# ರಾಮಕುಂಜ: ಅರಣ್ಯ ವೀಕ್ಷಕ ಹೃದಯಾಘಾತದಿಂದ ನಿಧನ

- Link: https://hosakannada.com/death/ramakunja-forest-officer-dies-of-a-heart-attack/
- Published: 2026-09-23T11:09:05+00:00
- Author: ಹೊಸಕನ್ನಡ ನ್ಯೂಸ್

ರಾಮಕುಂಜ: ಊಟ ಮಾಡಿ ಮಲಗಿದ್ದ ಯುವಕನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಸೆ.22 ರಂದು ನಡೆದಿದೆ.
ಸಚಿನ್‌ (33) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

Sponsored

ಸೆ.22 ರಂದು ಮಧ್ಯಾಹ್ನ ಊಟ ಮಾಡಿ ಮಲಗಿದ್ದು ಸುಮಾರು 3 ಗಂಟೆ ಸುಮಾರಿಗೆ ತಾಯಿ ಎಬ್ಬಿಸಲು ಬಂದಾಗ 
ಜೋರಾಗಿ ಉಸಿರಾಡುತ್ತಿರುವುದನ್ನು ಕಂಡು ಇನ್ನೋರ್ವ ಪುತ್ರ ಚರಣ್‌ಗೆ ಮಾಹಿತಿ ನೀಡಿದ್ದರು. ಕೂಡಲೇ 
ಸಚಿನ್‌ ಅವರನ್ನು ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದು, ಆದರೆ ವೈದ್ಯರು ಪರಿಶೀಲನೆ
ಮಾಡಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

Advertisement

Advertisement

ಕರ್ನಾಟಕ ಗೇರು ಅಭಿವೃದ್ಧಿ ನಿಗಮದ (ಕೆಸಿಡಿಸಿ) ಮಂಗಳೂರು ವಿಭಾಗದಲ್ಲಿ ಕಳೆದ ಒಂದೂವರೆ ವರ್ಷದಿಂದ
ಹೊರಗುತ್ತಿಗೆ ಆಧಾರದಲ್ಲಿ ಅರಣ್ಯ ವೀಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಇದಕ್ಕೂ ಮೊದಲು ಅವರು ಕಾಜರುಕ್ಕು
ಎಂಬಲ್ಲಿ ಬೈಕ್‌ ಸರ್ವಿಸ್‌ ಸ್ಟೇಷನ್‌ ನಡೆಸುತ್ತಿದ್ದರು.

ಮೃತರ ಸಹೋದರ ಚರಣ್‌ ನೀಡಿದ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement
