# ಅಪ್ರಾಪ್ತ ವಯಸ್ಕ ವಿದ್ಯಾರ್ಥಿನಿಯ ಅಪಹರಣ, ಆರೋಪಿ ಬಂಧನ

- Link: https://hosakannada.com/crime/minor-female-student-kidnapped-accused-arrested/
- Published: 2026-10-30T03:16:19+00:00
- Author: ಹೊಸಕನ್ನಡ ನ್ಯೂಸ್

**ಉಳ್ಳಾಲ: ಶಾಲೆಗೆ ತೆರಳಿದ್ದ ಬಾಗಲಕೋಟೆ ಮೂಲದ ಅಪ್ರಾಪ್ತ ವಯಸ್ಕ ವಿದ್ಯಾರ್ಥಿನಿಯನ್ನು ಕಾರಿನಲ್ಲಿ
ಅಪಹರಣ ಮಾಡಿದ ಬಾಗಲಕೋಟೆ ಮೂಲದ ಆರೋಪಿಯನ್ನು ಬಂಧನ ಮಾಡಿದ ಉಳ್ಳಾಲ ಪೊಲೀಸರು ಪೋಕ್ಸೋ ಕಾಯ್ದೆಯಡಿ 
ಪ್ರಕರಣ ದಾಖಲು ಮಾಡಿದ್ದಾರೆ.**

Sponsored

ಒಂಭತ್ತನೇ ತರಗತಿಯ ಪರಿಶಿಷ್ಟ ಜಾತಿಯ ಅಪ್ರಾಪ್ತ ವಯಸ್ಕ ವಿದ್ಯಾರ್ಥಿನಿಯನ್ನು ಅಪಹರಿಸಿದ ಪ್ರಕರಣಕ್ಕೆ
ಸಂಬಂಧಪಟ್ಟಂತೆ ಬಾಗಲಕೋಟೆ ಮೂಲದ ಉಳ್ಳಾಲ ಭಾಗದಲ್ಲಿ ಗಾರೆ ಕೆಲಸ ಮಾಡುತ್ತಿರುವ ಗೂಡಾಸಾಬ್‌ ಯಾನೆ 
ಆಶಿಫ್‌ (23) ಬಂಧಿತ ಆರೋಪಿ.

Advertisement

Advertisement

ವಾರದ ಹಿಂದೆ ಬಾಲಕಿ ತನ್ನನ್ನು ಬಾಗಲಕೋಟೆ ಮೂಲದ ಪರಿಚಯಸ್ಥ ಗೂಡಾಸಾಬ್‌ ಯಾನೆ ಆಶಿಫ್‌ ಶಾಲೆಯ ಬಳಿ
ಹಿಂಬಾಲಿಸಿಕೊಂಡು ಬಂದು ಮಾತನಾಡಿಸುತ್ತಿದ್ದ ವಿಷಯವನ್ನು ತಾಯಿಯಲ್ಲಿ ತಿಳಿಸಿದ್ದು, ಪುತ್ರಿ ನಾಪತ್ತೆ
ಇದೇ ವ್ಯಕ್ತಿ ಕಾರಣ ಇರಬಹುದು ಎಂದು ಪ್ರಕರಣ ದಾಖಲಿಸಿದ್ದರು. ಪೊಲೀಸರು ಕಾರ್ಯಾಚರಣೆ ನಡೆಸಿ, ಸೋಮೇಶ್ವರದಲ್ಲಿ
ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿ, ಬಾಲಕಿಯ ರಕ್ಷಣೆ ಮಾಡಿದ್ದಾರೆ.

Advertisement
