# ಮಂಗಳೂರು: ಚಿನ್ನದ ವ್ಯಾಪಾರಿ ದರೋಡೆ ಪ್ರಕರಣ,14 ಆರೋಪಿಗಳ ಫೋಟೋ ಬಿಡುಗಡೆ; ಪತ್ತೆಗೆ ಸಹಕಾರ ಕೋರಿದ ಮಂಗಳೂರು ಪೊಲೀಸರು

- Link: https://hosakannada.com/crime/mangaluru-gold-merchant-robbery-case-photos-of-14-accused-released-mangaluru-police-seek-public-assistance-in-tracing-thems/
- Published: 2026-07-06T14:39:34+00:00
- Author: ಹೊಸಕನ್ನಡ ನ್ಯೂಸ್

ಮಂಗಳೂರು, ಜು.6: ಚಿನ್ನದ ವ್ಯಾಪಾರಿಯನ್ನು ದರೋಡೆಗೈದ ಪ್ರಕರಣದಲ್ಲಿ ಮಂಗಳೂರು ಪೊಲೀಸರು ಆರೋಪಿಗಳ
ಗುರುತು ಪತ್ತೆಹಚ್ಚಿದ್ದು, ಇವರುಗಳ ಬಂಧನಕ್ಕಾಗಿ ಕೇರಳ ಮತ್ತು ಕೊಡಗಿನಲ್ಲಿ ತನಿಖೆ ನಡೆಯುತ್ತಿದೆ.
ಆರೋಪಿಗಳ ಫೋಟೋ ಬಿಡುಗಡೆ ಮಾಡಲಾಗಿದ್ದು, ಇವರ ಪತ್ತೆಗಾಗಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. 
ಆರೋಪಿಗಳ ಕುರಿತು ಮಾಹಿತಿ ನೀಡುವವರಿಗೆ ಬಹುಮಾನ ನೀಡಲಾಗುವುದು. ಅವರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು
ಎಂದು ತಿಳಿಸಿದ್ದಾರೆ.

Sponsored

ಪಾಂಡಿಚೇರಿ ಮೂಲದ ಶಿಬಿನ್‌ ಗಂಗಾಧರನ್‌ ದರೋಡೆ ಪ್ರಕರಣದ ಮಾಸ್ಟರ್‌ ಮೈಂಡ್‌ ಎನ್ನಲಾಗಿದ್ದು, ಆತನದ್ದು
ಸೇರಿ ಒಟ್ಟು 14 ಮಂದಿ ಆರೋಪಿಗಳ ಫೋಟೋಗಳ ಬಿಡುಗಡೆ ಮಾಡಲಾಗಿದೆ. ಕೇರಳದ ವಿವಿಧ ಜಿಲ್ಲೆಗಳಿಗೆ ಸೇರಿದ
ಶ್ರೀರಾಗ್‌, ಅತುಲ್‌, ಮಿಥುನ್‌ಲಾಲ್‌, ಅಜೀರ್‌ ತರಾಯಿಲ್‌, ವೈಶಾಕ್‌, ಅಸೀರ್‌ ಪಯ್ಯನ್ನೂರ್‌, ಪ್ರಣವ್‌,
ವಿಜಿಲ್‌ ಅಂಜರಕಂಡಿ, ಕೊಡಗಿನ ಉಬೈದ್‌, ಫಿರೋಜ್‌, ಮೊಯ್ದು ಅಬ್ಬಾಸ್‌, ಜಿಯಾದ್‌, ಜಮೀರ್‌ ಅಲಿಕಾ
ಎಂಬುವವರು ಆರೋಪಿಗಳು ಎಂದು ಗುರುತಿಸಲಾಗಿದೆ.

Advertisement

Advertisement

ಜೂನ್‌ 29 ರ ನಸುಕಿನಲ್ಲಿ ಮಂಗಳೂರಿನ ಬೈಕಂಪಾಡಿ ಬಳಿಯ ಹೆದ್ದಾರಿ ಮಧ್ಯೆ ಕಾರನ್ನು ಅಡ್ಡಗಟ್ಟಿ ದರೋಡೆ
ಮಾಡಲಾದ ಘಟನೆ ನಡೆದಿತ್ತು. ಪಯ್ಯನ್ನೂರು ಮೂಲದ ಚಿನ್ನದ ವ್ಯಾಪಾರಿ ವಿಕಾಸ್‌ ಮೇಲೆ ಹಲ್ಲೆ ಮಾಡಲಾಗಿದ್ದು
180 ಗ್ರಾಂ ಚಿನ್ನ ಸಹಿತ 23 ಲಕ್ಷ ಮೌಲ್ಯದ ವಸ್ತುಗಳ ದರೋಡೆ ಮಾಡಲಾಗಿತ್ತು. ಈ ಕೃತ್ಯದಲ್ಲಿ ಭಾಗಿಯಾದ
ಆರೋಪಿಗಳಿಗೆ ಸಹಕರಿಸಿದ ಮೂವರನ್ನು ಪಣಂಬೂರು ಠಾಣೆ ಪೊಲೀಸರು ಬಂಧನ ಮಾಡಿದ್ದಾರೆ.

ತಲಶ್ಶೇರಿ ಮೂಲದ ನಿಮಿಲ್‌, ಮಡಿಕೇರಿ ಮೂಲದ ಇರ್ಷಾದ್‌ ಮತ್ತು ಮುಸ್ತಾಫ ಎಂಬುವವರ ಬಂಧನ ಮಾಡಲಾಗಿದೆ.

Advertisement
