# ರೀಲ್ಸ್‌ಗಾಗಿ ಎದೆಗೆ ರಿವಾಲ್ವರ್‌ ಇಟ್ಟು ವಿಡಿಯೋ, ಮಿಸ್‌ಫೈರ್‌: ವಿಡಿಯೋ ವೈರಲ್‌

- Link: https://hosakannada.com/death/video-of-a-revolver-being-held-to-the-chest-for-reels-misfire-video-goes-viral/
- Published: 2026-03-17T13:22:37+00:00
- Author: ಹೊಸಕನ್ನಡ ನ್ಯೂಸ್

ದೆಹಲಿ ಮಾ.17: ರೀಲ್ಸ್‌ ಮಾಡುವ ಹಂಬಲದಲ್ಲಿದ್ದ ಯುವಕನೋರ್ವ ಅದೇ ರೀಲ್ಸ್‌ ಆತನ ಪ್ರಾಣವನ್ನು ಕಸಿದುಕೊಂಡಿದೆ.
ದೆಹಲಿಯ ಯುವಕನೊಬ್ಬ ಸಿನಿಮಾ ಶೈಲಿಯಲ್ಲಿ ರಿವಾಲ್ವರ್‌ ಹಿಡಿದು ರೀಲ್ಸ್‌ ಮಾಡುವಾಗ, ಅಚಾನಕ್ಕಾಗಿ 
ಗುಂಡು ಹಾರಿದೆ. ಪರಿಣಾಮ ಯುವಕ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ.

Sponsored

ಮೃತನನ್ನು ದೆಹಲಿ ದಲ್ಲುಪುರ ನಿವಾಸಿ ಪವನ್‌ ಎಂದು ಗುರುತಿಸಲಾಗಿದೆ.

Advertisement

Advertisement

ಪವನ್‌ ತನ್ನ ಗೆಳೆಯರ ಜೊತೆ ಸೇರಿ ರಿಲ್ಸ್‌ ಮಾಡಲು ಮುಂದಾಗಿದ್ದು, ತನ್ನ ಬಳಿ ಇದ್ದ ರಿವಾಲ್ವರ್‌ಗೆ
ಬುಲೆಟ್‌ ಲೋಡ್‌ ಮಾಡುವುದು ಹೇಗೆ ಮತ್ತು ಅದನ್ನು ಭಯವಿಲ್ಲದೆ ನಿಭಾಯಿಸುವುದು ಹೇಗೆ ಎಂದು ವಿಡಿಯೋ
ಮಾಡಿ ತೋರಿಸುತ್ತಿದ್ದ.

ವಿಡಿಯೋ ಮಾಡುತ್ತಾ ಪವನ್‌ ನಗುಮುಖದಿಂದಲೇ ಲೋಡೆಡ್‌ ರಿವಾಲ್ವರ್‌ ಅನ್ನು ತನ್ನ ಎದೆಗೆ ಇಟ್ಟುಕೊಂಡಿದ್ದಾನೆ.
ಈ ವೇಳೆ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಗೆಳೆಯ ಗುಂಡು ಹಾರಿಸಬೇಡ ಎಂದು ಎಚ್ಚರಿಕೆ ನೀಡಿದ್ದಾನೆ.
ಆಗ ಪವನ್‌ ಇಲ್ಲ ಎಂದು ಉತ್ತರಿಸುವಾಗಲೇ ಟ್ರಿಗರ್‌ ಒತ್ತಲ್ಪಟ್ಟು ಗುಂಡು ಎದೆಯನ್ನು ಸೀಳಿ ಆತ ಸಾವಿಗೀಡಾಗಿದ್ದಾನೆ.

Advertisement
