# ಮಂಗಳೂರು; ಕೆಎಸ್‌ಆರ್‌ಟಿಸಿ ಬಸ್‌ ಚಾಲಕನಿಗೆ ಹಲ್ಲೆ, ಕಾರು ಚಾಲಕನ ವಿರುದ್ಧ ದೂರು ದಾಖಲು

- Link: https://hosakannada.com/crime/mangaluru-ksrtc-bus-driver-assaulted-complaint-filed-against-car-driver/
- Published: 2026-05-08T11:37:39+00:00
- Author: ಹೊಸಕನ್ನಡ ನ್ಯೂಸ್

ಮಂಗಳೂರು; ಕಾರು ಚಾಲಕನೊಬ್ಬ ಸರಕಾರಿ ಬಸ್‌ ಚಾಲಕನ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಅವಾಚ್ಯ ಶಬ್ದಗಳಿಂದ
ನಿಂದನೆ ಮಾಡಿ ಹಲ್ಲೆಗೈದ ಕುರಿತು ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sponsored

ಮಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದ ಸರಕಾರಿ ಬಸ್‌ನ ಚಾಲಕ ಪಿ.ಜಯರಾಮ ಎಂಬುವವರಿಗೆ ರಾಷ್ಟ್ರೀಯ
ಹೆದ್ದಾರಿ 73 ರ ವಳಚ್ಚಿಲ್‌ ಜಂಕ್ಷನ್‌ನಲ್ಲಿ ಸೈಡ್‌ ಕೊಡುವ ವಿಚಾರಕ್ಕೆ ಹಲ್ಲೆ ಮಾಡಲಾಗಿದೆ ಎಂದು
ಆರೋಪಿಸಲಾಗಿದೆ. ಈ ಕುರಿತು ಕಂಕನಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.

Advertisement

Advertisement

Advertisement
