# ವಿಟ್ಲ: ಬಸ್ಸಿನಲ್ಲಿ ಮಹಿಳೆಯ ಚಿನ್ನಾಭರಣ, ನಗದು ಕಳವು

- Link: https://hosakannada.com/crime/vitla-womans-gold-jewelry-and-cash-stolen-on-the-bus/
- Published: 2026-10-27T03:56:25+00:00
- Author: ಹೊಸಕನ್ನಡ ನ್ಯೂಸ್

**ವಿಟ್ಲ: ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ ಮಹಿಳೆಯ ಬ್ಯಾಗ್‌ನಲ್ಲಿದ್ದ ಚಿನ್ನಾಭರಣ, ನಗದು ಹಾಗೂ
ಅಗತ್ಯ ದಾಖಲೆಗಳು ಕಳುವಾಗಿರುವ ಘಟನೆ ನಡೆದಿದೆ. ಈ ಕುರಿತು ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ 
ದಾಖಲಾಗಿದೆ.**

Sponsored

ವಿಟ್ಲ ಸಮೀಪದ ಗ್ರಾಮದ ಪ್ರೇಮಾ (44) ಎಂಬುವರು ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

Advertisement

ತಮ್ಮ ಇಬ್ಬರು ಮಕ್ಕಳ ಜೊತೆ ಪೆರ್ಲದಲ್ಲಿರುವ ತಾಯಿಯ ಮನೆಯಿಂದ ವಿಟ್ಲಕ್ಕೆ ಬಂದು ಅಲ್ಲಿಂದ ಮಂಗಳೂರಿಗೆ
ತೆರಳುವ ಬಸ್ಸನ್ನು ಹತ್ತಿ ಕುಳಿತಿದ್ದು, ಈ ಸಂದರ್ಭದಲ್ಲಿ ಅವರ ಬ್ಯಾಗ್‌ ತೆರೆದಿದ್ದು ಅದರಲ್ಲಿ 64
ಗ್ರಾಂ ತೂಕದ ಚಿನ್ನಾಭರಣ, 3000ರೂ ನಗದು, ಎಟಿಎಂ ಕಾರ್ಡ್‌, ಪಾನ್‌ ಕಾರ್ಡ್‌ ಹಾಗೂ ಮತದಾರರ ಗುರುತಿನ
ಚೀಟಿಗಳು ಕಳವಾಗಿರುವುದು ದೂರಿನಲ್ಲಿ ತಿಳಿಸಿದ್ದಾರೆ.

Advertisement
