# Chitradurga : ಶಾಲಾ ಶಿಕ್ಷಕನೇ ಕಾಮುಕನಾದ – 16 ವರ್ಷದ ವಿದ್ಯಾರ್ಥಿನಿ ಮೇಲೆ ಶಾಲೆಯಲ್ಲೇ ಅತ್ಯಾಚಾರ, ಮುಚ್ಚಿಹಾಕಲು ಗರ್ಭಪಾತ!!

- Link: https://hosakannada.com/crime/school-teacher-turns-into-a-sex-worker-16-year-old-student-raped-in-school-had-an-abortion-to-cover-it-up/
- Published: 2026-04-10T20:01:08+00:00
- Author: ಹೊಸಕನ್ನಡ ನ್ಯೂಸ್

Chitradurga : ವಿದ್ಯೆ ಕಲಿಸಬೇಕಾದ ಗುರುವೇ ಕಾಮಪಿಶಾಚಿಯಾದ ಘನಘೋರ ಘಟನೆಯೊಂದು ಚಿತ್ರದುರ್ಗ ಜಿಲ್ಲೆಯ
ಚಳ್ಳಕೆರೆಯಲ್ಲಿ ಬೆಳಕಿಗೆ ಬಂದಿದ್ದು, ಶಾಲಾ ಶಿಕ್ಷಕನೊಬ್ಬ 16 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿಗೆ
ಪುಸಲಾಯಿಸಿ ಬಲತ್ಕಾರ ಎಸಗಿದ್ದಾನೆ. ಇದರ ಪರಿಣಾಮ ವಿದ್ಯಾರ್ಥಿನಿ ಗರ್ಭವತಿಯಾಗಿದ್ದು, ಪ್ರಕರಣ ತಡವಾಗಿ
ಬೆಳಕಿಗೆ ಬಂದಿದೆ.

Sponsored

ಚಳ್ಳಕೆರೆ ವ್ಯಾಪ್ತಿಯಲ್ಲಿ ಬರುವ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಗಣಿತ ಶಿಕ್ಷಕ
ಹೆಚ್.ಓ. ರಾಜಣ್ಣ ಎಂಬಾತನೇ ಈ ಕೃತ್ಯವೆಸಗಿದ ಆರೋಪಿ. ಶಾಲಾ ಕೊಠಡಿಯೊಳಗೆ ವಿದ್ಯಾರ್ಥಿನಿಯ ಮೇಲೆ ನಿರಂತರವಾಗಿ
ಲೈಂಗಿಕ ದೌರ್ಜನ್ಯ ಎಸಗಿದ್ದರಿಂದ ಬಾಲಕಿ ಗರ್ಭ ಧರಿಸಿದ್ದಳು. ಪೋಷಕರಿಗೆ ತಿಳಿದರೆ ಸಮಸ್ಯೆ ಎಂದರಿತು
ಆರೋಪಿ ಶಿಕ್ಷಕ ವಿದ್ಯಾರ್ಥಿನಿಗೆ ಗರ್ಭಪಾತ ಮಾಡಿಸಿದ್ದಾನೆಂದು ಆರೋಪಿಸಲಾಗಿದೆ.

Advertisement

Advertisement

ಬಾಲಕಿ ಗರ್ಭಿಣಿಯಾದ ವಿಷಯ ತಿಳಿಯುತ್ತಿದ್ದಂತೆಯೇ ವಿಷಯ ಮುಚ್ಚಿಹಾಕಲು ಆರೋಪಿ ಶಿಕ್ಷಕ ಯತ್ನಿಸಿದ್ದು,
ಮೊದಲೇ ಪ್ಲಾನ್ ಮಾಡಿಕೊಂಡಂತೆ ಚಳ್ಳಕೆರೆಯ ಲಕ್ಷ್ಮೀ ಶ್ರೀನಿವಾಸ ನರ್ಸಿಂಗ್ ಹೋಮ್‌ನ ವೈದ್ಯೆ ಶಂಕರಲಕ್ಷ್ಮೀ
ಎಂಬುವವರ ಬಳಿ ಈ ವಿಷಯ ಮಾತಾಡಿ ಬಾಲಕಿಗೆ ಅಕ್ರಮವಾಗಿ ಗರ್ಭಪಾತ ಮಾಡಿಸಿದ್ದಾನೆ. ಇದು ಬೆಳಕಿಗೆ ಬಂದ
ಕೂಡಲೇ ಚಳ್ಳಕೆರೆ ತಳಕು ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.

Advertisement
