# ಹುಟ್ಟುಹಬ್ಬಕ್ಕೆಂದು ಟ್ರೆಕ್ಕಿಂಗ್‌ಗೆ ಹೋಗಿದ್ದ ವ್ಯಕ್ತಿ 350 ಅಡಿ ಆಳದ ಕಂದಕಕ್ಕೆ ಬಿದ್ದು ಸಾವು

- Link: https://hosakannada.com/death/man-falls-into-350-foot-deep-trench-while-trekking-for-birthday/
- Published: 2026-06-19T08:57:14+00:00
- Author: ಹೊಸಕನ್ನಡ ನ್ಯೂಸ್

ತನ್ನ ಹುಟ್ಟುಹಬ್ಬವನ್ನು ಆಚರಿಸಲೆಂದು ಸ್ನೇಹಿತರ ಜೊತೆ ಟ್ರೆಕ್ಕಿಂಗ್‌ಗೆ ಹೋಗಿದ್ದ ಯುವಕನೋರ್ವ ಆಳವಾದ
ಕಂದಕಕ್ಕೆ ಬಿದ್ದು ಸಾವಿಗೀಡಾಗಿರುವ ಘಟನೆ ಮಹಾರಾಷ್ಟ್ರದ ಲೋನಾವಾಲಾದ ಪ್ರಸಿದ್ಧ ಲೋಹಗಢ ಕೋಟೆಯಲ್ಲಿ
ನಡೆದಿದೆ. ಮೃತರನ್ನು ಗಾಹುಂಜೆಯ ಲೋದಾ ಬೆಲಂಡೋ ಸೊಸೈಟಿಯ ನಿವಾಸಿ ಕೇತನ್‌ ವಿಶಾಲ್‌ ಅಗರ್ವಾಲ್‌ (
24) ಎಂದು ಗುರುತಿಸಲಾಗಿದೆ.

Sponsored

ಲೋಹಗಢ ಕೋಟೆಗೆ ಚಾರಣ ಕೈಗೊಂಡಿದ್ದ ಕೇತನ್‌ ಅಗರ್‌ವಾಲ್‌, ಕೋಟೆಯ ಮೇಲ್ಭಾಗದಲ್ಲಿ ತೇವ ಹಾಗೂ ಜಾರು
ಮೇಲ್ಮೈ ಇದ್ದ ಕಾರಣ, ಆಕಸ್ಮಿಕವಾಗಿ ಸಮತೋಲನ ಕಳೆದುಕೊಂಡು ಆಳವಾದ ಕಂದಕಕ್ಕೆ ಬಿದ್ದಿದ್ದಾನೆ ಎಂದು
ಪ್ರಾಥಮಿಕ ವರದಿಗಳು ತಿಳಿಸಿರುವುದಾಗಿ ವರದಿಯಾಗಿದೆ.

Advertisement

Advertisement

ರಕ್ಷಣಾ ತಂಡದ ಸದಸ್ಯರು ಹಗ್ಗಗಳ ಸಹಾಯದಿಂದ ಕಂದಕಕ್ಕೆ ಇಳಿದು, ಸಾಗರ್‌ ಅವರ ಮೃತದೇಹವನ್ನು ಮೇಲಕ್ಕೆ
ತಂದು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ.

 

Advertisement
