# ಉಡುಪಿ: ಪ್ರೇಮ ಪ್ರಕರಣ, ಯುವತಿ ಮನೆಯವರಿಂದ ಹಿಗ್ಗಾಮುಗ್ಗಾ ಹಲ್ಲೆ, ಯುವಕ ನೇಣಿಗೆ ಶರಣು

- Link: https://hosakannada.com/crime/udupi-love-case-young-woman-brutally-attacked-by-family-members-young-man-seeks-police-protection/
- Published: 2026-11-01T02:50:41+00:00
- Author: ಹೊಸಕನ್ನಡ ನ್ಯೂಸ್

ಉಡುಪಿ: ಪ್ರೇಮ ಪ್ರಕರಣಕ್ಕೆ ಕುರಿತಂತೆ ಯುವತಿ ಮನೆಮಂದಿ ಯುವಕನ ಮೇಲೆ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದರಿಂದ
ಮನನೊಂದ ಯುವಕನೊಬ್ಬ ಚಿಕಿತ್ಸೆ ಪಡೆಯುತ್ತಿದ್ದ ಜಿಲ್ಲಾಸ್ಪತ್ರೆಯ ಶೌಚಾಲಯದಲ್ಲಿಯೇ ನೇಣು ಬಿಗಿದು 
ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ.

Sponsored

ಹಿಂದೂ ಸಂಘಟನೆಗಳಲ್ಲಿ ಸಕ್ರಿಯವಾಗಿದ್ದ ಯುವಕ ಪ್ರದೀಪ ಆತ್ಮಹತ್ಯೆಗೆ ಶರಣಾದ ದುರ್ದೈವಿ.

Advertisement

Advertisement

ಈ ಘಟನೆಗೆ ಸಂಬಂಧಪಟ್ಟಂತೆ ಯುವತಿ ಹಾಗೂ ಆಕೆಯ ಸಹೋದರರು ಸೇರಿ ಹತ್ತಕ್ಕೂ ಹೆಚ್ಚು ಮಂದಿಯ ವಿರುದ್ಧ
ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಕಳೆದ ಎಂಟು ವರ್ಷಗಳಿಂದ ಪ್ರದೀಪ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಅ.27 ರ ರಾತ್ರಿ
10 ಗಂಟೆಗೆ ಪ್ರದೀಪ್‌, ನಾಯರ್‌ ಕೋಡಿಯಲ್ಲಿರುವ ತನ್ನ ಮನೆಗೆ ನಡೆದುಕೊಂಡು ಹೋಗುವಾಗ ಯುವತಿಯ ಸಹೋದರರಾದ
ಪ್ರಸನ್ನ ಶೆಟ್ಟಿ, ಸುಧೀರ್‌ ಶೆಟ್ಟಿ, ಶೈಲೇಶ್‌ ಶೆಟ್ಟಿ, ಸನತ್‌, ಕೃಷ್ಣ, ಸುಜಯ್‌, ಹಾಗೂ ಇತರರು
ಮೂರು ಕಾರುಗಳಲ್ಲಿ ಬಂದು ಪ್ರದೀಪನನ್ನು ಬಲವಂತದಿಂದ ಯುವತಿ ಮನೆಗೆ ಕರೆದುಕೊಂಡು ಹೋಗಿ, ಪ್ರಸನ್ನ 
ಶೆಟ್ಟಿ ಎಂಬಾತ ಬೆತ್ತದಿಂದ ಪ್ರದೀಪನ ಕಾಲು ಮತ್ತು ಬೆನ್ನಿಗೆ ಬಾಸುಂಡೆ ಬರುವ ರೀತಿಯಲ್ಲಿ ಹಲ್ಲೆ 
ಮಾಡಲಾಗಿದೆ.

ಇತರೆ ಆರೋಪಿಗಳು ಮರದ ದೊಣ್ಣೆಯಿಂದ ಹೊಡೆದು ಗಾಯ ಮಾಡಿದ್ದಾರೆ. ವಿಷಯ ತಿಳಿದ ಪ್ರದೀಪನ ಸ್ನೇಹಿತರು
ಯುವತಿ ಮನೆಗೆ ಬಂದು, ಹಲ್ಲೆ ಮಾಡುವುದನ್ನು ನಿಲ್ಲಿಸಿದ್ದಾರೆ. ಅನಂತರ ತೀವ್ರ ಗಾಯಗೊಂಡಿದ್ದ ಪ್ರದೀಪನನ್ನು
ಅ.28 ರಂದು ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಈ ವೇಳೆ ಅಣ್ಣನ ಬಳಿ ಕಣ್ಣೀರಿಟ್ಟ ಪ್ರದೀಪ, ಯುವತಿ ಹಾಗೂ ಆಕೆಯ ಮನೆ ಮಂದಿ ತನ್ನ ಮೇಲೆ ನಡೆಸಿದ ಹಲ್ಲೆ,
ಬೆದರಿಕೆ ಕುರಿತು ಹೇಳಿಕೊಂಡಿದ್ದ. ಮಾನಸಿಕ ಹಿಂಸೆ, ಅವಮಾನದಿಂದ ನೊಂದ ಪ್ರದೀಪ ಅ.30ರಂದು ಸಂಜೆ ಆಸ್ಪತ್ರೆಗೆ
ಶೌಚಾಲಯದಲ್ಲಿ ನೇಣು ಬಿಗಿದು ಕೊನೆಯುಸಿರೆಳೆದಿದ್ದಾರೆ.

ಈ ಕುರಿತು ಪ್ರದೀಪ್‌ ಅವರ ಸಹೋದರ ನೀಡಿದ ದೂರಿನ ಮೇರೆಗೆ ಸಾವಿಗೆ ಪ್ರಚೋದನೆ ನೀಡಿದ್ದಾರೆಂದು ಶ್ರಾವ್ಯ
ಶೆಟ್ಟಿ, ಪ್ರಸನ್ನ ಶೆಟ್ಟಿ, ಸುಧೀರ್‌, ಶೈಲೇಶ್‌, ಶಶಾಂಕತ್‌, ಕೃಷ್ಣ, ಸುಜಯ್‌, ಸನತ್‌, ಹೊರ ರಾಜ್ಯದ
ಇಬ್ಬರು ಕಾರ್ಮಿಕರು ಹಾಗೂ ಇತರರ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
