# ಪುತ್ತೂರು: ಪ್ರಯಾಣಿಕನಿಂದ ಕೆಎಸ್‌ಆರ್‌ಟಿಸಿ ಬಸ್‌ ನಿರ್ವಾಹಕನಿಗೆ ನಿಂದನೆ ಆರೋಪ: ಪ್ರಕರಣ ದಾಖಲು

- Link: https://hosakannada.com/crime/puttur-passenger-accuses-ksrtc-bus-conductor-of-abuse-case-registered/
- Published: 2026-11-05T03:46:07+00:00
- Author: ಹೊಸಕನ್ನಡ ನ್ಯೂಸ್

**ಪುತ್ತೂರು: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ
ಬಸ್‌ ನಿರ್ವಾಹಕನಿಗೆ ಅವಾಚ್ಯ ಶಬ್ದಗಳ ನಿಂದನೆ ಮಾಡಿ, ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ 
ಘಟನೆ ಅ.28 ರಂದು ಮುಕ್ರಂಪಾಡಿ ಬಸ್‌ ನಿಲ್ದಾಣದ ಬಳಿ ನಡೆದಿರುವುದಾಗಿ ಪ್ರಕರಣ ದಾಖಲಾಗಿದೆ.**

Sponsored

ಪುತ್ತೂರು ಕೆಎಸ್‌ಆರ್‌ಟಿಸಿ ಘಟಕದಲ್ಲಿ ಕಳೆದ ಒಂದು ವರ್ಷದಿಂದ ಬಸ್ಸಿನ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದ
ಶಿವಶಂಕರ್‌ ಎಂಬುವವರು ಅ.28 ರಂದು ಪುತ್ತೂರು ಬಸ್‌ನಿಲ್ದಾಣದಿಂದ ಪ್ರಯಾಣಿಕರನ್ನು ಸುಳ್ಯಕ್ಕೆ ಕರೆದೊಯ್ಯುತ್ತಿದ್ದರು.
ಸಂಜೆ ಸಮಯಕ್ಕೆ ಮುಕ್ರಂಪಾಡಿ ಬಸ್‌ ನಿಲ್ದಾಣಕ್ಕೆ ಬಂದಾಗ ವ್ಯಕ್ತಿಯೊಬ್ಬ ಬಸ್ಸನ್ನು ಹತ್ತಿದ್ದು, 
ಆತ ಅಮಲಿನಲ್ಲಿದ್ದು, ಬಸ್ಸಿನಲ್ಲಿದ್ದ ಮಹಿಳೆಯರ ಸೇರಿ ಇತರ ಪ್ರಯಾಣಿಕರ ಮೇಲೆ ಬೀಳುತ್ತಿದ್ದ ಹಿನ್ನೆಲೆಯಲ್ಲಿ
ನಿರ್ವಾಹಕರು ಆತನನ್ನು ಬಸ್ಸಿನ ಕೊನೆಯ ಸೀಟಿನಲ್ಲಿ ಕುಳ್ಳಿರಿಸಿದ್ದರು. ನಂತರ ಟಿಕೆಟ್‌ ಕೇಳಿದಾಗ 
ವಾಗ್ವಾದ ಮಾಡಿ, ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Advertisement

Advertisement

ನಂತರ ಬಸ್‌ ಸುಳ್ಯ ಬಸ್‌ ನಿಲ್ದಾಣಕ್ಕೆ ಬಂದಾಗ ನಿರ್ವಾಹಕರು ಪೊಲೀಸ್‌ ಠಾಣೆಗೆ ಬಂದು ದೂರು ನೀಡಿದ್ದಾರೆ.
ಆರೋಪಿಯನ್ನು ಸುಳ್ಯ ಜಾಲ್ಸೂರಿನ ರಾಜೇಶ್‌ ಅಲಿಯಾಸ್‌ ರಾಜು ಎಂದು ಗುರುತಿಸಲಾಗಿದೆ. ನಿರ್ವಾಹಕ ಶಿವಶಂಕರ್‌
ಅವರು ದೂರು ನೀಡಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.

Advertisement
