# Minor Girl Assaulted: ಮನೆಗೆ ಹೋಗುತ್ತಿದ್ದ ಬಾಲಕಿಯೊಂದಿಗೆ ವ್ಯಕ್ತಿಯಿಂದ ಅನುಚಿತ ವರ್ತನೆ : ಬಾಲಕಿ ಕಿರುಚಾಟಕ್ಕೆ ಹೆದರಿ ದುಷ್ಕರ್ಮಿ ಪರಾರಿ : ವಿಡಿಯೋ ವೈರಲ್

- Link: https://hosakannada.com/crime/minor-girl-assaulted-misbehavior-by-a-man-with-a-girl-who-was-going-home/
- Published: 2024-05-18T07:41:22+00:00
- Author: ಹೊಸಕನ್ನಡ ನ್ಯೂಸ್

Minor girl Assaulted UP: ಮನೆಗೆ ತೆರಳುತ್ತಿದ್ದ ಬಾಲಕಿಯೊಂದಿಗೆ ವ್ಯಕ್ತಿಯೊಬ್ಬ ಅನುಚಿತವಾಗಿ
ವರ್ತಿಸಿದ್ದು, ಆಕೆಯನ್ನು ಮದ್ಯದಂಗಡಿ ಬಳಿ ನಿಲ್ಲಿಸಿ ಕಿರುಕುಳ ನೀಡಲು ಪ್ರಯತ್ನಿಸಿದ್ದಾನೆ.(Minor
Girl Assaulted) ಆದರೆ ಬಾಲಕಿಯು ಕಿರುಚಾಟದಿಂದ ಸ್ಥಳೀಯರು ಜಾಗೃತರಾಗುತ್ತಿದ್ದಂತೆ ದುಷ್ಕರ್ಮಿ 
ಅಲ್ಲಿಂದ ಕಾಲ್ಕಿತ್ತಿದ್ದಾನೆ.

Sponsored

[https://x.com/haidarpur/status/1791376853242143198?t=ojqbAgilwpkrBGHl7GLrZw&s=09](https://x.com/haidarpur/status/1791376853242143198?t=ojqbAgilwpkrBGHl7GLrZw&s=09)

Advertisement

Advertisement

ಅಸಲಿಗೆ ಈ ದುಷ್ಕೃತ್ಯ ನಡೆದಿರುವುದು ಉತ್ತರ ಪ್ರದೇಶದ ಕಾನ್ಪುರದಲ್ಲಿ. ಸಿಸಿಟಿವಿಯಲ್ಲಿ(CCTV ) 
ದಾಖಲಾಗಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ(social media)ವೈರಲ್ ಆಗಿದೆ.

ಇದನ್ನೂ ಓದಿ: [Garlic Peels Benifits: ಬೆಳ್ಳುಳ್ಳಿ ಸಿಪ್ಪೆಯನ್ನು ಎಸೆಯಬೇಡಿ, ಇದರಿಂದ ಇದೆ ಹಲವಾರು ಪ್ರಯೋಜನಗಳು!](https://hosakannada.com/2024/05/18/is-it-healthy-to-eat-garlic-peel/)

ಈ ತಿಂಗಳ 14 ರಂದು ರಾತ್ರಿ 8 ಗಂಟೆ ಸುಮಾರಿಗೆ ರಾವತ್‌ಪುರ ಪ್ರದೇಶದಲ್ಲಿ ಬಾಲಕಿಯೊಬ್ಬಳು ಮನೆಗೆ 
ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದಳು. ಅಷ್ಟರಲ್ಲಿ ಮದ್ಯದಂಗಡಿಯಲ್ಲಿದ್ದ ವ್ಯಕ್ತಿಯೊಬ್ಬ ಆಕೆಯನ್ನು
ಹಿಂಬಾಲಿಸಿದ. ಬಳಿಕ ಸ್ವಲ್ಪ ಮುಂದೆ ಹೋದ ಬಾಲಕಿಯನ್ನು ಹಿಡಿದು ಕಿರುಕುಳ ನೀಡಿದ್ದಾನೆ(Minor Girl
Assaulted) , ಅಷ್ಟರಲ್ಲಿ ಆಕೆಯು ಜೋರಾಗಿ ಕಿರುಚಾಟ ಮಾಡಿದ್ದು, ಇದರಿಂದ ಹೆದರಿದ ದುಷ್ಕರ್ಮಿ ಬಾಲಕಿಯನ್ನು
ಬಿಟ್ಟು ಓಡಿ ಹೋಗಿದ್ದಾನೆ.

ಇದನ್ನೂ ಓದಿ: [Char Dham Yatra: ಚಾರ್ ಧಾಮ್ ಯಾತ್ರಾರ್ಥಿಗಳಿಗೆ ಸಂತಸದ ಸುದ್ದಿ : ಇನ್ನಷ್ಟು ದಿನ ವಿಐಪಿ ದರ್ಶನ ನಿಷಿದ್ಧ : ಸೂಚನೆ ಹೊರಡಿಸಿದ ಉತ್ತರಖಂಡ ಸರ್ಕಾರ](https://hosakannada.com/2024/05/18/good-news-for-char-dham-pilgrims-uttarakhand-govt-issues-notice-prohibiting-vip-darshan-for-more-days/)

ಈ ಮಧ್ಯೆ ಆ ಪ್ರದೇಶದ ಸಿಸಿಟಿವಿಯಲ್ಲಿ ದಾಖಲಾಗಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ಆಗಿದೆ. ಇದು ಪೊಲೀಸರ ಗಮನಕ್ಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ನಾಲ್ವರು ಶಂಕಿತರನ್ನು ಪೊಲೀಸರು ವಶಕ್ಕೆ
ಪಡೆದು ವಿಚಾರಣೆ ನಡೆಸಿದ್ದಾರೆ. ನಿಜವಾದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Advertisement
