# ಬಳ್ಳಾರಿ ಬಸ್‌ ನಿಲ್ದಾಣದಲ್ಲಿ ಪುತ್ತೂರು ಮೂಲದ ಉದ್ಯಮಿ ಹೃದಯಾಘಾತದಿಂದ ಸಾವು!

- Link: https://hosakannada.com/death/businessman-from-puttur-dies-of-heart-attack-at-ballari-bus-stand/
- Published: 2026-08-12T09:32:52+00:00
- Author: ಹೊಸಕನ್ನಡ ನ್ಯೂಸ್

ಪುತ್ತೂರು: ಮಂತ್ರಾಲಯಕ್ಕೆ ತೆರಳಿ ವಾಪಸ್‌ ಮಂಗಳೂರಿಗೆ ಬರುತ್ತಿದ್ದ ಪುತ್ತೂರು ಮೂಲದ ಉದ್ಯಮಿಯೊಬ್ಬರು
ಬಳ್ಳಾರಿ ಬಸ್‌ ನಿಲ್ದಾಣದಲ್ಲಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ವರದಿಯಾಗಿದೆ.

Sponsored

ಆ.9 ರಂದು ಮಂಗಳೂರಿನಿಂದ ಬಸ್‌ ಮೂಲಕ ಮಂತ್ರಾಲಯಕ್ಕೆ ತೆರಳಿದ್ದ ಸಂದೀಪ್‌ ಶೆಟ್ಟಿ ಅಲ್ಲಿಂದ ವಾಪಸ್‌
ಆಗುವ ವೇಳೆ ಘಟನೆ ನಡೆದಿದೆ. ಆಗಸ್ಟ್‌ 10 ರ ರಾತ್ರಿ ಬಸ್‌ ಬಳ್ಳಾರಿಯ ಎಪಿಎಂಸಿ ಬಸ್‌ ನಿಲ್ದಾಣದಲ್ಲಿ
ತಂಗಿದ್ದು, ರಾತ್ರಿ ಸುಮಾರು 2.30 ರ ಸಮಯಕ್ಕೆ ಬಸ್ಸಿನಿಂದ ಇಳಿದ ಸಂದೀಪ್‌ ಶೆಟ್ಟಿ ನಿಲ್ದಾಣದ್ಲಿ
ಕುಳಿತಿದ್ದರು. ಮುಂಜಾನೆ 4 ಗಂಟೆ ವೇಳೆಗೆ ಅವರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Advertisement

Advertisement

ಘಟನೆ ಗಮನಕ್ಕೆ ಬಂದ ಬಳಿಕ ಸಹ ಪ್ರಯಾಣಿಕರು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು
ಬಸ್‌ ನಿಲ್ದಾಣದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಘಟನೆಯನ್ನು ದೃಢಪಡಿಸಿದ್ದು, ನಂತರ ಮೃತರ ಮಗನ
ಮೊಬೈಲ್‌ಗೆ ಪೊಲೀಸರು ಸಂದೇಶ ಕಳುಹಿಸಿ ಮಾಹಿತಿ ನೀಡಿದ್ದಾರೆ.

ಮೃತರನ್ನು ಪುತ್ತೂರಿನ ಬೆಳಿಯೂರುಕಟ್ಟೆ ಮೂಲದ, ಸದ್ಯ ಮಂಗಳೂರಿನಲ್ಲಿ ವಾಸವಾಗಿದ್ದ ಸಂದೀಪ್‌ ಶೆಟ್ಟಿ(
44) ಎಂದು ಗುರುತಿಸಲಾಗಿದೆ.

 

Advertisement
