# ಪುತ್ತೂರು: ಕಾಲೇಜು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ: ದೂರು ದಾಖಲು

- Link: https://hosakannada.com/crime/puttur-college-student-alleges-sexual-harassment-complaint-filed/
- Published: 2026-10-29T06:07:55+00:00
- Author: ಹೊಸಕನ್ನಡ ನ್ಯೂಸ್

ಪುತ್ತೂರು: ಜಮೀನಿನ ದಾಖಲೆಗಳನ್ನು ಸರಿಪಡಿಸಿ ಕೊಡುವುದಾಗಿ ನಂಬಿಸಿ ಯುವತಿಯನ್ನು ಮನೆಗೆ ಕರೆದುಕೊಂಡು
ಹೋಗಿ ಮಾನಭಂಗಕ್ಕೆ ಯತ್ನಿಸಿ, ಜೀವ ಬೆದರಿಕೆ ಹಾಕುವುದಾಗಿ ಆರೋಪಿಸಿ ಪುತ್ತೂರು ತಾಲೂಕಿನ ಬಲ್ನಾಡು
ನಿವಾಸಿ ಜಯರಾಮ ಎಂಬುವವರ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sponsored

ಮಂಗಳೂರಿನ ವೆನ್‌ಲಾಕ್‌ ಇನ್‌ಸ್ಟಿಟ್ಯೂಟ್‌ ಆಫ್‌ ಪ್ಯಾರಾಮೆಡಿಕಲ್‌ ಸೈನ್ಸ್‌ ಕಾಲೇಜಿನಲ್ಲಿ ವ್ಯಾಸಂಗ
ಮಾಡುತ್ತಿರುವ ಯುವತಿ, ಮಂಗಳೂರಿಗೆ ಪ್ರಯಾಣ ಮಾಡಲು ತೊಂದರೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಜೂನ್‌ 
ತಿಂಗಳಿನಿಂದ ಕೊಟ್ಟಾರಚೌಕಿಯಲ್ಲಿರುವ ಸಹಪಾಠಿ ಮಮತಾ ಅವರ ಮನೆಯಲ್ಲಿ ಪೇಯಿಂಗ್‌ ಗೆಸ್ಟ್‌ ಆಗಿ ವಾಸವಾಗಿದ್ದರು.
ಈ ವೇಳೆ ಯುವತಿ ತನ್ನ ಮನೆಯ ಜಮೀನಿನ ದಾಖಲೆಗಳಲ್ಲಿರುವ ಸಮಸ್ಯೆ ಕುರಿತು ಮಮತಾ ಅವರಲ್ಲಿ ತಿಳಿಸಿದ್ದರು.
ಮಮತಾ ಅವರ ಪತಿ ಜಯರಾಮ ದಾಖಲೆಗಳನ್ನು ಸರಿಪಡಿಸುವುದಾಗಿ ಭರವಸೆ ನೀಡಿದ್ದರು ಎನ್ನಲಾಗಿದೆ.

Advertisement

Advertisement

ಅ.17 ರಂದು ಯುವತಿ ಮನೆಯ ದಾಖಲೆಗಳನ್ನು ಪಡೆದುಕೊಂಡು ಪುತ್ತೂರು ಶಾಸಕರ ಕಚೇರಿಗೆ ಹೋಗಿದ್ದು, ಅಂದು
ಶಾಸಕರು ಇಲ್ಲದ ಕಾರಣ ಮಂಗಳೂರಿಗೆ ವಾಪಸಾಗಿದ್ದರು.

ಆ.23 ರಂದು ಯುವತಿಗೆ ಕರೆ ಮಾಡಿದ ಜಯರಾಮ ಮರುದಿನ ಒಬ್ಬರೇ ಪುತ್ತೂರಿಗೆ ಬರುವಂತೆ ತಿಳಿಸಿದ್ದರು ಎನ್ನಲಾಗಿದೆ.
ಆ.24 ರಂದು ಪುತ್ತೂರಿಗೆ ಬಂದ ಯುವತಿಯನ್ನು ಶಾಸಕರ ಕಚೇರಿಯಲ್ಲಿ ಶಾಸಕರು ಇಲ್ಲದಿದ್ದುರಿಂದ ನೆಲ್ಲಿಗುಂಡಿಯಲ್ಲಿರುವ
ತಮ್ಮ ಮನೆಗೆ ಸ್ಕೂಟಿಯಲ್ಲಿ ಕರೆದೊಯ್ದಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಬಾಗಿಲು ಹಾಕಿ ಯುವತಿಯ ಮಾನಭಂಗಕ್ಕೆ ಯತ್ನ ಮಾಡಿದ್ದಾರೆ ಎಂದು
ಆರೋಪಿಸಲಾಗಿದೆ. ಈ ವೇಳೆ ಯುವತಿ ಬೊಬ್ಬೆ ಹಾಕಿದ್ದು, ಅಲ್ಲಿಂದ ತಪ್ಪಿಸಿಕೊಂಡು ಹೊರಬಂದಿದ್ದಾರೆ ಎನ್ನಲಾಗಿದೆ.
ಘಟನೆಯ ಕುರಿತು ಯಾರಿಗಾದರೂ ತಿಳಿಸಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಆರೋಪಿಸಿ ಬೆದರಿಕೆ ಹಾಕಿದ್ದಾಗಿ
ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಇದಾದ ನಂತರವೂ ಮಂಗಳೂರಿನಲ್ಲಿರುವ ಮನೆಯಲ್ಲಿ ಪದೇ ಪದೇ ಕಿರುಕುಳ
ನೀಡಿ ತನ್ನ ಬೇಡಿಕೆಗೆ ಒಪ್ಪುವಂತೆ ಒತ್ತಡ ಹೇರುತ್ತಿದ್ದರು ಎಂದು ಯುವತಿ ಆರೋಪ ಮಾಡಿದ್ದಾರೆ.

Advertisement
