# Trissur: ಆಸ್ತಿ ವಿವಾದ, ತಂದೆಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಆತ್ಮಹತ್ಯೆ ಬೆದರಿಕೆ ಹಾಕಿದ ಮಗ

- Link: https://hosakannada.com/crime/property-dispute-son-attacks-father-with-machete-and-threatens-to-commit-suicide/
- Published: 2025-10-05T12:40:44+00:00
- Author: ಹೊಸಕನ್ನಡ ನ್ಯೂಸ್

Trissur: ಮಗನೋರ್ವ ತಂದೆಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಘಟನೆ ನಡೆದಿದ್ದು, ನಂತರ ತಾನೂ ಆತ್ಮಹತ್ಯೆ
ಮಾಡುವುದಾಗಿ ಬೆದರಿಕೆ ಹಾಕಿದ ಘಟನೆ ಕೇರಳದ ತ್ರಿಶೂರ್‌ನಲ್ಲಿ ನಡೆದಿದೆ.

Sponsored

ಆಸ್ತಿವಿಚಾರಕ್ಕೆ ಸಂಬಂಧಪಟ್ಟಂತೆ ತಂದೆ-ಮಗನ ಮಧ್ಯೆ ಆಗಾಗ ವಾಗ್ವಾದ ನಡೆಯುತ್ತಿತ್ತು. ತಂದೆಯ ಮೇಲೆ
ಮಚ್ಚಿನಿಂದ ದಾಳಿ ನಡೆಸಿ, ಮನೆಯ ಬಾಗಿಲು ಹಾಕಿಕೊಂಡು ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ
ಹಾಕಿದ್ದಾನೆ. ಪೊಲೀಸರು ಆತನನ್ನು 3 ಗಂಟೆಯ ನಂತರ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

Advertisement

ಬಾಡಿಗೆ ಮನೆಯಲ್ಲಿ ವಾಸವಿರುವ ಇವರು ಈ ಘಟನೆ 1.30 ರ ಸುಮಾರಿಗೆ ನಡೆದಿದೆ. ತಂದೆ ಶಿವನ್‌ ಆಟೋಚಾಲಕರಾಗಿದ್ದು,
ಆಸ್ತಿ ದಾಖಲೆ ಕುರಿತು ವಿಷಯ ಚರ್ಚೆ ಮಾಡಲು ತನ್ನ ಹೆಂಡತಿ ಜೊತೆ ಮಗನ ಮನೆಗೆ ಬಂದಿದ್ದರು. ವಿಷ್ಣು
ತಾನು ಕಾಗದಗಳನ್ನು ಬಾವಿಗೆ ಎಸೆದಿದ್ದೇನೆ ಎಂದು ಹೇಳಿದ್ದರಿಂದ ಈ ಗಲಾಟೆ ನಡೆದಿದೆ. ಮಾತಿನ ಚಕಮಕಿ
ನಂತರ ಹಿಂಸಾತ್ಮಕವಾಗಿ ಮಾರ್ಪಾಡಾಗಿದೆ.

ಪೊಲೀಸರು ಸ್ಥಳಕ್ಕ ಆಗಮಿಸಿದ್ದು, ಮಗ ಮನೆಯ ಮೊದಲ ಮಹಡಿಯಲ್ಲಿ ಬೀಗ ಹಾಕಿ ಆತ್ಮಹತ್ಯೆಗೆ ಯತ್ನ ಮಾಡುವುದಾಗಿ
ಬೆದರಿಕೆ ಹಾಕಿದ್ದು, 5.30 ರ ಸುಮಾರಿಗೆ ಅವನನ್ನು ವಶಕ್ಕೆ ಪಡೆಯಲಾಗಿದೆ.

[Caste Census: ಕೇಂದ್ರ ಸಚಿವ ವಿ ಸೋಮಣ್ಣ ಮನೆಗೆ ಬಂದ 9 ಮಂದಿ ಗಣತಿದಾರರು; ಸಚಿವರಿಂದ ಕ್ಲಾಸ್‌](https://hosakannada.com/2025/10/05/9-census-takers-visit-union-minister-v-somannas-house-minister-gives-class/)

ವಿಷ್ಣು ತನ್ನ ಹೆತ್ತವರಿಂದ ದೂರ ಇದ್ದು, ಮಾಟ ಮಂತ್ರಗಳನ್ನು ಮಾಡುತ್ತಿದ್ದ ಎಂದು ಸ್ಥಳೀಯರು ಆರೋಪ
ಮಾಡಿದ್ದು, ಆತನನ್ನು ಪರೀಕ್ಷೆಗೆಂದು ತ್ರಿಶೂರ್‌ ವೈದ್ಯಕೀಯ ಕಾಲೇಜಿಗೆ ಕರೆದುಕೊಂಡು ಹೋಗಿದ್ದಾರೆ.

Advertisement
