# Rakesh Poojary Death: ʼಕಾಂತಾರ: ಚಾಪ್ಟರ್‌ 1′ ಶೂಟ್‌ ಮುಗಿಸಿ ಬಂದಿದ್ದ ರಾಕೇಶ್‌ಗೆ ರಾತ್ರಿ ಹೃದಯಾಘಾತ

- Link: https://hosakannada.com/entertainment/rakesh-poojary-death-rakes-who-had-returned-from-the-shoot-of-kantara-chapter-1-suffered-a-heart-attack-at-night/
- Published: 2025-05-12T08:27:48+00:00
- Author: ಹೊಸಕನ್ನಡ ನ್ಯೂಸ್

Rakesh Poojary Death: ಕಾಮಿಡಿ ಕಿಲಾಡಿಗಳು ಸೀಸನ್‌ 3 ರ ವಿಜೇತ ರಾಕೇಶ್‌ ಪೂಜಾರಿ ಹೃದಯಾಘಾತದಿಂದ
ನಿಧನ ಹೊಂದಿದ್ದು, ಇವರ ಸಾವು ರಂಗಭೂಮಿ, ಸಿನಿಮಾಗೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಮೇ 11 ರ
ಬೆಳಿಗ್ಗೆ ರಿಷಬ್‌ ಶೆಟ್ಟಿ ನಿರ್ದೇಶನದ ʼಕಾಂತಾರ: ಚಾಪ್ಟರ್‌ 1″ ರ ಶೂಟ್‌ನಲ್ಲಿ ಇದ್ದರು. ಮಧ್ಯರಾತ್ರಿ
ಅವರಿಗೆ ಸಾವು ಸಂಭವಿಸಿದೆ ಎಂದು ಟಿವಿ9ಗೆ ರಾಕೇಶ್‌ ಪೂಜಾರಿ ಅವರ ಆಪ್ತ ನಟ ಗೋವಿಂದೇ ಗೌಡ (ಜಿಜಿ)
ಹೇಳಿರುವ ಕುರಿತು ವರದಿಯಾಗಿದೆ.

Sponsored

ʼಬೆಳಿಗ್ಗೆ ಕಾಂತಾರ ಸಿನಿಮಾ ಶೂಟ್‌ನಲ್ಲಿ ಇದ್ದ. ಶೂಟ್ ಮುಗಿಸಿ ಸಂಜೆ ಗೆಳೆಯರ ಮದುವೆ ಫಂಕ್ಷನ್​ಗೆ
ಹೋಗಿದ್ದಾನೆ. ಸುಸ್ತು ಎನ್ನುತ್ತಿದ್ದ. ಮಧ್ಯರಾತ್ರಿ ಹಾರ್ಟ್​ ಅಟ್ಯಾಕ್ ಆಯ್ತು. ಎಲ್ಲರೂ ನನಗೆ ಕಾಲ್
ಮಾಡಿದ್ದರು. ಆದರೆ ಮೊಬೈಲ್ ಸೈಲೆಂಟ್​ನಲ್ಲಿ ಇದ್ದಿದ್ದರಿಂದ ವಿಷಯ ಗೊತ್ತಾಗಿರಲಿಲ್ಲ. ಬೆಳಿಗ್ಗೆ 
ಎದ್ದು ನೋಡಿದಾಗ ವಿಷಯ ತಿಳಿಯಿತು’ ಎಂದಿದ್ದಾರೆ ಜಿಜಿ ಎಂದು ಟಿವಿ9 ವರದಿ ಮಾಡಿದೆ.

Advertisement

Advertisement

ರಾಕೇಶ್‌ಗೆ ತಂದೆಯೂ ಇಲ್ಲ. ರಾಕೇಶ್‌ ನಿಧನ ವಾರ್ತೆ ಇನ್ನೂ ತಾಯಿಗೆ ದೊರಕಿಲ್ಲ ಎನ್ನಲಾಗಿದೆ.

Advertisement
