# ಇತ್ತ ಕಡೆ ಗರ್ಭಿಣಿ ತಾಯಿಯ ಫೋಟೋ ಶೂಟ್‌, 3 ವರ್ಷದ ಮಗು ನೀರಿಗೆ ಬಿದ್ದು ಸಾವು

- Link: https://hosakannada.com/death/meanwhile-during-a-pregnant-mothers-photo-shoot-a-3-year-old-child-fell-into-the-water-and-died/
- Published: 2026-02-15T13:07:37+00:00
- Author: ಹೊಸಕನ್ನಡ ನ್ಯೂಸ್

ನೆಲಮಂಗಲ/ಚಿಕ್ಕಮಗಳೂರು: ಎರಡನೇ ಮಗುವಿನ ಖುಷಿಯಲ್ಲಿದ್ದ ದಂಪತಿಯ ತಮ್ಮ ಮೊದಲ ಮಗು ನೀರಿಗೆ ಬಿದ್ದ
ಘಟನೆ ನಡೆದಿದೆ. ನೆಲಮಂಗಲದ ಮಾದನಾಯಕನಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿ ಗಿಡ್ಡೆನಹಳ್ಳಿಯಲ್ಲಿ ಈ ಘಟನೆ
ನಡೆದಿದೆ.

Sponsored

ಲಕ್ಷ್ಮೀರ್‌ (3) ಮೃತ ಮಗು. ತಾಯಿ ಗರ್ಭಿಣಿ ಫೋಟೋ ಶೂಟ್‌ ಮಾಡುತ್ತಿದ್ದಾಗ, ಆಡವಾಡಿಕೊಂಡಿದ್ದ ಮಗು
ಸ್ಥಳದಲ್ಲಿ ಸಣ್ಣ ನೀರಿನ ಪೂಲ್‌ಗೆ ಬಿದ್ದು ಮೃತಪಟ್ಟಿದೆ. ಮಗುವಿನ ವಚಾರದಲ್ಲಿನ ನಿರ್ಲಕ್ಷ್ಯವೇ ಈ
ಘಟನೆ ಕಾರಣ ಎನ್ನಲಾಗಿದ್ದು, ಮೃತ ಮಗುವಿನ ಮರಣೋತ್ತರ ಪರೀಕ್ಷೆಗೆ ನೆಲಮಂಗಲ ಸರಕಾರಿ ಆಸ್ಪತ್ರೆಗೆ 
ರವಾನೆ ಮಾಡಲಾಗಿದೆ.

Advertisement

Advertisement

ಲಕ್ಷ್ಮೀರ್‌ ಜ ಪಿ ನಗರ ನಿವಾಸಿಯಾಗಿರುವ ಸ್ವಾತಿ ಹಾಗೂ ಚರಣ್‌ ರಾಜ್‌ ದಂಪತಿಯ ಮಗುವಾಇಗದ್ದು, ಒಂದು
ವಾರದ ಹಿಂದೆ ಕೆಲಸದ ನಿಮಿತ್ತ ಚರಣ್‌ ರಾಜ್‌ ವಿದೇಶಕ್ಕೆ ತೆರಳಿದ್ದರು. ಫೋಟೋಶೂಟ್‌ ಮಾಡುವುದಾಗಿ 
ಗಂಡನ ಬಳಿ ಹೇಳಿ ಸ್ವಾತಿ ತಮ್ಮ ಸ್ನೇಹಿತೆ ಜೊತೆ ಬಂದಿದ್ದರು. ಈ ವೇಳೆ ಅವಘಡ ನಡೆದಿದೆ.

ಚರಣ್‌ರಾಜ್‌ ನಾಳೆ ಬೆಂಗಳೂರಿಗೆ ವಾಪಾಸು ಬರಲಿದ್ದು, ಮಗುವಿನ ಮರಣೋತ್ತರ ಪರೀಕ್ಷೆ ನಾಳೆ ನಡೆಸಲಿದೆ
ಎನ್ನುವ ಕುರಿತು ವರದಿಯಾಗಿದೆ.

Advertisement
