# ಬಂಟಕಲ್‌: ಕೀಟನಾಶಕ ಸೇವಿಸಿ ಯುವಕ ಆತ್ಮಹತ್ಯೆ

- Link: https://hosakannada.com/death/bantkal-young-man-commits-suicide-after-consuming-insecticide/
- Published: 2026-11-03T04:12:31+00:00
- Author: ಹೊಸಕನ್ನಡ ನ್ಯೂಸ್

**ಶಿರ್ವ: ಉದ್ಯೋಗವಿಲ್ಲದೆ ಚಿಂತೆಯಿಂದ ಮನನೊಂದು ಯುವಕನೊಬ್ಬ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ
ಘಟನೆ ನ.1 ರಂದು ಬಂಟಕಲ್‌ನಲ್ಲಿ ನಡೆದಿದೆ.**

Sponsored

ಬಂಟಕಲ್ಲು ಹೇರೂರು ರಸ್ತೆ ನಿವಾಸಿ ಜೇಸನ್‌ ಫ್ಲಾಯಿಡ್‌ ಫೆರ್ನಾಂಡಿಸ್‌ (36) ಆತ್ಮಹತ್ಯೆ ಮಾಡಿಕೊಂಡ
ವ್ಯಕ್ತಿ.

Advertisement

Advertisement

ವಿದೇಶದಲ್ಲಿ ಉದ್ಯೋಗದಲ್ಲಿದ್ದ ಇವರು ಸರಿಯಾದ ಉದ್ಯೋಗ ಇಲ್ಲದ ಕಾರಣ ಕಳೆದ ಆರು ವರ್ಷಗಳಿಂದ ಊರಿನಲ್ಲಿಯೇ
ಇದ್ದರು. ಅ.30 ರಂದು ರಾತ್ರಿ ಮದ್ಯಪಾನ ಮಾಡಿ ಮನೆಗೆ ಬಂದಿದ್ದ ಅವರು ಸರಿಯಾದ ಕೆಲಸ ಇಲ್ಲ ನನಗೆ ಎಂದು
ಹೇಳಿ ಬೇಜಾರು ಪಟ್ಟುಕೊಂಡಿದ್ದಾರೆ. ಅದೇ ದಿನ ರಾತ್ರಿ ಕೀಟನಾಶಕವನ್ನು ಸೇವಿಸಿ ಆತ್ಮಹತ್ಯೆಗೂ ಯತ್ನಿಸಿದ್ದರು.
ಕೂಡಲೇ ತಂದೆ, ಮಗನನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಂದ ಮಣಿಪಾಲದ
ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ನ.1 ರಂದು ಮೃತಪಟ್ಟಿದ್ದಾರೆ.

ತಂದೆ ಫೆಲಿಕ್ಸ್‌ ಫೆರ್ನಾಂಡಿಸ್‌ ನೀಡಿದ ದೂರಿನನ್ವಯ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
