# Belthangady : ಏ. 3 ರಿಂದ 6ರವರೆಗೆ ವಿದ್ವತ್ ಕಾಲೇಜಿನಿಂದ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಪ್ರತಿಭಾನ್ವೇಷಣೆ ಪರೀಕ್ಷೆ!!  ವಿಜೇತರಿಗೆ ಲ್ಯಾಪ್ಟಾಪ್-ಟ್ಯಾಬ್ ಬಹುಮಾನ

- Link: https://hosakannada.com/education/talent-search-exam-for-10th-class-students-from-vidwat-ollege-from-3rd-to-6th-laptop-tab-prize-for-winners/
- Published: 2026-03-31T17:08:52+00:00
- Author: ಹೊಸಕನ್ನಡ ನ್ಯೂಸ್

Belthangady : ಪ್ರಸ್ತುತ 10ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಗುರುವಾಯನಕೆರೆ
ವಿದ್ವತ್‌ ಪಿಯು ಕಾಲೇಜಿನಲ್ಲಿ ಪ್ರತಿಭಾನ್ವೇಷಣೆ ಪರೀಕ್ಷೆ (Talent Test) ಹಾಗೂ ವೃತ್ತಿ ಮಾರ್ಗದರ್ಶನ
ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. 

Sponsored

ಇದೇ ಏಪ್ರಿಲ್ 3 ರಿಂದ 6 ವರೆಗೆ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ತಮ್ಮ ಅನುಕೂಲಕರ
ದಿನಗಳಲ್ಲಿ ಬಂದು ಪರೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುವ ಸಲುವಾಗಿ ನಾಲ್ಕು ದಿನಗಳ ಕಾಲ ಪರೀಕ್ಷೆಯನ್ನು
ಕೂಡ ಆಯೋಜಿಸಲಾಗಿದೆ. ಪ್ರತಿದಿನ ಬೆಳಗ್ಗೆ 10.30 ರಿಂದ 11 ಗಂಟೆವರೆಗೆ ಹಾಗೂ ಮಧ್ಯಾಹ್ನ 2.30 ರಿಂದ
3.00 ರವರೆಗೆ ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನ ಕ್ಯಾಂಪಸ್‌ನಲ್ಲಿ ಪರೀಕ್ಷೆ ಆಯೋಜಿಸಲಾಗಿದೆ.

Advertisement

Advertisement

ಪರೀಕ್ಷೆಗೆ ಪ್ರವೇಶ ಸಂಪೂರ್ಣ ಉಚಿತವಾಗಿರುತ್ತದೆ. ಈ ಪರೀಕ್ಷೆಯಲ್ಲಿ ವಿಜ್ಞಾನ (Science) ವಿಭಾಗದಿಂದ
10 ಹಾಗೂ ಗಣಿತ (Mathematics) ವಿಭಾಗದಿಂದ 20 ಪ್ರಶ್ನೆಗಳಿರಲಿವೆ. ಪರೀಕ್ಷೆ ಅವಧಿ 30 ನಿಮಿಷಗಳಾಗಿದೆ.

**ಅತೀ ಹೆಚ್ಚು ಅಂಕ ಗಳಿಸಿದರೆ ಸಿಗುತ್ತೆ ಬಹುಮಾನ :**

ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿಶೇಷ ಬಹುಮಾನವಾಗಿ ಲ್ಯಾಪ್ಟಾಪ್ ನೀಡಲಾಗುವುದು.
ಗಮನಾರ್ಹ ಸಾಧನೆ ಮಾಡಿದ ವಿಜೇತರಿಗೆ ಟ್ಯಾಬ್‌ಗಳು ಬಹುಮಾನವಾಗಿ ನೀಡಲಾಗುತ್ತದೆ. ಅಲ್ಲದೆ ಕಾಲೇಜಿಗೆ
ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ, ಪ್ರತಿಭಾ ಪರೀಕ್ಷೆಯಲ್ಲಿ ಪಡೆಯುವ ಅಂಕದ ಮೇರೆಗೆ, ವಿಶೇಷ
ವಿದ್ಯಾರ್ಥಿ ವೇತನದ ಅವಕಾಶವನ್ನು ಕಲ್ಪಿಸಲಾಗಿದ್ದು, ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆಯುವಂತೆ
ತಿಳಿಸಲಾಗಿದೆ. 

ಹೆಚ್ಚಿನ ಮಾಹಿತಿಗಾಗಿ 7618775600 ಸಂಖ್ಯೆಯನ್ನು ಸಂಪರ್ಕಿಸುವಂತೆ ಸಂಸ್ಥೆಯ ಅಧ್ಯಕ್ಷರಾದ ಸುಭಾಶ್ಚಂದ್ರ
ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
