# Hariprriya Vasishta simha Good News: ಗುಡ್ ನ್ಯೂಸ್ ಕೊಟ್ಟ ಹರಿಪ್ರಿಯಾ,  ಗರ್ಭಿಣಿ ಆಗಿದ್ದು ಕನ್ಫರ್ಮ್ ?!

- Link: https://hosakannada.com/entertainment/hariprriya-vasishta-simha-good-news/
- Published: 2023-03-19T13:13:10+00:00
- Author: ಹೊಸಕನ್ನಡ ನ್ಯೂಸ್

Hariprriya -Vasishta Simha : ಇತ್ತೀಚೆಗೆ ಮೈಸೂರಿನಲ್ಲಿ ವಿವಾಹ(Marriage) ನೆರವೇರಿಸಿಕೊಂಡಿದ್ದ
[ವಸಿಷ್ಠ ಸಿಂಹ](https://en.wikipedia.org/wiki/Vasishta_N._Simha) ಮತ್ತು ಹರಿಪ್ರಿಯಾ (
Hariprriya -Vasishta Simha )ಜೋಡಿ ಇದೀಗ ಗುಡ್‌ನ್ಯೂಸ್‌ ನೀಡಿದೆ. ಆ ವಿಚಾರವೇನು ಎಂಬುದನ್ನು
ಸೋಷಿಯಲ್‌ ಮೀಡಿಯಾದಲ್ಲಿ ಸಂಪೂರ್ಣವಾಗಿ ಹೇಳಿಕೊಂಡಿಲ್ಲ. ಬದಲಿಗೆ ನೀವೇ ಊಹಿಸಿ ಎಂದು ಅಭಿಮಾನಿಗಳ 
ತಲೆಗೆ ಹುಳ ಬಿಟ್ಟಿದ್ದಾರೆ ಹರಿಪ್ರಿಯಾ. ಹಾಗಾದರೆ, ಆ ಗುಡ್‌ ನ್ಯೂಸ್‌ ಏನಿರಬಹುದು? ಇನ್ನೇನಿದೆ:
ಮದುವೆಯ ನಂತರ ಆಗೋದೆಲ್ಲ ಆಗಿ ಆಕೆ ಗರ್ಭಿಣಿ(Pregnant), ಇನ್ನೇನು ಮಗು ಬರಲಿದೆ ಎನ್ನುತ್ತಿದೆ ಆಕೆಯ
ಅಭಿಮಾನಿ ಬಳಗ.

Sponsored

ಜನವರಿಯಲ್ಲಿ ಮದುವೆಯಾಗಿದ್ದ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ, ಎಲ್ಲೆಂದರಲ್ಲಿ ಒಟ್ಟಿಗೆ ಸುತ್ತಾಡುತ್ತ
ಎಂಜಾಯ್‌ ಮಾಡುತ್ತಿದ್ದಾರೆ. ಈ ನಡುವೆಯೇ ನಟಿ ಹರಿಪ್ರಿಯಾ ಗುಡ್‌ನ್ಯೂಸ್‌ವೊಂದನ್ನು ಹೇಳಿಕೊಳ್ಳುವ
ಕಾತರದಲ್ಲಿದ್ದು, ಆ ವಿಚಾರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದು ಅವರು ಸ್ವಾಗತಿಸಲಿರುವ
ಮಗುವಾ ಅಥವಾ ಬೇರೇನೋ ಗುಡ್ ನ್ಯೂಸ್ ನಾ ? ಇನ್ನೂ ಸ್ಪಷ್ಟವಿಲ್ಲ.

Advertisement

Advertisement

ನನಗೆ ಗೊತ್ತು ನೀವೆಷ್ಟು ಕುತೂಹಲಿಗಳಾಗಿದ್ದೀರಿ ಎಂದು? ನಾನು ಘೋಷಿಸುವ ಮೊದಲು, ಆ ಗುಡ್‌ ನ್ಯೂಸ್‌
ಏನಿರಬಹುದೆಂದು ನೀವೇ ಊಹಿಸಿ ಎಂದಿದ್ದಾರೆ [ಹರಿಪ್ರಿಯಾ](https://en.wikipedia.org/wiki/Hariprriya).
ಹಾಗಂದು ಹುಳ ಬಿಟ್ಟ ಆಕೆ ಗಂಡನ ಜತೆ ವಿಸ್ತರಿತ ಹನಿಮೂನ್ ಸವಿಯುತ್ತಿದ್ದಾಳೆ.

ಹರಿಪ್ರಿಯಾ ಅವರ ಪೋಸ್ಟ್‌ ನೋಡಿದ್ದೇ ತಡ ಅವರ ಅಭಿಮಾನಿಗಳು ಬಗೆಬಗೆ ರೀತಿಯಲ್ಲಿ ಕಮೆಂಟ್‌ ಮಾಡುತ್ತಿದ್ದಾರೆ,
ಇನ್ನೇನು ಶೀಘ್ರದಲ್ಲಿ ಅವರೇ ಘೋಷಣೆ ಮಾಡಲಿದ್ದಾರೆ ಎನ್ನುವುದು ಒಂದು ಊಹೆ.

ಇದನ್ನೂ ಓದಿ : [ಮರಾಠಿ ಹುಡುಗಿಯಾಗಿ ಚೆಲ್ಲಿ ಹೋದ ರಶ್ಮಿಕಾ ಮಂದಣ್ಣಳ ಅಗಾಧ ಸೌಂದರ್ಯ !](https://hosakannada.com/2023/03/19/marati-rashmika-mandanna-show/)

Advertisement
