ ಸುರಿದಿರುವ ಅಮಾನವೀಯ ಘಟನೆ ಹಾವೇರಿ
ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.**

ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಮಣಿಕಂಠ ಹಳವಳ್ಳಿ ಎನ್ನುವವರೇ ಬಡ್ಡಿಕೋರರ ಕ್ರೌರ್ಯಕ್ಕೆ ಸಿಲುಕಿದ
ಸಂತ್ರಸ್ತ.

ಮಣಿಕಂಠ ಅವರು ಆರೋಪಿಗಳ ಬಳಿ 70ಸಾವಿರ ರೂ ಸಾಲ ಪಡೆದಿದ್ದು, ವಾರಕ್ಕೆ 1500 ರಿಂದ 2000 ರೂ. ವರೆಗೆ
ಬಡ್ಡಿ ಪಾವತಿ ಮಾಡುತ್ತಿದ್ದರು. ಆದರೆ ಕೆಲವು ವಾರಗಳ ಬಡ್ಡಿ ಹಣ ನೀಡಲು ತಡವಾದ ಕಾರಣ ಬಡ್ಡಿಕೋರರು
ಈ ಕೃತ್ಯ ಎಸಗಿದ್ದಾರೆ.

ಅ.20 ರಂದು ಅಪರಿಚಿತ ವ್ಯಕ್ತಿಯೊಬ್ಬನ ಸಹಾಯದಿಂದ ಮಣಿಕಂಠ ತಪ್ಪಿಸಿಕೊಂಡಿದ್ದು, ಸ್ಥಳೀಯರ ಸಹಾಯದಿಂದ
ಕುಟುಂಬದವರನ್ನು ಸಂಪರ್ಕ ಮಾಡಿದ್ದಾರೆ. ಮಣಿಕಂಠ ಅವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಹಾವೇರಿ
ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಂತ್ರಸ್ತ ಮಣಿಕಂಠ ಅವರು ನೀಡಿದ ದೂರಿನನ್ವಯ ಬಂಕಾಪುರ ಪೊಲೀಸ್‌
ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

## ನರ್ಮದಾ ನದಿ ತೀರದಲ್ಲಿ ನೂರಾರು ವೋಟರ್‌ ಐಡಿಗಳು ಪತ್ತೆ

- Link: https://hosakannada.com/latest/hundreds-of-voter-ids-found-on-the-banks-of-the-narmada-river/
- Published: 2026-10-26T05:46:40+00:00
- Author: ಹೊಸಕನ್ನಡ ನ್ಯೂಸ್

**ನರ್ಮದಾ ನದಿ ತೀರದಲ್ಲಿ 343 ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿರುವ ಘಟನೆ ಮಧ್ಯಪ್ರದೇಶದ ಖರ್ಗೋನ್‌
ಜಿಲ್ಲೆಯ ಮಂಡಲೇಶ್ವರ ಪಟ್ಟಣದಲ್ಲಿ ಭಾನುವಾರ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು,
ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಕಾಂಗ್ರೆಸ್‌ ಆಗ್ರಹಿಸಿದೆ.**

ಪತ್ತೆಯಾದ ಗುರುತಿನ ಚೀಟಿಗಳು ನೆರೆಯ ಇಂದೋರ್‌ ಜಿಲ್ಲೆಯ ರಾವು ವಿಧಾನಸಭಾ ಕ್ಷೇತ್ರಕ್ಕೆ ಸೇರಿದ್ದವು
ಎನ್ನಲಾಗಿದೆ.

ಸ್ವಚ್ಛತಾ ಅಭಿಯಾನ ನಡೆಸುತ್ತಿದ್ದ ವೇಳೆ ಸ್ಥಳೀಯ ನಿವಾಸಿಗಳಿಗೆ ಈ ಗುರುತಿನ ಚೀಟಿಗಳು ದೊರಕಿದ್ದು,
ಕೂಡಲೇ ಆಡಳಿತ ಮಂಡಳಿಗೆ ಮಾಹಿತಿಯನ್ನು ನೀಡಿದ್ದಾರೆ.

## ಕಾರ್ಕಳ: ಬಸ್‌ನಿಂದ ಬಿದ್ದ ವೃದ್ಧ ಸಾವು

- Link: https://hosakannada.com/death/karkala-elderly-person-falls-from-bus-and-dies/
- Published: 2026-10-26T05:38:43+00:00
- Author: ಹೊಸಕನ್ನಡ ನ್ಯೂಸ್

ಅಜೆಕಾರು: ಕಾರ್ಕಳ ಕಡೆಯಿಂದ ಜೋಡು ರಸ್ತೆಯ ಕಡೆಗೆ ಬರುತ್ತಿದ್ದ ಬಸ್‌ನಿಂದ ಅ.24 ರಂದು ಬಿದ್ದಿದ್ದ
ಮಂಜುನಾಥ ಶೆಟ್ಟಿಗಾರ (80) ಅವರು ಚಿಕಿತ್ಸೆ ಫಲಿಸದೆ ಅ.25 ರಂದು ಸಾವಿಗೀಡಾಗಿದ್ದಾರೆ.

ಬಸ್ಸನ್ನು ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಬಸ್‌ನಿಂದ ಬೀಳುವಂತಾಯಿತು ಎನ್ನಲಾಗಿದೆ. ಕಾರ್ಕಳ 
ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

## ವರದಕ್ಷಿಣೆ ಕಿರುಕುಳ, ವಿಷ ಸೇವಿಸಿದ್ದ ಮಹಿಳೆ ಸಾವು

- Link: https://hosakannada.com/death/votheerthahalli-woman-who-consumed-poison-dies/
- Published: 2026-10-26T05:33:09+00:00
- Author: ಹೊಸಕನ್ನಡ ನ್ಯೂಸ್

**ತೀರ್ಥಹಳ್ಳಿ: ವರದಕ್ಷಿಣೆ ಕಿರುಕುಳ ಹಾಗೂ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವಿಷ ಸೇವಿಸಿದ್ದ ತೀರ್ಥಹಳ್ಳಿಯ
ಮಹಿಳೆಯೊಬ್ಬರು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅ.25 ರಂದು ಸಾವಿಗೀಡಾಗಿದ್ದಾರೆ.**

ತೀರ್ಥಹಳ್ಳಿಯ ಹೊದಲ ಗ್ರಾಮದ ಅಕ್ಷತಾ (30) ಮೃತಪಟ್ಟ ಮಹಿಳೆ. ಮೃತ ಮಹಿಳೆಯ ತಾಯಿ ನೀಡಿದ ದೂರಿನ ಆಧಾರದಲ್ಲಿ
ನಾಲ್ವರ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಅಕ್ಷತಾ ಅವರನ್ನು ಎಂಟು ವರ್ಷಗಳ ಹಿಂದೆ ಪುರುಷೋತ್ತಮ್‌ ಎನ್ನುವವರಿಗೆ ವಿವಾಹ ಮಾಡಿಕೊಡಲಾಗಿತ್ತು.
ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಅ.13 ರಂದು ಮನೆಯಲ್ಲಿ ಕೌಟುಂಬಿಕ ಕಲಹ ನಡೆದಿದ್ದು, ಪತಿ ಪುರುಷೋತ್ತಮ್‌ ಎದುರೇ ಅತ್ತೆ ಲೀಲಾವತಿ 
ಅವರು ಅಕ್ಷತಾ ಮೇಲೆ ಪೊರಕೆಯಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ನೊಂದ ಅಕ್ಷತಾ
ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು
ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾರೆ.

## ತಾಯಿಯ ಅಂತ್ಯವಿಧಿಯ ನಡುವೆಯೇ ಹೃದಯಾಘಾತ, ಸಾವು

- Link: https://hosakannada.com/death/heart-attack-and-death-in-the-midst-of-mothers-final-moments/
- Published: 2026-10-26T05:25:24+00:00
- Author: ಹೊಸಕನ್ನಡ ನ್ಯೂಸ್

ತಾಯಿಯ ಅಂತ್ಯವಿಧಿಯ ನಡುವೆಯೇ ಹೃದಯಾಘಾತ, ಸಾವು

**ಪಡುಬಿದ್ರಿ: ತಾಯಿಯ ಅಂತ್ಯವಿಧಿಗಳಲ್ಲಿ ಭಾಗಿಯಾಗಿ, ಹತ್ತನೇ ದಿನದ ಧರ್ಮೋದಕ ಕ್ರಿಯೆಯನ್ನು ಮುಗಿಸಿದ್ದ
ಪತ್ತನಂಕ ಮನೆ ಪಡುಬಿದ್ರಿಯ ರಮೇಶ್‌ ರಾವ್‌ (80) ಹೃದಯಾಘಾತದಿಂದ ಅ.25 ರಂದು ನಿಧನ ಹೊಂದಿರುವ ಘಟನೆ
ನಡೆದಿದೆ.**

ಬೆಂಗಳೂರು ಲಯನ್ಸ್‌ ಅಧ್ಯಕ್ಷ, ವಲಯಾಧ್ಯಕ್ಷ, ಪ್ರಾದೇಶಿಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರು
ಬೆಂಗಳೂರಿನಲ್ಲಿ ಕೆನರಾ ಜನರಲ್‌ ಸ್ಟೋರ್‌ ಉದ್ಯಮವನ್ನು ಮಾಡಿದ್ದರು.
