# 9 ಮಂದಿಯನ್ನು ಹೊತ್ತೊಯ್ಯುತ್ತಿದ್ದ ಬಿಸೆನೆಸ್‌ ಜೆಟ್‌ ಪತನ, ವಿಮಾನದಲ್ಲಿದ್ದ ಎಲ್ಲರ ಸಾವು

- Link: https://hosakannada.com/death/business-jet-carrying-9-people-crashes-everyone-on-board-dies/
- Published: 2026-11-02T04:14:05+00:00
- Author: ಹೊಸಕನ್ನಡ ನ್ಯೂಸ್

ಅಮೆರಿಕ: ಒಂಭತ್ತು ಜನರಿದ್ದ ಬಿಸಿನೆಸ್‌ ಜೆಟ್‌ ಭಾನುವಾರ ದಕ್ಷಿಣ ಫ್ಲೋರಿಡಾದಲ್ಲಿ ಅಪಘಾತಕ್ಕೀಡಾಗಿದೆ.
ವಿಮಾನದಲ್ಲಿದ್ದ ಎಲ್ಲರೂ ಸಾವಿಗೀಡಾಗಿದ್ದಾರೆ ಎಂದು ಸಾರಿಗೆ ಕಾರ್ಯದರ್ಶಿ ಹೇಳಿದ್ದಾರೆ. ಬಹಾಮಾಸ್‌ಗೆ
ತೆರಳುತ್ತಿದ್ದ ವಿಮಾನವು ಆಕಾಶದಿಂದ ಬಿದ್ದು ರಸ್ತೆಯ ಬಳಿ ಡಿಕ್ಕಿ ಹೊಡೆದು ಸ್ಫೋಟಗೊಂಡಿದೆ.

Sponsored

ಎಫ್‌ಎಎ ಪ್ರಕಾರ, ಟೆಕ್ಸಾಸ್‌ನ ಆಸ್ಟಿನ್-ಬರ್ಗ್‌ಸ್ಟ್ರಾಮ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ
ಹೊರಟು ಬಹಾಮಾಸ್‌ನ ನಾರ್ತ್‌ ಎಲ್ಯೂಥೆರಾ ವಿಮಾನ ನಿಲ್ದಾಣದತ್ತ ತೆರಳುತ್ತಿದ್ದ ಈ ವಿಮಾನವು ಮಧ್ಯಾಹ್ನ
12.50ರ ಸುಮಾರಿ ಕ್ರೆಸ್ಟ್‌ಹೇವನ್‌ ಬಳಿ ಪತನಗೊಂಡಿದೆ. ಒಂಭತ್ತು ಮಂದಿಯೂ ಸಾವಿಗೀಡಾಗಿದ್ದಾರೆ ಎಂದು
ಸಾರಿಗೆ ಕಾರ್ಯದರ್ಶಿ ಸೀನ್‌ ಡಫಿ ತಿಳಿಸಿದ್ದಾರೆ.

Advertisement

Advertisement

Advertisement
