# NEET- 2026 ಫಲಿತಾಂಶ ಪ್ರಕಟ

- Link: https://hosakannada.com/education/neet-2026-results-declared-11-21-lakh-students-pass/
- Published: 2026-07-17T08:07:31+00:00
- Author: ಹೊಸಕನ್ನಡ ನ್ಯೂಸ್

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA) ಗುರುವಾರ NEET UG 2026 ಫಲಿತಾಂಶಗಳನ್ನು ಪ್ರಕಟಿಸಿದೆ. ವೈದ್ಯಕೀಯ
ಕೋರ್ಸ್ ಗೆ 11.21 ಲಕ್ಷ ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.

Sponsored

ಜೂನ್ 21 ರಂದು ಭಾರತದ 551 ನಗರಗಳು ಮತ್ತು ವಿದೇಶಗಳಲ್ಲಿ 14 ನಗರಗಳಲ್ಲಿ 5,440 ಕೇಂದ್ರಗಳಲ್ಲಿ 
ನಡೆದ ಪರೀಕ್ಷೆಗೆ ಸುಮಾರು 20 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. ಅವರಲ್ಲಿ 11.21 ಲಕ್ಷ ಅಭ್ಯರ್ಥಿಗಳು
ಪದವಿಪೂರ್ವ ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್ ಮತ್ತು ಸಂಬಂಧಿತ ಆರೋಗ್ಯ ಕಾರ್ಯಕ್ರಮಗಳಿಗೆ ಪ್ರವೇಶ
ಪಡೆಯಲು ಅರ್ಹತೆ ಪಡೆದಿದ್ದಾರೆ. ಇದರೊಂದಿಗೆ ದೇಶಾದ್ಯಂತ ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್ ಹಾಗೂ
ಇತರೆ ಆರೋಗ್ಯ ವಿಜ್ಞಾನ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಮತ್ತು ಕೌನ್ಸೆಲಿಂಗ್‌ಗೆ ಅಧಿಕೃತವಾಗಿ ಚಾಲನೆ
ದೊರೆತಿದೆ.

Advertisement

Advertisement

NEET UG ಮರು-ಪರೀಕ್ಷೆಯ ಅಂಕಪಟ್ಟಿಯನ್ನು neet.nta.nic.in ನಲ್ಲಿ ಡೌನ್‌ಲೋಡ್ ಮಾಡಿ. NEET UG
2026 ಮರು-ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿಗಳನ್ನು ಅಧಿಕೃತ ವೆಬ್‌ಸೈಟ್ neet.
nta.nic.in ನಿಂದ ಪರಿಶೀಲಿಸಬಹುದು ಮತ್ತು ಡೌನ್‌ಲೋಡ್ ಮಾಡಬಹುದು. 

**ಡೌನ್ಲೋಡ್ ಮಾಡುವ ಹಂತ :**

* neet.nta.nic.in ವೆಬ್‌ಸೈಟ್‌ಗೆ ಭೇಟಿ ನೀಡಿ.

* ಮುಖಪುಟದಲ್ಲಿರುವ NEET UG 2026 Scorecard / Re-exam Scorecard ಲಿಂಕ್ ಮೇಲೆ ಕ್ಲಿಕ್ ಮಾಡಿ.

* ನಿಮ್ಮ ರಿಜಿಸ್ಟ್ರೇಶನ್ ಸಂಖ್ಯೆ ಅಥವಾ ರೋಲ್ ನಂಬರ್ ಹಾಗೂ ಅಗತ್ಯ ಲಾಗಿನ್ ವಿವರಗಳನ್ನು ನಮೂದಿಸಿ.

* ನಂತರ ನಿಮ್ಮ ಸ್ಕೋರ್‌ಕಾರ್ಡ್ ಪರದೆಯ ಮೇಲೆ ಕಾಣಿಸುತ್ತದೆ.

* ಅದನ್ನು PDF ರೂಪದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

Advertisement
