# ಶಾಲಾ ಕಾರ್ಯಕ್ರಮದಲ್ಲಿ ಅಶ್ಲೀಲ ನೃತ್ಯ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಎಂಟ್ರಿ

- Link: https://hosakannada.com/crime/obscene-dance-at-school-program-national-human-rights-commission-enters/
- Published: 2026-03-17T16:41:48+00:00
- Author: ಹೊಸಕನ್ನಡ ನ್ಯೂಸ್

ಶಾಲೆಯೊಂದರಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಜನಪ್ರಿಯ ಚಲನಚಿತ್ರದ ಹಾಡಿಗೆ
ʼಟವೆಲ್‌ʼ ಬಳಸಿ ನೃತ್ಯ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಇದಕ್ಕೆ
ಭಾರೀ ಟೀಕೆಗಳು ವ್ಯಕ್ತವಾಗಿತ್ತು. ಇದೀಗ ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ರಾಷ್ಟ್ರೀಯ
ಮಾನವ ಹಕ್ಕುಗಳ ಆಯೋಗವು ಪಶ್ಚಿಮ ಬಂಗಾಳ ರಾಜ್ಯ ಸರಕಾರವು ನೋಟಿಸ್‌ ಜಾರಿ ಮಾಡಿದೆ.

Sponsored

ಶಾಲಾ ಆವರಣದಲ್ಲಿ ಅಸಭ್ಯ ಚಟುವಟಿಕೆ ನಡೆಸಲು ಹೇಗೆ ಸಾಧ್ಯ ಎನ್ನುವುದರ ಕುರಿತು ಆಯೋಗ ವಿವರಣೆಗೆ ಮುಂದಾಗಿದೆ.
ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಶಿಸ್ತುಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಗಿದೆ.

Advertisement

Advertisement

Advertisement
