# ಮುಸ್ಲಿಂ ವಿದ್ಯಾರ್ಥಿಗೆ ʼಟೆರರಿಸ್ಟ್‌ʼ ಎಂದು ನಿಂದನೆ ಮಾಡಿದ ಪ್ರೊಫೆಸರ್‌

- Link: https://hosakannada.com/crime/professor-who-abused-muslim-student-by-calling-him-a-terrorist/
- Published: 2026-03-28T13:44:25+00:00
- Author: ಹೊಸಕನ್ನಡ ನ್ಯೂಸ್

ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರೊಬ್ಬರು ಕ್ಯಾಂಪಸ್‌ನಲ್ಲಿ 
ಪಾಠ ಮಾಡುತ್ತಿದ್ದ ವೇಳೆ ಕೋಪಗೊಂಡ ಪ್ರೊಫೆಸರ್‌ ಡಾ.ಮುರಳಿಧರ ದೇಶಪಾಂಡೆ ತರಗತಿಯಲ್ಲಿದ್ದ ಮುಸ್ಲಿಂ
ವಿದ್ಯಾರ್ಥಿಯನ್ನು ʼಭಯೋತ್ಪಾದಕʼ ಎಂದು ಕರೆದು ಅವಮಾನ ಮಾಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಈ
ಘಟನೆ ಎರಡು ದಿನಗಳ ಹಿಂದೆ ನಡೆದಿದೆ.

Sponsored

ಪಾಠದ ಮಧ್ಯದಲ್ಲಿ ಮಕ್ಕಳ ಗಲಾಟೆಯಿಂದ ಪ್ರೊಫೆಸರ್‌ ಕೋಪಗೊಂಡಿದ್ದು, ನೀವೆಲ್ಲಾ ಭಯೋತ್ಪಾದಕರು ಎಂದು
ನಿಂದನೆ ಮಾಡಿದ್ದಾರೆ. ಈ ವೇಳೆ ತರಗತಿಯಲ್ಲಿ ಕುಳಿತಿದ್ದ ವಿದ್ಯಾರ್ಥಿಗಳನ್ನು ಇದನ್ನು ತಮ್ಮ ಮೊಬೈಲ್‌ನಲ್ಲಿ
ಈ ಘಟನೆಯನ್ನು ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು,
ಆಕ್ರೋಶಕ್ಕೆ ಕಾರಣವಾಗಿದೆ.

Advertisement

Advertisement

ನ್ಯಾಷನಲ್‌ ಸ್ಟೂಡೆಂಟ್ಸ್‌ ಯೂನಿಯನ್‌ ಆಫ್‌ ಇಂಡಿಯಾ ಈ ಕುರಿತು ದೂರನ್ನು ದಾಖಲು ಮಾಡಲಾಗಿದೆ. ಪ್ರಕರಣದ
ಗಂಭೀರತೆಯನ್ನು ಗಮನಿಸಿದ ವಿಶ್ವವಿದ್ಯಾಲಯದ ಆಡಳಿತವು ಕೂಡಲೇ ಪ್ರೊಫೆಸರನ್ನು ಅಮಾನತು ಮಾಡಿದೆ.

Advertisement
