# ಸುಳ್ಯ ಸರಕಾರಿ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಕುಸಿದು ಬಿದ್ದು ಸಾವು

- Link: https://hosakannada.com/death/kannada-lecturer-of-sulia-government-degree-college-collapsed-and-died/
- Published: 2026-03-12T16:32:46+00:00
- Author: ಹೊಸಕನ್ನಡ ನ್ಯೂಸ್

ಸುಳ್ಯ ಸರಕಾರಿ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಕುಸಿದು ಬಿದ್ದು ಸಾವಿಗೀಡಾಗಿರುವ ಘಟನೆ ಶ್ರೀರಾಂಪೇಟೆಯ
ಬಳಿ ಇಂದು ಮಧ್ಯಾಹ್ನ ನಡೆದಿರುವ ಕುರಿತು ವರದಿಯಾಗಿದೆ. ಕೊಡಿಯಾಲ್‌ಬೈಲ್‌ನಲ್ಲಿರುವ ಸರಕಾರಿ ಪದವಿ
ಕಾಲೇಜಿನ ಕನ್ನಡ ಉಪನ್ಯಾಸಕ ಮಂಜು (42) ಮೃತರು.

Sponsored

ಕೆ.ಆರ್.‌ನಗರದವರಾದ ಇವರು ಕಳೆದ ಎರಡು ವರ್ಷಗಳಿಂದ ಸುಳ್ಯದ ಸರಕಾರಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ
ಸೇವೆ ಮಾಡುತ್ತಿದ್ದರು. ಇಂದು ಮಧ್ಯಾಹ್ನದವರೆಗೂ ಎಲ್ಲರ ಜೊತೆ ಬಹಳ ಲವಲವಿಕೆಯಿಂದ ಇವರು ,ʼಸ್ವಲ್ಪ
ಹುಷಾರಿಲ್ಲ, ವಿಶ್ರಾಂತಿ ಪಡೆಯುತ್ತೇನೆʼ ಎಂದು ಹೇಳಿ ಮನೆಗೆ ತೆರಳಿದ್ದರು.

Advertisement

Advertisement

ಹೀಗೆ ಹೋದವರು ಮನೆಯಿಂದ ಔಷಧಿಗಾಗಿ ಮೆಡಿಕಲ್‌ ಸ್ಟೋರ್‌ಗೆ ಬಂದ ಸಂದರ್ಭದಲ್ಲಿ ಶ್ರೀರಾಂ ಪೇಟೆಯ ಬಳಿ
ಏಕಾಏಕಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಅಷ್ಟರಲ್ಲಿ
ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದರುವುದಾಗಿ ವರದಿಯಾಗಿದೆ.

Advertisement
