# ಉಪ್ಪಿನಂಗಡಿ: ಕಾರಿನಲ್ಲಿ ಬಿಸಿಲೆ ಘಾಟಿಗೆ ಕರೆದೊಯ್ದು ಯುವತಿಯ ಕೊಲೆಯತ್ನ, ರಾಡ್‌ನಿಂದ ಹಲ್ಲೆ

- Link: https://hosakannada.com/crime/uppinangadi-attempted-murder-of-a-young-woman-by-dragging-her-into-a-car-under-the-scorching-sun-attacked-with-a-rod/
- Published: 2026-11-06T13:31:06+00:00
- Author: ಹೊಸಕನ್ನಡ ನ್ಯೂಸ್

**ಸುಬ್ರಹ್ಮಣ್ಯ: ಯುವತಿಯೊಬ್ಬಳನ್ನು ಕಾರಿನಲ್ಲಿ ಕರೆದುಕೊಂಡು ಬಿಸಿಲೆ ಘಾಟಿ ಮಾರ್ಗದಲ್ಲಿ ಕೊಲೆ 
ಮಾಡುವ ಉದ್ದೇಶದಿಂದ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿದ ಘಟನೆ ನ.4 ರ ರಾತ್ರಿ ನಡೆದಿದೆ.**

Sponsored

ಕಡಬ ಕೊಣಾಜೆ ಗ್ರಾಮದ ಪ್ರಸಾದ್‌ ಎನ್ನುವಾತ ಹಲ್ಲೆ ಮಾಡಿದ ಆರೋಪಿ.

Advertisement

Advertisement

ಸಂತ್ರಸ್ತ ಯುವತಿ ಹಾಗೂ ಆರೋಪಿಯ ನಡುವೆ ಕಳೆದ ಮೂರು ವರ್ಷಗಳಿಂದ ಪರಿಚಯವಿತ್ತು ಎನ್ನಲಾಗಿದೆ. ನ.4
ರಂದು ಸಂಜೆ ಉಪ್ಪಿನಂಗಡಿಯಿಂದ ಯುವತಿಯನ್ನು ಕಾರಿನಲ್ಲಿ ಕರೆದೊಯ್ದ ಆರೋಪಿ, ಕುಲ್ಕುಂದ ಮಾರ್ಗವಾಗಿ
ಬಿಸಿಲೆ ಘಾಟಿಗೆ ತೆರಳಿದ್ದಾನೆ. ರಾತ್ರಿ ದಾರಿ ಮಧ್ಯೆ ಕೊಲೆ ಮಾಡುವ ಉದ್ದೇಶದಿಂದ ಕಬ್ಬಿಣದ ರಾಡ್‌ನಿಂದ
ಯುವತಿಯ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹಲ್ಲೆಯ ಪರಿಣಾಮ ಯುವತಿ ಪ್ರಜ್ಞೆ ತಪ್ಪಿದ್ದು, ನ.5 ರಂದು ಬೆಳಗ್ಗೆ ಪ್ರಜ್ಞೆ ಮರಳಿದ ನಂತರ ಸುಬ್ರಹ್ಮಣ್ಯಕ್ಕೆ
ಬಂದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಕುರಿತು ಸುಬ್ರಹ್ಮಣ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೃತ್ಯ ನಡೆದ ಸ್ಥಳ ಹಾಸನ 
ಜಿಲ್ಲೆಯ ವ್ಯಾಪ್ತಿಗೆ ಒಳಪಟ್ಟಿರುವ ಕಾರಣ ಪ್ರಕರಣವನ್ನು ಯೆಸಳೂರು ಪೊಲೀಸ್‌ ಠಾಣೆಗೆ ವರ್ಗಾಯಿಸಲಾಗಿದೆ.
ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮಕ್ಕಾಗಿ ಯೆಸಳೂರು ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

Advertisement
