# ಕಾಪು: ಪ್ರವಾಸಿಗರಿಗೆ ಮಾದಕ ವಸ್ತು ಮಾರಾಟ: ಇಬ್ಬರು ಆರೋಪಿಗಳ ಬಂಧನ

- Link: https://hosakannada.com/crime/kapu-two-accused-arrested-for-selling-drugs-to-tourists/
- Published: 2026-10-28T06:54:51+00:00
- Author: ಹೊಸಕನ್ನಡ ನ್ಯೂಸ್

ಕಾಪು: ಪ್ರವಾಸಿಗರನ್ನು ಗುರಿಯಾಗಿಸಿ ಮಾದಕ ವಸ್ತು ಮಾರಾಟ ಮಾಡುತಿದ್ದ ಇಬ್ಬರು ಆರೋಪಿಗಳನ್ನು ಮಂಗಳವಾರ
ಕಾಪು ಪೊಲೀಸರು ಬಂಧನ ಮಾಡಿದ್ದಾರೆ. ಆರೋಪಿಗಳಿಂದ ಅಪಾರ ಪ್ರಮಾಣದ ಗಾಂಜಾ ಮತ್ತು ಇತರ ವಸ್ತುಗಳನ್ನು
ವಶಕ್ಕೆ ಪಡೆದಿದ್ದಾರೆ.

Sponsored

ಆರೀಫ್‌ (38) ಮತ್ತು ಅಕೀಫ್‌ (34) ಬಂಧಿತ ಆರೋಪಿಗಳು.

Advertisement

Advertisement

ಪೊಲೀಸರು ಖಚಿತ ಮಾಹಿತಿಯ ಮೇರೆಗೆ ಉಳಿಯಾರಗೋಳಿ ಯಾರ್ಡ್‌ ಬೀಚ್‌ ಪ್ರದೇಶದಲ್ಲಿ ದಾಳಿ ಮಾಡಿದ್ದು, 
ಈ ವೇಳೆ ತಮ್ಮ ಸ್ವಂತ ಲಾಭಕ್ಕಾಗಿ ಇಟ್ಟುಕೊಂಡಿದ್ದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದರು.

ಬಂಧಿತ ಆರೋಪಿಗಳಿಂದ ಸುಮಾರು 2,85,000 ರೂ. ಮೌಲ್ಯದ 5.710ಕಿ. ಗ್ರಾಂ ತೂಕದ ಗಾಂಜಾ, 225 ರೂ. ನಗದು
ಹಣ, ಎರಡು ಮೊಬೈಲ್‌ ಫೋನ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

Advertisement
