# ಉದ್ಯೋಗ, ಮುಂಬಡ್ತಿ ಆಮಿಷ ಹಿಂದೂ ಯುವತಿಯರಿಗೆ ಲೈಂಗಿಕ ಕಿರುಕುಳ, ಗೋಮಾಂಸ ತಿನ್ನಿ, ನಮಾಜ್‌ ಮಾಡಿ: ʼಕಾರ್ಪೋರೇಟ್‌ ಜಿಹಾದ್‌ʼ ಸದ್ದು

- Link: https://hosakannada.com/crime/sexual-harassment-of-young-hindu-women-lured-by-jobs-and-promotions-urges-them-to-eat-beef-and-pray-corporate-jihad/
- Published: 2026-04-13T08:50:49+00:00
- Author: ಹೊಸಕನ್ನಡ ನ್ಯೂಸ್

ನಾಸಿಕ್‌, ಎ.13: ಮಹಾರಾಷ್ಟ್ರದ ನಾಸಿಕ್‌ನಲ್ಲಿ ಪ್ರತಿಷ್ಠಿತ ಐಟಿ ಕಂಪನಿಯೊಂದರ ಬಿಪಿಒ ವಿಭಾಗದಲ್ಲಿ
ಉದ್ಯೋಗ ಖಾತಿ ಮತ್ತು ಬಡ್ತಿಗಾಗಿ ಹಿಂದೂ ಮಕ್ಕಳ ಮೇಲೆ ಲೈಂಗಿಕ ಕಿರುಕುಳ, ಮತಾಂತರಕ್ಕೆ ಬಲವಂತ ಮತ್ತು
ಗೋಮಾಂಸ ಸೇವಿಸಲು ಒತ್ತಡ ಹೇರಿದ ಆರೋಪ ಕೇಳಿ ಬಂದಿರುವ ಕುರಿತು ವರದಿಯಾಗಿದೆ.

Sponsored

ಬಿಜೆಪಿ ನಾಯಕರು ಈ ಘಟನೆಯನ್ನು ʼಕಾರ್ಪೋರೇಟ್‌ ಜಿಹಾದ್‌ʼ ಎಂದು ಕರೆದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ
7 ಆರೋಪಿಗಳನ್ನು ಬಂಧನ ಮಾಡಲಾಗಿದೆ. ಮಹಿಳೆ ಕೂಡಾ ಈ ಆರೋಪದಲ್ಲಿ ಇರುವುದಾಗಿ ವರದಿಯಾಗಿದೆ.

Advertisement

Advertisement

ನಾಸಿಕ್‌ನ ಸಾತ್ಪುರದಲ್ಲಿ ಐಟಿ ಕಂಪನಿಗೆ ಸೇರಿದ ಬಿಪಿಒ ಕಚೇರಿಯಲ್ಲಿ ಮುಸ್ಲಿಂ ಮ್ಯಾನೇಜರ್‌ಗಳ ಅಡಿಯಲ್ಲಿ
ಹಿಂದೂ ಹುಡುಗಿಯರನ್ನು ನೇಮಕ ಮಾಡಲಾಗುತ್ತಿತ್ತು. ಸಂಬಳ ಹೆಚ್ಚಳ ಮತ್ತು ಉದ್ಯೋಗ ಭದ್ರತೆಯ ಆಮಿಷವೊಡ್ಡಿ
ಹಿಂದೂ ಯುವತಿಯರಿಗೆ ಲೈಂಗಿಕ ಕಿರುಕುಳ, ನಮಾಜ್‌ ಮಾಡುವಂತೆ, ಗೋಮಾಂಸ ತಿನ್ನುವಂತೆ ಬಲವಂತ ಮಾಡಲಾಗುತ್ತಿತ್ತು.

ಜೊತೆಗೆ ಹಿಂದೂ ಯುವತಿಯರ ಬಳಿ ಈಶ್ವರ ಲಿಂಗವನ್ನು ಜನನಾಂಗಕ್ಕೆ ಹೋಲಿಸಿ, ಕೃಷ್ಣನನ್ನು ಸ್ತ್ರೀಲೋಲ,
ದ್ರೌಪದಿ ವೇಶ್ಯೆ ಎಂದೆಲ್ಲಾ ಹೀಯಾಳಿಸಲಾಗುತ್ತಿತ್ತು ಎನ್ನಲಾಗಿದೆ. 2022ರಿಂದ 2026ರವರೆಗೆ ನಿರಂತರವಾಗಿ
ಈ ಕೃತ್ಯಗಳು ನಡೆದಿವೆ ಎಂದು ಮಾ.25ರಂದು ಯುವತಿಯೊಬ್ಬಳು ದೂರು ನೀಡಿದ್ದಳು. ನಂತರ ಪೊಲೀಸರು ಧೈರ್ಯವಾಗಿ
ಮುಂದೆ ಬಂದು ದೂರು ನೀಡುವಂತೆ ಮನವಿ ಮಾಡಿದ ಬಳಿಕ ಮತ್ತೆ 7 ಹುಡುಗಿಯರು ದೂರು ಸಲ್ಲಿಸಿದ್ದಾರೆ.

ಈ ಸಂಬಂಧ 9 ಎಫ್‌ಐಆರ್‌ಗಳು ದಾಖಲಾಗಿವೆ. ಆಸಿಫ್ ಅನ್ಸಾರಿ, ಶಫಿ ಶೇಖ್, ಶಾಹ್‌ರುಖ್ ಖುರೇಶಿ, ರಜಾ
ಮೆಮನ್, ತೌಸೀಫ್ ಅಟ್ಟಾರ್, ದಾನಿಶ್ ಶೇಖ್ ಮತ್ತು ಒಬ್ಬ ಮಹಿಳಾ ಎಚ್‌ಆರ್ ಮ್ಯಾನೇಜರ್ ಅನ್ನು ಬಂಧಿಸಲಾಗಿದೆ.
ಬಂಧಿತರ ಪೈಕಿ ಬಹುತೇಕರು ವಿವಾಹಿತರು ಎನ್ನಲಾಗಿದೆ.

Advertisement
