# ಇನ್ಮುಂದೆ 15 ವರ್ಷಕ್ಕಿಂತ ಸಣ್ಣ ಮಕ್ಕಳಿಗೆ ನೋ ಕೋಚಿಂಗ್‌ ಕ್ಲಾಸ್‌: ಬಂತು ಕಠಿಣ ನಿಯಮ

- Link: https://hosakannada.com/education/no-coaching-classes-for-kids-under-15-from-now-on-tough-rule-comes/
- Published: 2026-10-30T07:34:45+00:00
- Author: ಹೊಸಕನ್ನಡ ನ್ಯೂಸ್

ವಿದ್ಯಾರ್ಥಿಗಳ ಮೇಲಿನ ಶೈಕ್ಷಣಿಕ ಒತ್ತಡವನ್ನು ಕಡಿಮೆ ಮಾಡಲು ಮತ್ತು ಖಾಸಗಿ ಕೋಚಿಂಗ್ ಸೆಂಟರ್‌ಗಳ
ಹಾವಳಿಯನ್ನು ನಿಯಂತ್ರಿಸಲು ಕರ್ನಾಟಕ ಸರ್ಕಾರವು ‘ಕರ್ನಾಟಕ ಟ್ಯುಟೋರಿಯಲ್ ಇನ್‌ಸ್ಟಿಟ್ಯೂಷನ್ಸ್ (
ನೋಂದಣಿ ಮತ್ತು ನಿಯಂತ್ರಣ) ನಿಯಮಗಳು, 2026’ ಕರಡನ್ನು ಬಿಡುಗಡೆ ಮಾಡಿದೆ.​ಈ ಹೊಸ ನಿಯಮಗಳ ಪ್ರಮುಖ
ಮುಖ್ಯಾಂಶಗಳು ಇಲ್ಲಿವೆ:​15 ವರ್ಷದೊಳಗಿನವರಿಗೆ ನಿಷೇಧ: 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಥವಾ 
10ನೇ ತರಗತಿ ಪೂರ್ಣಗೊಳಿಸದ ಮಕ್ಕಳನ್ನು ಯಾವುದೇ ಖಾಸಗಿ ಕೋಚಿಂಗ್ ಸೆಂಟರ್‌ಗಳು ಅಥವಾ ಟ್ಯೂಷನ್‌ಗಳಿಗೆ
ಪ್ರವೇಶ ನೀಡುವಂತಿಲ್ಲ. ಅಂದರೆ 9ನೇ ತರಗತಿವರೆಗೆ ಕೋಚಿಂಗ್ ಪಡೆಯುವುದಕ್ಕೆ ತಡೆ ಬೀಳಲಿದೆ.

Sponsored

​ಸಮಯದ ಮಿತಿ: ಕೋಚಿಂಗ್ ತರಗತಿಗಳನ್ನು ದಿನಕ್ಕೆ ಗರಿಷ್ಠ 5 ಗಂಟೆಗಳ ಕಾಲ ಮಾತ್ರ (ಪರೀಕ್ಷೆ ಮತ್ತು
ಪುನರಾವರ್ತನೆ ಸೇರಿ) ನಡೆಸಬೇಕು. ಬೆಳಿಗ್ಗೆ 6ರಿಂದ ರಾತ್ರಿ 9 ಗಂಟೆಯೊಳಗೆ ಮಾತ್ರ ತರಗತಿಗಳು ನಡೆಯಬೇಕು.

Advertisement

Advertisement

​ಕೌನ್ಸಿಲರ್ ಕಡ್ಡಾಯ: ವಿದ್ಯಾರ್ಥಿಗಳ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಕೋಚಿಂಗ್ ಸೆಂಟರ್‌ಗಳಲ್ಲಿ
ಕಡ್ಡಾಯವಾಗಿ ಆಪ್ತ ಸಮಾಲೋಚಕರನ್ನು ನೇಮಿಸಬೇಕು.

​ಸುಳ್ಳು ಜಾಹೀರಾತುಗಳಿಗೆ ಕಡಿವಾಣ: ರ್ಯಾಂಕ್ ಅಥವಾ ಅಧಿಕ ಅಂಕಗಳ ಭರವಸೆ ನೀಡಿ ಸುಳ್ಳು ಜಾಹೀರಾತುಗಳನ್ನು
ಪ್ರಕಟಿಸುವಂತಿಲ್ಲ ಹಾಗೂ ಆಂತರಿಕ ಪರೀಕ್ಷೆಗಳ ಫಲಿತಾಂಶಗಳನ್ನು ಬಹಿರಂಗಪಡಿಸುವಂತಿಲ್ಲ.
​ಶುಲ್ಕ ಮರುಪಾವತಿ
ನಿಯಮ: ಒಂದೇ ಬಾರಿಗೆ ಇಡೀ ಕೋರ್ಸ್‌ನ ಶುಲ್ಕವನ್ನು ವಸೂಲಿ ಮಾಡುವಂತಿಲ್ಲ. ವಿದ್ಯಾರ್ಥಿಗಳು ಮಧ್ಯದಲ್ಲೇ
ಕೋರ್ಸ್ ಬಿಟ್ಟರೆ ಅಥವಾ ಸಂಸ್ಥೆ ಮುಚ್ಚಿದರೆ ನಿಯಮಾನುಸಾರ ಶುಲ್ಕವನ್ನು ಹಿಂದಿರುಗಿಸಬೇಕು.

​ಸರ್ಕಾರಿ ಶಿಕ್ಷಕರಿಗೆ ನಿರ್ಬಂಧ: ಸರ್ಕಾರಿ ಅಥವಾ ಅನುದಾನಿತ ಶಾಲೆ-ಕಾಲೇಜುಗಳ ಶಿಕ್ಷಕರನ್ನು ಕೋಚಿಂಗ್
ಸಂಸ್ಥೆಗಳಲ್ಲಿ ಬೋಧಕರನ್ನಾಗಿ ನೇಮಿಸಿಕೊಳ್ಳುವಂತಿಲ್ಲ.

​ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಮತ್ತು ಸ್ವಾಭಾವಿಕ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸರ್ಕಾರ
ಈ ಕಠಿಣ ಕ್ರಮಗಳಿಗೆ ಮುಂದಾಗಿದೆ.

Advertisement
