# ನರ್ಸಿಂಗ್‌ ಹೋಂನ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿ, ಕಿಟಕಿಯಿಂದ ಎಸೆದ ಅಪ್ರಾಪ್ತ ಬಾಲಕಿ

- Link: https://hosakannada.com/crime/gave-birth-to-a-baby-in-the-bathroom-of-a-nursing-home-underage-girl-thrown-out-of-the-window/
- Published: 2026-11-08T05:28:44+00:00
- Author: ಹೊಸಕನ್ನಡ ನ್ಯೂಸ್

ಹೊಟ್ಟೆನೋವೆಂದು ನರ್ಸಿಂಗ್‌ ಹೋಂಗೆ ದಾಖಲಾಗಿದ್ದ 16 ವರ್ಷದ ಬಾಲಕಿಯೊಬ್ಬಳು ಶೌಚಾಲಯದಲ್ಲಿಯೇ ಮಗುವಿನ
ಜನ್ಮ ನೀಡಿದ್ದಾಳೆ. ನಂತರ ನವಜಾತವನ್ನು ಕಿಟಕಿಯಿಂದ ಹೊರಗೆ ಎಸೆದ ಪರಿಣಾಮ ಮಗು ಮೃತಪಟ್ಟಿರುವ ಘಟನೆ
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ನಡೆದಿದೆ.

Sponsored

ಶುಕ್ರವಾರ ತಡರಾತ್ರಿ ಬಾಲಕಿ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದಾಳೆ ಎಂದು ಕುಟುಂಬದವರು ಆಕೆಯನ್ನು
ಉತ್ತರಪಾರ ಪುರಸಭೆ ವ್ಯಾಪ್ತಿಯ ನರ್ಸಿಂಗ್‌ ಹೋಂಗೆ ಕರೆತಂದಿದ್ದು, ಬಾಲಕಿ ಗರ್ಭಿಣಿ ವಿಚಾರ ಆಗಿರುವ
ಕುಟುಂಬದವರಿಗೆ ತಿಳಿದಿರಲಿಲ್ಲ ಎಂದು ತಾಯಿ ಪೊಲೀಸರಿಗೆ ತಿಳಿಸಿದ್ದಾರೆ.

Advertisement

Advertisement

ಶನಿವಾರ ಬಾಲಕಿಗೆ ಬೆಳಗ್ಗೆ ಹೊಟ್ಟೆ ನೋವು ಹೆಚ್ಚಾಗಿದ್ದು, ಶೌಚಾಲಯಕ್ಕೆ ತೆರಳಿದ್ದು, ಅಲ್ಲಿ ಯಾರ
ಸಹಾಯವೂ ಇಲ್ಲದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ನಂತರ ಶೌಚಾಲಯದ ಕಿಟಕಿಯಿಂದ ಮಗುವನ್ನು ಹೊರಗೆ
ಎಸೆದಿದ್ದಾಳೆ ಎಂದು ನರ್ಸಿಂಗ್‌ ಹೋಂ ಆಡಳಿತ ಮಂಡಳಿ ತಿಳಿಸಿದೆ.

ದಾರಿಹೋಕರು ಮಗುವೊಂದು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು, ಕೂಡಲೇ ಅಧಿಕಾರಿಗಳಿಗೆ ಮಾಹಿತಿ
ನೀಡಿದ್ದಾರೆ. ನರ್ಸಿಂಗ್‌ ಹೋಂ ನ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮಗುವನ್ನು ಒಳಗೆ ಕರೆತಂದಿದ್ದು, 
ಅಷ್ಟರಲ್ಲಿ ಮಗು ಸಾವಿಗೀಡಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Advertisement
