# ಜೂನ್‌ 21 ರಂದು ನೀಟ್‌–ಯುಜಿ ಮರು ಪರೀಕ್ಷೆ

- Link: https://hosakannada.com/education/neet-ug-re-examination-on-june-21/
- Published: 2026-05-15T10:41:05+00:00
- Author: ಹೊಸಕನ್ನಡ ನ್ಯೂಸ್

ಜೂನ್‌ 21 ರಂದು ನೀಟ್‌–ಯುಜಿ (NEET-UG 2026) ಮರು ಪರೀಕ್ಷೆ ನಡೆಸಲಾಗುವುದು ರಾಷ್ಟ್ರೀಯ ಪರೀಕ್ಷಾ
ಏಜೆನ್ಸಿಯು (NTA) ಅಧಿಕೃತವಾಗಿ ತಿಳಿಸಿದೆ.

Sponsored

ಮೇ 3 ರಂದು ನಡೆದಿದ್ದ ನೀಟ್ ಯುಜಿ (NEET UG) 2026 ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ 
ಕೇಳಿಬಂದ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಪರೀಕ್ಷೆಯನ್ನು ರದ್ದುಗೊಳಿಸಿತ್ತು.
ಇದೀಗ ಮರುಪರೀಕ್ಷೆಗೆ ದಿನಾಂಕವನ್ನು ಘೋಷಿಸಲಾಗಿದ್ದು, 2026ರ ಜೂನ್ 21ರಂದು ದೇಶಾದ್ಯಂತ ಮರುಪರೀಕ್ಷೆ
ನಡೆಯಲಿದೆ.

Advertisement

Advertisement

ಸಧ್ಯ ಕೇಂದ್ರೀಯ ತನಿಖಾ ದಳ ಈಗ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ನಡೆಸುತ್ತಿದೆ. ಹೆಚ್ಚಿನ
ವಿವರಗಳಿಗಾಗಿ ವಿದ್ಯಾರ್ಥಿಗಳು ಮತ್ತು ಪೋಷಕರು NTA ಅಧಿಕೃತ ವೆಬ್‌ಸೈಟ್‌ ಅಥವಾ ಸಾಮಾಜಿಕ ಜಾಲತಾಣವನ್ನು
ಮಾತ್ರ ಅವಲಂಬಿಸಬೇಕೆಂದು ಮನವಿ ಮಾಡಿದೆ.

Advertisement
