# ಕಡಬ: ಕೊಲೆಗೆ ಯತ್ನ ಆರೋಪ ದೂರು..!!

- Link: https://hosakannada.com/crime/kadaba-murder-attempt-case-filed/
- Published: 2026-11-08T14:35:03+00:00
- Author: ಹೊಸಕನ್ನಡ ನ್ಯೂಸ್

ಕಡಬ: ಕಡಬ ಪೇಟೆಯಲ್ಲಿದ್ದ ಸಮಯ ಪರಿಚಯದ ಆತೂರು ನಿವಾಸಿ ರಾಜಿಕ್ ಹಾಗೂ ಆತನ ಸ್ನೇಹಿತ ನವಾಜ್ ಎಂಬವರು
ಆ್ಯಕ್ಟಿವಾದಲ್ಲಿ ಬಂದು ತಡೆದು ನಿಲ್ಲಿಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಕೋಡಿಂಬಾಳ ಗ್ರಾಮದ
ಮಾಲೇಶ್ವರ ಕುಂಡೋಳಿ ನಿವಾಸಿ ಶಾಫಿ(56ವ.) ಎಂಬವರು ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.

Sponsored

ನಾನು ಈ ಹಿಂದೆ ರಾಜಿಕ್‌ನ ಸ್ನೇಹಿತ ಕೊಯಿಲ ನಿವಾಸಿ ಜಕಾರಿಯರವರಿಗೆ ಉಪ್ಪಿನಂಗಡಿಯ ರವಿ ಭಟ್ ಎಂಬವರ
ದೂರವಾಣಿ ನಂಬ್ರ ನೀಡಿದ್ದು ಅದರಂತೆ ಅವರೊಳಗೆ ವ್ಯವಹಾರಗಳು ನಡೆದು ಜಕಾರಿಯರವರಿಗೆ ನಷ್ಟವುಂಟಾಗಿದೆ
ಎಂಬ ವಿಚಾರವನ್ನು ರಾಜಿಕ್ ಹೇಳುತ್ತಿದ್ದ ವೇಳೆ ಬೈಕ್‌ನ ಹಿಂಬದಿಸವಾರ ನವಾಝ್ ಇಳಿದು ಬಂದು ನನ್ನ ಕುತ್ತಿಗೆಯನ್ನು
ಗಟ್ಟಿಯಾಗಿ ಒತ್ತಿ ಹಿಡಿದು ಉಸಿರುಗಟ್ಟಿಸಿ ಕೊಲ್ಲಲು ಪ್ರಯತ್ನಿಸಿರುತ್ತಾನೆ

Advertisement

Advertisement

ಆ ಸಮಯ ರಾಜಿಕ್ ಬೈಕ್‌ನಿಂದ ಇಳಿದು ಬೈಕ್‌ನ ಸೀಟ್‌ನ ಕೆಳಗಿನಿಂದ ಚೂರಿಯನ್ನು ತೆಗೆದುಕೊಂಡು ನಿನ್ನನ್ನು
ಇವತ್ತು ಕೊಲ್ಲದೇ ಬಿಡುವುದಿಲ್ಲ ಎಂದು ಹೇಳಿ ಚೂರಿಯಿಂದ ತಿವಿಯಲು ಬಂದಾಗ ನಾನು ತಪ್ಪಿಸಿಕೊಂಡಿದ್ದೇನೆ.
ಈ ಸಮಯ ಅಲ್ಲಿಯೇ ಇದ್ದ ಪರಿಚಯದ ಕಡಬದ ಶರೀಫ್ ಮತ್ತು ಹರೀಶ್ ರವರು ಓಡಿ ಬಂದಿದ್ದು, ಈ ವೇಳೆ ನವಾಜ್‌ನು
ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆಯೊಡ್ಡಿ ಆ್ಯಕ್ಟಿವಾ ಬೈಕ್‌ನಲ್ಲಿ ಪರಾರಿಯಾಗಿರುತ್ತಾರೆ ಎಂದು 
ಶಾಫಿಯವರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Advertisement
