# ಶಿವಮೊಗ್ಗ: ಪತ್ರೊಡೆ ಎಲೆಗಳನ್ನು ಕೀಳಲು ಮರವನ್ನೇರಿದ ನವ ವಿವಾಹಿತ, ಕರೆಂಟ್‌ ಶಾಕ್‌ನಿಂದ ಸಾವು

- Link: https://hosakannada.com/death/shivamogga-newlywed-dies-of-electric-shock-after-climbing-a-tree-to-pluck-leaves/
- Published: 2026-06-26T17:16:27+00:00
- Author: ಹೊಸಕನ್ನಡ ನ್ಯೂಸ್

ಶಿವಮೊಗ್ಗ, ಜೂ.26: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಯುವಕನೋರ್ವ ಪತ್ರೊಡೆ ಎಲೆ ಕೀಳಲೆಂದು ಮರ
ಏರಿದ್ದು, ಆಕಸ್ಮಿಕವಾಗಿ ವಿದ್ಯುತ್‌ ತಂತಿ ಸ್ಪರ್ಶಿಸಿ ಸ್ಥಳದಲ್ಲಿಯೇ ಸಾವಿಗೀಡಾಗಿರುವ ಘಟನೆ ತೀರ್ಥಹಳ್ಳಿ
ತಾಲೂಕಿನ ಲಕ್ಕುಂದ ಸಮೀಪ ನಡೆದಿದೆ.

Sponsored

ತೀರ್ಥಹಳ್ಳಿ ಪಟ್ಟಣದ ಇಂದಿರಾನಗರ ನಿವಾಸಿ ಅಭಿಷೇಕ್‌ ಶೆಟ್ಟಿ ಮೃತ ಯುವಕ. ಮರದ ಸಮೀಪವೇ ಹಾದು ಹೋಗಿದ್ದ
ಹೈ-ಟೆನ್ಷನ್‌ ವಿದ್ಯುತ್‌ ತಂತಿ ಆಕಸ್ಮಿಕವಾಗಿ ಸ್ಪರ್ಶಗೊಂಡು ವಿದ್ಯುತ್‌ ಪ್ರವಹಿಸಿದ ರಭಸಕ್ಕೆ ಮರ
ಏರಿದ ಅಭಿಷೇಕ್‌ ಮರದ ಮೇಲೆಯೇ ಪ್ರಾಣ ಕಳೆದುಕೊಂಡಿದ್ದಾರೆ.

Advertisement

Advertisement

ಮೃತ ಅಭಿಷೇಕ್‌ ಶೆಟ್ಟಿ ಅವರಿಗೆ ಇತ್ತೀಚೆಗಷ್ಟೇ ವಿವಾಹವಾಗಿತ್ತು. ಅಭಿಷೇಕ್‌ ಶೆಟ್ಟಿಯ ಅಕಾಲಿಕ ಸಾವು
ಪತ್ನಿ ಹಾಗೂ ಕುಟುಂಬಸ್ಥರ ಆಕ್ರಂದನಕ್ಕೆ ಕಾರಣವಾಗಿದೆ.

ಆಗುಂಬೆ ಪೊಲೀಸ್‌ ಠಾಣೆಯ ಅಧಿಕಾರಿಗಳು ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು,
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಈ ಕುರಿತು ಆಗುಂಬೆ ಪೊಲೀಸ್‌ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.

Advertisement
