# ವೇಣೂರು: ಪೆರಿಂಜೆ ಬಳಿ 6 ವರ್ಷದ ಮಗುವಿನ ಮೇಲೆ ದೌರ್ಜನ್ಯ ಪ್ರಕರಣ, ಒಬ್ಬ ಆರೋಪಿ ಬಂಧನ

- Link: https://hosakannada.com/crime/venoor-perinje-rape-case-one-youth-arrested/
- Published: 2026-06-25T05:57:43+00:00
- Author: ಹೊಸಕನ್ನಡ ನ್ಯೂಸ್

ಬೆಳ್ತಂಗಡಿ: ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ
 ಪೆರಿಂಜೆ ಗ್ರಾಮದ ಬಳಿ 6 ವರ್ಷದ ಬಾಲಕಿಯ ಮೇಲೆ 
ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Sponsored

ಪ್ರಕರಣದ ವಿವರ: ಸಾರ್ವಜನಿಕರಿಂದ ಲಭಿಸಿದ ಮಾಹಿತಿ ಆಧಾರದ ಮೇಲೆ ವೇಣೂರು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ಸಂಬಂಧ 16 ಹಾಗೂ 18 ವರ್ಷದ ಅಪ್ರಾಪ್ತ ವಯಸ್ಸಿನ ಇಬ್ಬರು ಬಾಲಕರ ವಿರುದ್ಧ ದೂರು ನೀಡಲಾಗಿದೆ ಎಂದು
ತಿಳಿದುಬಂದಿದೆ. ಪೊಲೀಸರು ಈಗಾಗಲೇ ಒಬ್ಬ ಆರೋಪಿಯನ್ನು ಬಂಧಿಸಿದ್ದು, ಇನ್ನೊಬ್ಬ ಆರೋಪಿಗಾಗಿ ಶೋಧ 
ನಡೆಸುತ್ತಿದ್ದಾರೆ. ಆತ ಮುಂಬೈ ಕಡೆಗೆ ತೆರಳಿರುವ ಶಂಕೆ ವ್ಯಕ್ತವಾಗಿದೆ.

Advertisement

Advertisement

ಮೊಬೈಲ್ ಫೋನ್ ಮೂಲಕ ಸಿಕ್ಕ ದೃಶ್ಯಾವಳಿ ಆಧಾರದ ಮೇಲೆ ಸ್ನೇಹಿತರೊಬ್ಬರು ಸ್ವಯಂಪ್ರೇರಿತರಾಗಿ ದೂರು
ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದೂರು ನೀಡಿದ ವ್ಯಕ್ತಿಗೆ ಫೋನ್ ಮೂಲಕ ಕೊಲೆ ಬೆದರಿಕೆ ಮತ್ತು ಕುಟುಂಬದವರಿಗೆ ಹಾನಿ ಮಾಡುವುದಾಗಿ ಬೆದರಿಕೆ
ಹಾಕಲಾಗುತ್ತಿದೆ ಎಂಬ ದೂರು ಕೂಡ ಪೊಲೀಸರಿಗೆ ಲಭಿಸಿದೆ. ಈ ಕುರಿತು ಪ್ರತ್ಯೇಕ ತನಿಖೆ ನಡೆಯುತ್ತಿದೆ
ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಅಪ್ರಾಪ್ತ ಆರೋಪಿಯನ್ನು ಜುವೆನೈಲ್ ಜಸ್ಟೀಸ್ ಕಾಯ್ದೆಯಡಿ ವಿಚಾರಣೆಗೆ ಒಳಪಡಿಸಲಾಗುತ್ತಿದೆ.
ತಲೆಮರೆಸಿಕೊಂಡಿರುವ ಇನ್ನೊಬ್ಬ ಆರೋಪಿಯ ಬಂಧನಕ್ಕೆ ಮುಂಬೈ ಪೊಲೀಸರ ಸಹಕಾರ ಪಡೆಯಲಾಗುತ್ತಿದೆ.

ವೇಣೂರು ಪೊಲೀಸ್ ಠಾಣೆಯಲ್ಲಿ ಕಲಂ 376,376AB,376DB,506 3 34 IPC 6 ಪೋಕ್ಸೋ ಕಾಯಿದೆ-2012 ರಂತೆ
ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

Advertisement
