# ಬಿಗ್‌ಬಾಸ್‌ ರಜತ್‌ ಪೆಟ್ರೋಲ್‌ ಬಾಂಬ್‌ ರೀಲ್ಸ್‌: ಮತ್ತೊಂದು ವಿವಾದವಾಗಲಿದೆಯೇ?

- Link: https://hosakannada.com/entertainment/bigg-boss-rajat-petrol-bomb-reels-will-there-be-another-controversy/
- Published: 2026-04-28T12:31:55+00:00
- Author: ಹೊಸಕನ್ನಡ ನ್ಯೂಸ್

ಬಿಗ್‌ಬಾಸ್‌ ಮಾಜಿ ಸ್ಪರ್ಧಿ ರಜತ್‌ ಮತ್ತೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಪೆಟ್ರೋಲ್‌ ಬಾಂಬ್‌
ಮಾದರಿಯ ಸ್ಫೋಟಕವನ್ನು ಬಳಸಿಕೊಂಡು ರೀಲ್ಸ್‌ ಶೂಟ್‌ ಮಾಡಿರುವುದು ಕಂಡು ಬಂದಿದೆ. ಈ ವಿಡಿಯೋಗೆ ಸಾರ್ವಜನಿಕರಿಂದ
ಆಕ್ರೋಶ ಉಂಟಾಗಿದ್ದು, ನಿರ್ಲಕ್ಷ್ಯ ಮತ್ತು ಅಜಾಗರೂಕತೆಯ ವಿರುದ್ಧ ತೀವ್ರ ಖಂಡನೆ ವ್ಯಕ್ತವಾಗಿದೆ.

Sponsored

ವೈರಲ್‌ ವಿಡಿಯೋದಲ್ಲಿ ರಜತ್‌ ಅವರು ಒಂದು ಕವರ್‌ ಒಳಗೆ ಪೆಟ್ರೋಲ್‌ ಹಾಕಿ ಅದರ ಮೇಲೆ ಕಲ್ಲಿಟ್ಟು 
ಅದನ್ನು ಸ್ಫೋಟಗೊಳಿಸುವ ರೀತಿಯಲ್ಲಿ ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ರಸ್ತೆಯ ಮೇಲೆಯೇ ಈ ಶೂಟಿಂಗ್‌
ನಡೆದಿದ್ದು, ಆತಂಕಕ್ಕೆ ಕಾರಣವಾಗಿದೆ. ಜನ ಸಂಚಾರ ಇರುವ ಪ್ರದೇಶದಲ್ಲಿ ಇಂತಹ ಅಪಾಯಕಾರಿ ಕೃತ್ಯಗಳನ್ನು
ಮಾಡಿರುವುದು ಸಾರ್ವಜನಿಕ ಸುರಕ್ಷತೆಯನ್ನು ಗಂಭೀರವಾಗಿ ಪ್ರಶ್ನೆ ಮಾಡುವಂತಾಗಿದೆ.

Advertisement

Advertisement

ಆದರೆ, ಈ ಘಟನೆ ಯಾವ ಸ್ಥಳದಲ್ಲಿ ನಡೆದಿದೆ ಮತ್ತು ಯಾವಾಗ ಚಿತ್ರೀಕರಣ ಮಾಡಲಾಗಿದೆ ಎಂಬ ಬಗ್ಗೆ ಇನ್ನೂ
ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಈ ಅಸ್ಪಷ್ಟತೆಯ ನಡುವೆಯೇ, ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ
ಹರಡುತ್ತಿದ್ದು, ಹಲವರು ಈ ಕೃತ್ಯವನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ.

Advertisement
