# ಹೊಸ ಕ್ಷೇತ್ರಕ್ಕೆ ಕಾಲಿಟ್ಟ ಕ್ರಿಕೆಟಿಗ ಸೌರವ್‌ ಗಂಗೂಲಿ: ಇನ್ನು ಮುಂದೆ ಬಿಗ್‌ಬಾಸ್‌ ಹೋಸ್ಟ್‌

- Link: https://hosakannada.com/entertainment/cricketer-sourav-ganguly-enters-a-new-field-from-now-on-he-will-be-the-host-of-bigg-boss/
- Published: 2026-03-11T07:40:57+00:00
- Author: ಹೊಸಕನ್ನಡ ನ್ಯೂಸ್

ಟೀಂ ಇಂಡಿಯಾದ ಮಾಜಿ ಕ್ರಿಕೆಟ್‌ ಆಟಗಾರ ಸೌರವ್‌ ಗಂಗೂಲಿ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ.
ಬಿಗ್‌ಬಾಸ್‌ನ ಬೆಂಗಾಲಿ ವರ್ಷನ್‌ಗೆ ಹೋಸ್ಟ್‌ ಆಗಿ ಆಯ್ಕೆಯಾಗಿದ್ದಾರೆ. ಶೀಘ್ರವೇ ಸ್ಟಾರ್‌ ಜಲ್ಶಾದಲ್ಲಿ
ಈ ಶೋ ಪ್ರಸಾರವಾಗಲಿದೆ.

Sponsored

ಕನ್ನಡ ಸೇರಿ ಅನೇಕ ಭಾಷೆಗಳಲ್ಲಿ ಪ್ರತಿ ವರ್ಷವೂ ಬಿಗ್‌ಬಾಸ್‌ ನಡೆಯುತ್ತದೆ. ಬೆಂಗಾಲಿಯಲ್ಲಿ ಮೊದಲ
ಸೀಸನ್‌ ನಡೆದಿದ್ದು 2013 ರಲ್ಲಿ. ಇದಕ್ಕೆ ಮಿಥುನ್‌ ಚಕ್ರವರ್ತಿ ಹೋಸ್ಟ್‌ ಆಗಿದ್ದರು. ಎರಡನೇ ಸೀಸನ್‌
ಪ್ರಸಾರ ಕಂಡಿದ್ದು 2016 ರಲ್ಲಿ ಇದಕ್ಕೆ ಜೀತ್‌ ನಿರೂಪಕರಾಗಿದ್ದರು. ಆದರೆ ಈ ಎರಡೂ ಸೀಸನ್‌ ಅಷ್ಟೇನೂ
ಹೆಸರು ಮಾಡಲಿಲ್ಲ. ಹೀಗಾಗಿ ಅನಂತರ ಅಲ್ಲಿ ಬಿಗ್‌ಬಾಸ್‌ ಕಾರ್ಯಕ್ರಮ ನಡೆಯಲೇ ಇಲ್ಲ. ಇದೀಗ 10 ವರ್ಷಗಳ
ಬಳಿಕ ಬೆಂಗಾಲಿ ಭಾಷೆಗೆ ಬಿಗ್‌ಬಾಸ್‌ ಶೋ ಮತ್ತೆ ಮರಳುತ್ತಿದೆ.

Advertisement

Advertisement

Advertisement
