# ಸಕಲೇಶಪುರ: ಮಂಗಳೂರು ಕಾಲೇಜಿನಲ್ಲಿ ಓದುತ್ತಿದ್ದ ಬಿ ಇ ವಿದ್ಯಾರ್ಥಿನಿ ಆತ್ಮಹತ್ಯೆ

- Link: https://hosakannada.com/crime/sakaleshpur-be-student-studying-in-mangalore-college-commits-suicide/
- Published: 2026-11-01T09:40:13+00:00
- Author: ಹೊಸಕನ್ನಡ ನ್ಯೂಸ್

**ಕೋಮು ಸೂಕ್ಷ್ಮ ಪ್ರಕರಣ, ಇನ್‌ಸ್ಟಾಗ್ರಾಂನಲ್ಲಿ ಖಾಸಗಿ ಫೋಟೋ ಹಾಕಿದ ನೌಶಾದ್**

Sponsored

ಹಾಸನ: ಖಾಸಗಿ ಫೋಟೋ ಇನ್‌ಸ್ಟಾಗ್ರಾಂಲ್ಲಿ ಹಾಕಿದ್ದರಿಂದ ಮನನೊಂದ ಎಂಜಿನಿಯರಿಂಗ್‌ ವಿದ್ಯಾರ್ಥಿನಿ
ಆತ್ಮಹತ್ಯೆ ಮಾಡಿಕೊಂಡ ಘಟನೆ ಸಕಲೇಶಪುರ ತಾಲೂಕು ಬೆಳಗೋಡು ಗ್ರಾಮದಲ್ಲಿ ನಡೆದಿದೆ.

Advertisement

Advertisement

ಮಂಗಳೂರಿನ ಕರಾವಳಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ 3ನೇ ವರ್ಷದ ಬಿ ಇ ವ್ಯಾಸಂಗ ಮಾಡುತ್ತಿದ್ದ ಹಿಮಾ
ಎಂಬಾಕೆ, ಅರೇಹಳ್ಳಿಯ ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಬ್ಯಾದನೆ ಗ್ರಾಮದ ನೌಶಾದ್‌ 
ಎಂಬಾತನ ಪರಿಚಯವಾಗಿದ್ದು, ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು.

ಮಂಗಳೂರಿನ ಕಾಲೇಜಿನಲ್ಲಿ ಕಲಿಯುತ್ತಿದ್ದಾಗ ನೌಶಾದ್‌ ಅಲ್ಲಿಗೆ ಹೋಗುತ್ತಿದ್ದ. ಇಬ್ಬರೂ ಎಲ್ಲಾ ಕಡೆ
ಸುತ್ತಾಡುತ್ತಿದ್ದು, ಇವರಿಬ್ಬರ ಪ್ರೀತಿಯ ವಿಷಯ ತಿಳಿದು ಮನೆ ಮಂದಿ ಈ ಪ್ರೀತಿಗೆ ವಿರೋಧ ಮಾಡಿದ್ದರು.
ಹಿಮಾ ಮನೆಯವರ ಮಾತು ಕೇಳಿ ನೌಶಾದ್‌ ಜೊತೆ ಬ್ರೇಕಪ್‌ ಮಾಡಿಕೊಂಡಿದ್ದು, ಇದರಿಂದ ನೌಶಾದ್‌ ಆಕೆ ಜೊತೆ
ಜಗಳ ಮಾಡಿದ್ದು, ಆಕೆ ಸಾಕಷ್ಟು ಬಾರಿ ಆತನಿಗೆ ಹೇಳಿದರೂ ಇಬ್ಬರೂ ಕೈ ಹಿಡಿದು ಸುತ್ತಾಡಿದ ಕೆಲವೊಂದು
ಫೋಟೋ ಇನ್‌ಸ್ಟಾಗ್ರಾಂನಲ್ಲಿ ಕಳೆದ ಆಗಸ್ಟ್‌ ತಿಂಗಳಿನಲ್ಲಿ ಹಾಕಿದ್ದನು. ಹಿಮಾ ಫೋಟೋ ಡಿಲೀಟ್‌ ಮಾಡು
ಎಂದು ಕೇಳಿಕೊಂಡರೂ ಸತ್ತಾಯಿಸಿದ ನೌಶಾದ್‌, ಇದರಿಂದ ಬೇಸರಗೊಂಡ ಹಿಮಾ ಕಳೆದ ಬುಧವಾರ ಮನೆಯಲ್ಲಿ ಯಾರೂ
ಇಲ್ಲದ ಸಂದರ್ಭದಲ್ಲಿ ಕಳೆನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದಳು.

ಆಕೆಯನ್ನು ಹಾಸನದ ಹಿಮ್ಸ್‌ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ 
ಬೆಳಗ್ಗೆ ಯುವತಿ ಮೃತಪಟ್ಟಿದ್ದಾಳೆ. ಇದೀಗ ಹಿಮಾಳ ಹೆತ್ತವಳು ತಮ್ಮ ಮಗಳ ಸಾವಿಗೆ ಕಾರಣನಾದ ನೌಶಾದ್‌ನ
ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಮೃತಳ ತಾಯಿ ಭವಿತಾ
ಪ್ರಕರಣ ದಾಖಲು ಮಾಡಿದ್ದಾರೆ.

ಹಿಂದೂ ಪರ ಸಂಘಟನೆಗಳು ವ್ಯಾಪಾಕ ಆಕ್ರೋಶ ವ್ಯಕ್ತಪಡಿಸಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸಿದೆ.

Advertisement
