# ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಕ್ರೀಡಾಪಟು ಮನೆಗೆ ಕನ್ನ

- Link: https://hosakannada.com/crime/the-athlete-who-won-gold-at-the-moscow-olympics-has-returned-home/
- Published: 2026-11-04T03:59:03+00:00
- Author: ಹೊಸಕನ್ನಡ ನ್ಯೂಸ್

**ಚಿನ್ನದ ಪದಕ, ಬೆಳ್ಳಿ ಪದಕ ಕದ್ದ ಕಳ್ಳರು**

Sponsored

ಬೆಂಗಳೂರು: ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ದಿಗ್ಗಜ ಕ್ರೀಡಾಪಟು ಮಾಜಿ ಹಾಕಿ
ಆಟಗಾರ ಎಂ.ಎಂ. ಸೋಮಯ್ಯ ಮನೆಗೆ ಕನ್ನ ಹಾಕಿರುವ ಕಳ್ಳರು, ಕೇವಲ ಬೆಲೆಬಾಳುವ ವಸ್ತುಗಳಷ್ಟೇ ಅಲ್ಲದೆ
ಒಲಿಂಪಿಕ್ಸ್‌ನ ಗೋಲ್ಡ್ ಮತ್ತು ಸಿಲ್ವರ್ ಕಪ್‌ಗಳು ಹಾಗೂ ಪದಕಗಳನ್ನೇ ದೋಚಿ ಪರಾರಿಯಾಗಿರುವ ಆಘಾತಕಾರಿ
ಸುದ್ದಿ ವರದಿಯಾಗಿದೆ.

Advertisement

Advertisement

1980ರ ಒಲಿಂಪಿಕ್ಸ್​ನ ಹಾಕಿ ಕ್ರೀಡೆಯಲ್ಲಿ ಗಳಿಸಿದ್ದ ಚಿನ್ನದ ಪದಕ, 1982 ರಲ್ಲಿ ನವದೆಹಲಿ ಏಷ್ಯನ್
ಗೇಮ್ಸ್ ನಲ್ಲಿ ಗೆದ್ದಿದ್ದ ಬೆಳ್ಳಿ ಪದಕ, 1986 ಸಿಯೋಲ್ ಏಷ್ಯನ್ ಗೇಮ್ಸ್ ನಲ್ಲಿ ಗಳಿಸಿದ್ದ ಕಂಚಿನ
ಪದಕ‌, 1982 ಅಂಸ್ಟರ್ ಡ್ಯಾಮ್ ಚಾಂಫಿಯನ್ಸ್ ಟ್ರೋಫಿಲ್ಲಿ ಗೆದ್ದಿದ್ದ ಕಂಚಿನ ಪದಕ, ಬೆಳ್ಳಿ ಕಪ್ 
ಗಳು ಸೇರಿ ಬಳೆ, ಬೆಳ್ಳಿ ಚಮಚ, ಚಿನ್ನದ ನ್ಯಾಣಗಳ ಕಳ್ಳತನ ಮಾಡಿದ್ದಾರೆ.
​ದೇಶದ ಕ್ರೀಡಾ ಇತಿಹಾಸದ
ಹೆಮ್ಮೆಯ ಪ್ರತೀಕವಾಗಿರುವ ಈ ಅಮೂಲ್ಯ ಸ್ಮರಣಿಕೆಗಳು ಮತ್ತು ಕಪ್‌ಗಳು ಕಳುವಾಗಿರುವುದು ಕ್ರೀಡಾ ವಲಯದಲ್ಲಿ
ತೀವ್ರ ಆತಂಕ ಹಾಗೂ ಕಳಕಿಗೆ ಕಾರಣವಾಗಿದೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Advertisement
