# ಉಡುಪಿ: ಮೇಯಲು ಬಿಟ್ಟಿದ್ದ ದನ ಕಳವು ಪ್ರಕರಣ-ನಾಲ್ವರು ಅರೆಸ್ಟ್‌

- Link: https://hosakannada.com/crime/udupi-four-arrested-in-gold-theft-case-where-thieves-escaped-with-jewelry/
- Published: 2026-09-21T19:16:16+00:00
- Author: ಹೊಸಕನ್ನಡ ನ್ಯೂಸ್

ಉಡುಪಿ, ಸೆ.21: ಕಾಪು ತಾಲೂಕಿನ ಕಳತ್ತೂರು ಗ್ರಾಮದ ನಡಿಗುತ್ತು ಎಂಬಲ್ಲಿ ಮೇಯಲು ಬಿಟ್ಟಿದ್ದ ದನ 
ಕಳವು ಪ್ರಕರಣಕ್ಕೆ ಕುರಿತಂತೆ ನಾಲ್ವರು ಆರೋಪಿಗಳನ್ನು ಶಿರ್ವ ಪೊಲೀಸರು ಬಂಧನ ಮಾಡಿದ್ದಾರೆ. ಕೃತ್ಯಕ್ಕೆ
ಬಳಸಲಾಗಿದ್ದ ಟೆಂಪೋ ಹಾಗೂ ದನವೊಂದನ್ನು ಪೊಲೀಸರು ವಶಪಡಿಸಿದ್ದಾರೆ.

Sponsored

ತನಿಖೆಯ ಭಾಗವಾಗಿ ಕಳತ್ತೂರಿನ ಉಮ್ಮರಬ್ಬ (64) ಎಂಬಾತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು,
ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಪ್ರಕರಣದ ಬಳಿಕ ತಲೆಮರೆಸಿಕೊಂಡಿದ್ದ ಮೊಹಮ್ಮದ್‌ ಶರೀಫ್‌(
31), ಶಂಶುದ್ದೀನ್‌ (57) ಹಾಗೂ ಮೊಹಮ್ಮದ್‌ ಆಸೀರ್‌ (24) ಅವರನ್ನು ಕಾಪು ತಾಲೂಕಿನ ಕೊಪ್ಪಲಂಗಡಿ
ಬಳಿಯಲ್ಲಿ ವಾಹನ ಸಮೇತ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.

Advertisement

Advertisement

ಪ್ರಕರಣದ ಕುರಿತು ತನಿಖೆ ಮುಂದುವರಿದಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

Advertisement
