# SSLC ಯಲ್ಲಿ ಫೇಲ್ ಆದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ – ಇನ್ಮುಂದೆ ಸರ್ಕಾರವೇ ಕಟ್ಟಲಿದೆ ನಿಮ್ಮ ಫೀಸ್!!

- Link: https://hosakannada.com/education/good-news-for-students-who-failed-in-sslc-from-now-on-the-government-will-pay-your-fees/
- Published: 2026-05-01T13:15:44+00:00
- Author: ಹೊಸಕನ್ನಡ ನ್ಯೂಸ್

2025- 26 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶ ಕೆಲವು ದಿನಗಳ ಹಿಂದಷ್ಟೇ ಬಿಡುಗಡೆಯಾಗಿದೆ.
ಈ ಪರೀಕ್ಷೆಯಲ್ಲಿ ಅನೇಕ ವಿದ್ಯಾರ್ಥಿಗಳು ಫೇಲ್ ಆಗಿರುವುದು ವಿಷಾದ ಸಂಗತಿ. ಆದರೆ ಇದೀಗ ಪರೀಕ್ಷೆಯಲ್ಲಿ
ಫೇಲ್ ಆದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ್ದು, ಪರೀಕ್ಷೆ-2 ಫೀಸ್ ಅನ್ನು ಸರ್ಕಾರವೇ ಭರಿಸಲಿದೆ
ಎಂದು ಶಿಕ್ಷಣ ಸಚಿವರು ಮಾಹಿತಿ ನೀಡಿದ್ದಾರೆ.

Sponsored

 ಪರೀಕ್ಷೆಯಲ್ಲಿ ಫೇಲ್ ಆದ ವಿದ್ಯಾರ್ಥಿಗಳಿಗೆ ತಮ್ಮ ವಿಷಯವನ್ನು ಪಾಸ್ ಮಾಡಲು ಸರ್ಕಾರ ಮತ್ತೆ ಎರಡು
ಪರೀಕ್ಷೆಗಳನ್ನು ನಡೆಸುತ್ತದೆ. ಹೀಗಾಗಿ ಫೇಲ್ ಆದವರಿಗೆ ಸದ್ಯದಲ್ಲೇ ಪರೀಕ್ಷೆ-2 ನಡೆಯಲಿದೆ. SSLC
ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ತಪ್ಪದೇ ಪರೀಕ್ಷೆ-2 ಅನ್ನು ಬರೆಯಬೇಕು. ಪರೀಕ್ಷೆ-
2ಕ್ಕೆ ಹಾಜರಾಗುವ ವಿದ್ಯಾರ್ಥಿಗಳ ಶುಲ್ಕವನ್ನು ಸರ್ಕಾರವೇ ಭರಿಸಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ
ಅವರು ತಿಳಿಸಿದ್ದಾರೆ. 

Advertisement

Advertisement

Advertisement
