# ಮಂಗಳೂರು: ಮೂಡಬಿದಿರೆ ಇನ್ಸ್‌ಪೆಕ್ಟರ್‌ ಸಂದೇಶ್‌ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಸುಳ್ಳು: ಕಮಿಷನರ್‌ ರೆಡ್ಡಿ ಸ್ಪಷ್ಟನೆ

- Link: https://hosakannada.com/crime/mangaluru-sexual-assault-allegations-against-moodbidri-inspector-sandesh-are-false-commissioner-reddy-clarifies/
- Published: 2026-03-20T19:18:16+00:00
- Author: ಹೊಸಕನ್ನಡ ನ್ಯೂಸ್

ಮಂಗಳೂರು: ಮೂಡಬಿದಿರೆ ಇನ್ಸ್‌ಪೆಕ್ಟರ್‌ ಸಂದೇಶ್‌ ವಿರುದ್ಧ ಇಬ್ಬರು ಮಹಿಳೆಯರು ಮಾಡಿದ್ದ ಲೈಂಗಿಕ
ಕಿರುಕುಳದ ಆರೋಪಗಳು ಸಂಪೂರ್ಣ ಸುಳ್ಳು ಮತ್ತು ದುರುದ್ದೇಶಪೂರಿತ ಎಂದು ಮಂಗಳೂರು ಪೊಲೀಸ್‌ ಕಮಿಷನರ್‌
ಸುಧೀರ್‌ ರೆಡ್ಡಿ ತಿಳಿಸಿರುವುದಾಗಿ ವರದಿಯಾಗಿದೆ.

Sponsored

ಪ್ರಾಥಮಿಕ ತನಿಖೆಯಲ್ಲಿ ಸುಮತಿ ನಾಯಕ್‌ ಮತ್ತು ಅವಿತಾ ಮಿನೇಜಸ್‌ ಅವರು ನೀಡಿದ್ದ ದೂರುಗಳಲ್ಲಿ ಯಾವುದೇ
ಸತ್ಯಾಂಶವಿಲ್ಲ ಎಂದು ದೃಢಪಟ್ಟಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

Advertisement

Advertisement

ತನಿಖಾ ವರದಿಯ ಬಗ್ಗೆ ಮಾಹಿತಿ ನೀಡಿದ ಕಮಿಷನರ್, “ದೂರುದಾರರಾದ ಸುಮತಿ ಮತ್ತು ಅವಿತಾ ಅವರು ಅಧಿಕಾರಿಯನ್ನು
ಸಂಕಷ್ಟಕ್ಕೆ ಸಿಲುಕಿಸುವ ಉದ್ದೇಶದಿಂದಲೇ ಈ ಸುಳ್ಳು ದೂರು ನೀಡಿದ್ದರು. ಅವರ ಆರೋಪಗಳಿಗೆ ಪೂರಕವಾದ
ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ” ಎಂದರು. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ
ಆಡಿಯೋ ಮತ್ತು ವಿಡಿಯೋಗಳಲ್ಲಿರುವ ಮಹಿಳೆಯರು ಅವುಗಳು ತಮ್ಮದೇ ಎಂದು ಒಪ್ಪಿಕೊಂಡಿದ್ದರೂ. ಅಧಿಕಾರಿಯ
ವಿರುದ್ಧ ಅಧಿಕೃತ ದೂರು ನೀಡಲು ನಿರಾಕರಿಸಿದ್ದಾರೆ. ಈ ವಿಡಿಯೋಗಳನ್ನು ವಿನೋದ್ ಪಿಂಟೋ ಎಂಬುವವರು 
ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಬಳಸಿಕೊಂಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.

ಪ್ರಸಕ್ತ ಲೈಂಗಿಕ ಕಿರುಕುಳದ ಆರೋಪಗಳು ಸುಳ್ಳಾಗಿದ್ದರೂ, ವೈರಲ್ ಆಗಿರುವ ಆಡಿಯೋ ಮತ್ತು ವಿಡಿಯೋಗಳಲ್ಲಿ
ಕಂಡುಬಂದಿರುವ ಇನ್ ಸ್ಪೆಕ್ಟರ್ ಅವರ ನೈಜ ದುರ್ನಡತೆಯನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಅಧಿಕಾರಿಯ
ಹಳೆಯ ತಪ್ಪುಗಳ ಹಿನ್ನೆಲೆಯಲ್ಲಿ ಈಗಾಗಲೇ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗಿದೆ ಎಂದು ಕಮಿಷನರ್‌
ಮಾಹಿತಿ ನೀಡಿದರು.

ಪೊಲೀಸ್‌ ಠಾಣೆಗೆ ಬರುವ ಮಹಿಳೆಯರ ರಕ್ಷಣೆ ಮತ್ತು ಅವರೊಂದಿಗೆ ಗೌರವಯುತವಾಗಿ ವರ್ತಿಸುವುದು ಇಲಾಖೆಯ
ಆದ್ಯ ಕರ್ತವ್ಯ. ಈ ಘಟನೆಯಿಂದ ಇಲಾಖೆಯು ಪಾಠ ಕಲಿತಿದ್ದು, ಇಂತಹ ವರ್ತನೆಗಳು ಮರುಕಳಿಸದಂತೆ ಕ್ರಮ 
ವಹಿಸಲಾಗುವುದು. ಅದೇ ವೇಳೆ, ವೈಯಕ್ತಿಕ ದ್ವೇಷ ಅಥವಾ ಪ್ರತಿಷ್ಠೆಗಾಗಿ ಪೊಲೀಸರ ವಿರುದ್ಧ ಸುಳ್ಳು 
ದೂರು ನೀಡಿ ತನಿಖೆಯ ದಾರಿ ತಪ್ಪಿಸುವವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸುಧೀರ್
ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

Advertisement
