# ಮುಂಬೈನಿಂದ ವೃದ್ಧನನ್ನು ಕರೆತಂದು ಉಡುಪಿ ರೈಲು ನಿಲ್ದಾಣದಲ್ಲಿ ಬಿಟ್ಟು ಹೋದ ಕುಟುಂಬ

- Link: https://hosakannada.com/crime/family-brings-elderly-man-from-mumbai-and-leaves-him-at-udupi-railway-station/
- Published: 2026-07-16T12:15:01+00:00
- Author: ಹೊಸಕನ್ನಡ ನ್ಯೂಸ್

ಮಣಿಪಾಲ: ಮುಂಬೈಯ ವೃದ್ಧರೊಬ್ಬರನ್ನು ಸ್ವತಃ ಹೆಂಡತಿ ಮಕ್ಕಳೇ ಉಡುಪಿಗೆ ಕರೆದುಕೊಂಡು ಬಂದು ಬಿಟ್ಟು
ಹೋದ ಪ್ರಕರಣ ಮಣಿಪಾಲ ಠಾಣೆಯಲ್ಲಿ ದಾಖಲಾಗಿದೆ.

Sponsored

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ 67 ವರ್ಷದ ವೃದ್ಧರೊಬ್ಬರನ್ನು ಮುಂಬೈನಿಂದ ರೈಲಿನಲ್ಲಿ ಕರೆದುಕೊಂಡು
ಬಂದು ಉಡುಪಿಯ ಇಂದ್ರಾಳಿ ರೈಲು ನಿಲ್ದಾಣದ ಬಳಿ ಬಲವಂತವಾಗಿ ಇಳಿಸಿ ಬಿಟ್ಟು ಹೋಗಿದ್ದಾರೆ. ಮಣಿಪಾಲದವರಾದ
ಜಗದೀಶ್‌ ಶೆಟ್ಟಿ (67) ಎಂಬುವವರು ಮುಂಬೈನ ಪನ್ವೇಲ್‌ನ ತಮ್ಮ ಕುಟುಂಬದ ಜೊತೆ ವಾಸವಾಗಿದ್ದರು.

Advertisement

Advertisement

ದೂರುದಾರರಾದ ಜಗದೀಶ್ ಶೆಟ್ಟಿ ಅವರು ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಇವರ ಪತ್ನಿ
ಸುನಂದಾ, ಪುತ್ರಿಯರಾದ ಶ್ವೇತಾ, ನೀತಾ ಮತ್ತು ಮಗ ನಿತಿನ್ ಸೇರಿ ಜುಲೈ 11 ರಂದು ಜಗದೀಶ್ ಶೆಟ್ಟಿ 
ಅವರನ್ನು ಮುಂಬೈ ಬಳಿಯ ಪನ್ವೇಲ್‌ನಿಂದ ಬಲವಂತವಾಗಿ ರೈಲಿನಲ್ಲಿ ಉಡುಪಿಗೆ ಕರೆದುಕೊಂಡು ಬಂದಿದ್ದರು.

ಜುಲೈ 12 ರಂದು ಬೆಳಗ್ಗೆ ಸುಮಾರು 8.30 ರ ಸುಮಾರಿಗೆ, ಶಿವಳ್ಳಿ ಗ್ರಾಮದ ಇಂದ್ರಾಳಿ ರೈಲು ನಿಲ್ದಾಣದ
ಬಳಿ ಎಲ್ಲರೂ ಆಟೋರಿಕ್ಷಾದಲ್ಲಿ ಬಂದು, ಜಗದೀಶ್‌ ಶೆಟ್ಟಿ ಅವರನ್ನು ಆಟೋದಿಂದ ಬಲವಂತವಾಗಿ ಕೆಳಗೆ ಇಳಿಸಿದ
ಕುಟುಂಬದವರು ನಿನ್ನ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ ಎಂದು ನಿರ್ದಾಕ್ಷಿಣ್ಯವಾಗಿ ಹೇಳಿ ಅಲ್ಲಿಂದ
ಹೊರಟು ಹೋಗಿದ್ದಾರೆ.

ಜಗದೀಶ್‌ ಶೆಟ್ಟಿ ಅವರು ಹೇಗೋ ಮಣಿಪಾಲ ಠಾಣೆಗೆ ತಲುಪಿ ತಮ್ಮ ಹೆಂಡತಿ ಮಕ್ಕಳ ವಿರುದ್ಧ ಗಂಭೀರ ದೂರನ್ನು
ನೀಡಿದ್ದಾರೆ. ದಿನಕ್ಕೆ ಒಂದು ಹೊತ್ತು ಸರಿಯಾಗಿ ಊಟ ತಿಂಡಿ ನೀಡದೆ ಸತಾಯಿಸುತ್ತಿದ್ದರು. ಮಾನಸಿಕ,
ದೈಹಿಕ ಹಿಂಸೆ ನೀಡಿ, ಒಂಟಿಯಾಗಿ ಕೈ ಬಿಟ್ಟು ಹೋಗಿದ್ದಾರೆ ಎಂದು ಶೆಟ್ಟಿ ಅವರು ತಮ್ಮ ದೂರಿನಲ್ಲಿ 
ಅಳಲು ತೋಡಿಕೊಂಡಿದ್ದಾರೆ.

ಕೂಡಲೇ ಮಣಿಪಾಲ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿದ್ದಾರೆ. ಪೊಲೀಸರು ಪತ್ನಿ ಸುನಂದಾ, ಪುತ್ರಿಯರಾದ
ಶ್ವೇತಾ, ನೀತಾ ಮತ್ತು ಪುತ್ರ ನಿತಿನ್‌ ವಿರುದ್ಧ ಕಠಿಣ ಪ್ರಕರ ದಾಖಲು ಮಾಡಲಾಗಿದೆ.

ಸದ್ಯ ಪೊಲೀಸರು ವೃದ್ಧರಿಗೆ ಸೂಕ್ತ ಆಸರೆ ಕಲ್ಪಿಸಿದ್ದು, ತಲೆಮರೆಸಿಕೊಂಡಿರುವ ಕುಟುಂಬದವರ ಪತ್ತೆಗೆ
ಹೆಚ್ಚಿನ ತನಿಖೆಯನ್ನು ಮುಂದುವರೆಸಿದ್ದಾರೆ.

Advertisement
