# ವಿಟ್ಲ: ಅಕ್ರಮ ಸುಡುಮದ್ದು ತಯಾರಿಕಾ ಸ್ಥಳದಲ್ಲಿ ಸ್ಫೋಟ; ಆರೋಪಿ ವಶಕ್ಕೆ

- Link: https://hosakannada.com/crime/vittla-explosion-at-illegal-fireworks-manufacturing-site-accused-arrested/
- Published: 2026-03-07T10:54:43+00:00
- Author: ಹೊಸಕನ್ನಡ ನ್ಯೂಸ್

ಬಂಟ್ವಾಳ ತಾಲೂಕಿನ ವಿಟ್ಲ ಮುಡ್ನೂರು ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಸುಡುಮದ್ದುಗಳು
ಸ್ಫೋಟಗೊಂಡ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

Sponsored

ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಗ್ರಾಮ ಆಡಳಿತಾಧೀಕಾರಿ ಸತೀಶ್‌ (50) ಅವರು ನೀಡಿದ ದೂರಿನನ್ವಯ
ಪ್ರಕರಣ ದಾಖಲಾಗಿದೆ. ವಿಟ್ಲ ಮುಡ್ನೂರು ಗ್ರಾಮದ ಪ್ರಭಾರ ಗ್ರಾಮ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಣೆ
ಮಾಡುತ್ತಿದ್ದಾರೆ.

Advertisement

Advertisement

ಮಾರ್ಚ್‌ 6 ರಂದು ಸಂಜೆ ವಿಟ್ಲ ಮುಡ್ನೂರು ಗ್ರಾಮದ ಕಂಬಳಬೆಟ್ಟು ನೂಜಿ ಪ್ರದೇಶದಲ್ಲಿ ಸುಡುಮದ್ದು 
ಸ್ಫೋಟಗೊಂಡ ಕುರಿತು ಮಾಹಿತಿ ಲಭಿಸಿದ ಕಾರಣ ಸತೀಶ್‌ ಅವರು ಕಂದಾಯ ನಿರೀಕ್ಷಕ ರವಿ ಅವರ ಜೊತೆ ಘಟನಾ
ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದರು. ಪರಿಶೀಲನೆ ಸಂದರ್ಭ ಸರಕಾರಿ ಜಮೀನಿನಲ್ಲಿ ಸ್ಥಳೀಯ ನಿವಾಸಿ
ಅಬ್ದುಲ್‌ ಗಫೂರ್‌ ಅವರು ಅಕ್ರಮವಾಗಿ ಶೆಡ್‌ ನಿರ್ಮಿಸಿ ಯಾವುದೇ ಪರವಾನಗಿ ಪಡೆಯದೇ ಸುಡುಮದ್ದುಗಳನ್ನು
ತಯಾರಿಸಿ ಸಂಗ್ರಹ ಮಾಡಿ ಇಟ್ಟಿರುವುದು ಪತ್ತೆಯಾಗಿದೆ. ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ
ಬೇಜವಾಬ್ದಾರಿಯಿಂದ ಸುಡುಮದ್ದುಗಳನ್ನು ದಾಸ್ತಾನು ಮಾಡಿದ್ದು, ಇದೇ ವೇಲೆ ಅವು ಸ್ಫೋಟಗೊಂಡಿರುವುದಾಗಿ
ವರದಿಯಾಗಿದೆ.

ಸ್ಫೋಟದ ಪರಿಣಾಮ ಸುತ್ತಮುತ್ತಲಿನ ಮರಗಳು ಸುಟ್ಟು ಹೋಗಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಆಗಿಲ್ಲ.
ಈ ಕುರಿತು ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಆರೋಪಿ ಅಬ್ದುಲ್‌ ಗಫೂರ್‌
ಎನ್ನುವವರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.

Advertisement
