# ಐರ್ಲೆಂಡ್‌ನಲ್ಲಿ ಕಡಬ ಮೂಲದ ಯುವಕ ನಿಗೂಢ ಸಾವು

- Link: https://hosakannada.com/death/a-young-man-from-kadaba-dies-mysteriously-in-ireland/
- Published: 2026-02-19T16:18:37+00:00
- Author: ಹೊಸಕನ್ನಡ ನ್ಯೂಸ್

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಮೂಲದ ಯುವಕನೋರ್ವ ಐರ್ಲೆಂಡ್‌ ದೇಶದಲ್ಲಿ ನಿಗೂಢ
ಸಾವಿಗೀಡಾಗಿರುವ ಕುರಿತು ಶಂಕೆ ವ್ಯಕ್ತವಾಗಿದೆ. ಐರ್ಲೆಂಡ್‌ ದೇಶದ ಡಬ್ಲಿಕ್‌ ನಗರದಲ್ಲಿ ವಾಸವಿದ್ದ
ಸಾಂಜೋ ಸುನಿಲ್‌ (31) ಎಂಬುವವರು ತನ್ನ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

Sponsored

ಡಬ್ಲಿನ್‌ ನಗರದ ಫಿಂಗ್ಲಾಸ್‌ ಎನ್ನುವ ಪ್ರದೇಶದ ಚಾರ್ಲ್ಸ್‌ಟೌನ್‌ ಏರಿಯಾದಲ್ಲಿ ತಮ್ಮ ಪತ್ನಿ ಜೊತೆ
ವಾಸವಾಗಿದ್ದರು. ಕಡಬ ತಾಲೂಕಿನ ಕುಟ್ರುಪಾಡಿ ವಿಮಲಗಿರಿ ಎಂಬಲ್ಲಿನ ಸಾಂಜೋ ಸುನಿಲ್‌ ಎಂಬಲ್ಲಿನ ನಿವಾಸಿಯಾಗಿದ್ದು,
ವರ್ಷದ ಹಿಂದೆ ಐರ್ಲೆಂಡ್‌ನಲ್ಲಿ ನರ್ಸ್‌ ಆಗಿರುವ ಕಡಬದ ಯುವತಿಯನ್ನೇ ವಿವಾಹವಾಗಿದ್ದರು.

Advertisement

Advertisement

ಸುನಿಲ್‌ ಈ ಹಿಂದೆ ಇಸ್ರೇಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದು, ಕೆಲ ತಿಂಗಳ ಹಿಂದಷ್ಟೇ ಐರ್ಲೆಂಡಿಗೆ 
ಹೋಗಿದ್ದರು. ಪತ್ನಿ ಐರ್ಲೆಂಡ್‌ನಲ್ಲಿ ಕೆಲಸ ಮಾಡುತ್ತಿರುವುದರಿಂದ ತಮ್ಮ ಕೆಲಸವನ್ನು ಕೂಡಾ ಐರ್ಲೆಂಡಿಗ್‌
ಶಿಫ್ಟ್‌ ಮಾಡಿಸಿದ್ದರು. ಮನೆಯಲ್ಲಿ ತಮ್ಮ ಪತ್ನಿ ಇಲ್ಲದ ಸಮಯದಲ್ಲಿಯೇ ಸುನಿಲ್‌ ನೇಣು ಬಿಗಿದ ಸ್ಥಿತಿಯಲ್ಲಿ
ಕಂಡು ಬಂದಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರಬಹುದೇ ಎನ್ನುವ ಅನುಮಾನಗಳಿದ್ದು, ಇದರ ಜೊತೆಗೆ ಬೇರೆ
ಸಾಧ್ಯತೆಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement
