# ನಕ್ಸಲ್‌ ಲತಾ ಕಡಬ ನ್ಯಾಯಾಲಯಕ್ಕೆ ಹಾಜರು

- Link: https://hosakannada.com/crime/naxal-lata-kadaba-appeared-in-court/
- Published: 2026-11-04T03:18:00+00:00
- Author: ಹೊಸಕನ್ನಡ ನ್ಯೂಸ್

ಕಡಬ: ನಕ್ಸಲ್‌, ಎಡಪಂಥೀಯ ಮಾವೋವಾದಿ ನಾಯಕಿ ಮುಂಡಗಾರು ಲತಾ (ಶ್ರೀಲತಾ) ಸರಕಾರಕ್ಕೆ ಶರಣಾಗತಿಯಾಗಿದ್ದು,
ಪ್ರಕರಣವೊಂದರ ವಿಚಾರಣೆಗೆ ಕಡಬ ನ್ಯಾಯಾಲಯಕ್ಕೆ ನ.3 ರ ಮಂಗಳವಾರ ಹಾಜರುಪಡಿಸಲಾಯಿತು.

Sponsored

ಲತಾ 2025 ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಎದುರು ಸರಕಾರಕ್ಕೆ ಶರಣಾಗತಿಯಾಗಿದ್ದರೂ, ಅವರ 
ಮೇಲೆ ಅನೇಕ ಪ್ರಕರಣ ದಾಖಲಾಗಿರುವ ಕಾರಣ ರಾಜ್ಯದ ವಿವಿಧ ಠಾಣೆಗಳಲ್ಲಿ ವಿಚಾರಣೆ ಹಾಗೂ ಪ್ರಕರಣ ಎಸಗಿರುವ
ಸ್ಥಳಗಳ ಮಹಜರು ಪ್ರಕ್ರಿಯೆ ನಡೆಯುತ್ತಿದೆ. 2015 ರಲ್ಲಿ ಶಿರಾಡಿ ಗ್ರಾಮದ ಮಿತ್ತಮಜಲು ಸುರೇಶ ಹಾಗೂ
ಲೀಲಾ ಅವರ ಮನೆಗೆ ಲತಾ ಅವರ ನಕ್ಸಲರ ತಂಡ ರಾತ್ರಿ ಬಂದು ಮನೆಮಂದಿಯನ್ನು ಬೆದರಿಸಿ ಊಟ ಮಾಡಿರುವುದಲ್ಲದೆ
ಮನೆಯಿಂದ ಅಕ್ಕಿ ಸಾಮಾನು ಪಡೆದು ಹೋಗಿದ್ದರು.

Advertisement

Advertisement

ಈ ಕುರಿತು ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಡಬ ತಾಲೂಕಿನಲ್ಲಿ ಪ್ರಕರಣ ನಡೆದಿರುವುದರಿಂದ
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಲತಾಳನ್ನು ಬಿಗಿ ಪೊಲೀಸ್‌ ಬಂದೋಬಸ್ತಿನಲ್ಲಿ ಉಪ್ಪಿನಂಗಡಿ
ಠಾಣೆಗೆ ಕರೆತಂದು ಕಡಬ ಸಂಚಾರಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು. ಸಂಜೆಯ ವೇಳೆಗೆ
ಕಡಬ ಸರಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿ ಉಪ್ಪಿನಂಗಡಿ ಠಾಣೆಗೆ ಕರೆದೊಯ್ಯಲಾಗಿದೆ.

Advertisement
