# ಹಿರಿಯ ಪತ್ರಕರ್ತ, ಸುಳ್ಯ ಪ್ರೆಸ್‌ ಕ್ಲಬ್‌ನ ಮಾಜಿ ಅಧ್ಯಕ್ಷ ಜೆ.ಕೆ.ರೈ ನಿಧನ

- Link: https://hosakannada.com/death/senior-journalist-former-president-of-sulya-press-club-j-k-rai-passes-away/
- Published: 2026-11-01T02:29:06+00:00
- Author: ಹೊಸಕನ್ನಡ ನ್ಯೂಸ್

ಸುಳ್ಯ: ಸುಳ್ಯದ ಗಾಂಧಿನಗರ ನಿವಾಸಿ, ಹಿರಿಯ ಪತ್ರಕರ್ತ ಹಾಗೂ ಸುಳ್ಯ ಪ್ರೆಸ್‌ ಕ್ಲಬ್‌ನ ಮಾಜಿ ಅಧ್ಯಕ್ಷ
ಜೆ.ಕೆ.ರೈ ಅವರು ಅ.31 ರಂದು ನಿಧನ ಹೊಂದಿದ್ದಾರೆ.

Sponsored

ನಿವೃತ್ತ ಫಾರೆಸ್ಟರ್‌ ನಾರಾಯಣ ರೈ ಹಾಗೂ ಡಿ.ಕಮಲ ರೈ ದಂಪತಿಯ ಪುತ್ರರಾದ ಜೆ.ಕೆ.ರೈ ಅವರು ಕಳೆದ ನಾಲ್ಕು
ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಕೆವಿಜೆ ಆಸ್ಪತ್ರೆಗೆ 
ಇತ್ತೀಚೆಗೆ ಅವರನ್ನು ದಾಖಲು ಮಾಡಲಾಗಿತ್ತು. ಕೃತಕ ಉಸಿರಾಟದಲ್ಲಿದ್ದ ಅವರನ್ನು ಅ.31 ರಂದು ಸಂಜೆ 
ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಆಲೆಟ್ಟಿ ನಾರ್ಕೋಡಿನಲ್ಲಿರುವ ಮನೆಗೆ ಕರೆದೊಯ್ಯಲಾಗಿತ್ತು. ಅಲ್ಲಿ
ಅವರು ನಿಧನ ಹೊಂದಿದ್ದಾರೆ.

Advertisement

Advertisement

ಪಿ.ಯು. ಶಿಕ್ಷಣದ ಬಳಿಕ ವೃತ್ತಿಪರ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದ ಅವರು, ಬಳಿಕ ‘ಚೈತ್ರ 
ಡ್ರೈವಿಂಗ್ ಸ್ಕೂಲ್’ ಎಂಬ ವಾಹನ ಚಾಲನಾ ತರಬೇತಿ ಕೇಂದ್ರವನ್ನು ಆರಂಭಿಸಿ ಮುನ್ನಡೆಸಿದ್ದರು. ನಂತರ
ಸಂಜೆ ಪತ್ರಿಕೆಯೊಂದರ ವರದಿಗಾರರಾಗಿಯೂ, ಅಬ್ದುಲ್ ಸತ್ತಾರ್ ಗೋರೆ ಅವರ ಬಳಿಕ ‘ಪಯಸ್ವಿನಿ’ ಪತ್ರಿಕೆಯ
ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು. ನಮ್ಮ ‘ಹೊಸಕನ್ನಡ ವಾರಪತ್ರಿಕೆ ‘ ಪ್ರಾರಂಭವಾದ ಮೊದಲಿನಿಂದಲೂ
ಪತ್ರಿಕೆಯಾಗಿ ದುಡಿದ ಜೆಕೆರೈಯವರು ಪತ್ರಿಕೆಯ ಸಲಹಾಗಾರರಾಗಿದ್ದರು.

ಸುಳ್ಯದಲ್ಲಿ ಪ್ರಥಮ ಬಾರಿಗೆ ಪತ್ರಕರ್ತರ ಸಂಘ ಸ್ಥಾಪನೆಯಾದಾಗ ಅದರ ಮೊದಲ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ
ಅವರು, ನಂತರ ಸುಳ್ಯ ಪ್ರೆಸ್ ಕ್ಲಬ್ ರಚನೆಯಾದಾಗಲೂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಪತ್ರಿಕೋದ್ಯಮ
ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿದ್ದ ಅವರು. ಸುಳ್ಯದ ಪತ್ರಿಕಾ ವಲಯದಲ್ಲಿ ಸಕ್ರಿಯವಾಗಿ
ತೊಡಗಿಸಿಕೊಂಡಿದ್ದರು.

Advertisement
