# ಪೂಜೆಗೆ ಹೂ ಕೊಯ್ಯಲು ಹೋಗಿ 23ನೇ ಮಹಡಿಯಿಂದ ಬಿದ್ದ ತಂದೆ ಮಗ, ದಾರುಣ ಸಾವು

- Link: https://hosakannada.com/death/father-and-son-fall-from-the-23rd-floor-while-going-to-offer-flowers-for-prayer-tragic-death/
- Published: 2026-10-30T09:24:58+00:00
- Author: ಹೊಸಕನ್ನಡ ನ್ಯೂಸ್

ಪೂಜೆಗಾಗಿ ಹೂವುಗಳನ್ನು ಕೀಳಲು ಬಾಲ್ಕನಿಗೆ ತೆರಳಿದ್ದ ತಂದೆ ಮಗ 23ನೇ ಮಹಡಿಯಿಂದ ಕೆಳಗೆ ಬಿದ್ದು 
ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಗೌತಮ ಬುದ್ಧ ನಗರ ಜಿಲ್ಲೆಯ ಗ್ರೇಟರ್‌ ನೋಯ್ಡಾದಲ್ಲಿ ಶುಕ್ರಾರ(
ಅ.30) ನಡೆದಿದೆ.

Sponsored

ಮೃತರನ್ನು ರಂದೀಪ್‌ ಪಾತ್ರಾ (40) ಮತ್ತು ಅವರ 11 ವರ್ಷದ ಮಗ ಆರವ್‌ ಎಂದು ಗುರುತಿಸಲಾಗಿದೆ.

Advertisement

Advertisement

ಹೂವು ಕೀಳಲು ಬಂದ ತಂದೆ ಮಗ, ಈ ಸಂದರ್ಭದಲ್ಲಿ ಬಾಲಕ ಆರವ್‌ ಆಯತಪ್ಪಿ ಬಾಲ್ಕನಿಯಿಂದ ಕೆಳಗೆ ಬೀಳುತ್ತಿದ್ದಾಗ
ಆತನ ರಕ್ಷಣೆಗೆ ತಂದೆ ಮುಂದಾಗಿದ್ದು, ನಿಯಂತ್ರಣ ಕಳೆದುಕೊಂಡು 23ನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾರೆ
ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಬಿಸ್ರಖ್‌ ಠಾಣೆ ಪೊಲೀಸರು ಬಂದಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ
ಮಾಡಿದ್ದು, ತನಿಖೆ ನಡೆಸುತ್ತಿದ್ದಾರೆ.

Advertisement
