# ಪುತ್ತೂರು: ಬಂಟ್ವಾಳದ ಅಬ್ದುಲ್‌ ರಹಿಮಾನ್‌ ಕೊಲೆ ಪ್ರಕರಣ, ಎಂಟು ಆರೋಪಿಗಳಿಗೆ ಜಾಮೀನು!

- Link: https://hosakannada.com/crime/puttur-abdul-rahiman-murder-case-in-bantwal-bail-for-eight-accused/
- Published: 2026-09-17T09:40:14+00:00
- Author: ಹೊಸಕನ್ನಡ ನ್ಯೂಸ್

ಪುತ್ತೂರು: ಕಳೆದ ವರ್ಷದ ಮೇ 27 ರಂದು ನಡೆದಿದ್ದ ಅಬ್ದುಲ್‌ ರಹಿಮಾನ್‌ ಕೊಲೆ ಪ್ರಕರಣಕ್ಕೆ ಕುರಿತಂತೆ
6 ರಿಂದ 13 ನೇ ಆರೋಪಿಯಾಗಿರುವ ಎಂಟು ಮಂದಿಗೆ ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ಹಾಗೂ 
ವಿಶೇಷ (ಕೋಕಾ) ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

Sponsored

ಭರತ್‌ ಕುಮ್ಡೇಲು, ಅಭಿನ್‌ ರೈ, ತೇಜಾಕ್ಷ, ಶಿವಪ್ರಸಾದ್‌ ತುಂಬೆ, ಪ್ರದೀಪ, ಶಾಹಿತ್‌, ಸಚಿನ್‌ ಹಾಗೂ
ರಂಜಿತ್‌ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌
ನ್ಯಾಯಾಧೀಶೆ ಉಷಾರಾಣಿ ಅವರು ವಾದ-ಪ್ರತಿವಾದ ಆಲಿಸಿ ಜಾಮೀನು ಮಂಜೂರು ಮಾಡಿ ಆದೇಶಿಸಿದ್ದಾರೆ.

Advertisement

Advertisement

Advertisement
