# Puttur: ಈಶ್ವರಮಂಗಲದಲ್ಲಿ ಗುಂಡಿನ ದಾಳಿ? ಗೋ ಪೂಜೆಯ ದಿನವೇ ಗೋ ಕಳ್ಳರಿಗೆ ಪೊಲೀಸರ ಶಾಕ್‌?

- Link: https://hosakannada.com/crime/eshwaramangala-news-puttur-cow-attackers/
- Published: 2025-10-22T08:45:24+00:00
- Author: ಹೊಸಕನ್ನಡ ನ್ಯೂಸ್

Puttur: ಅಕ್ರಮ ಗೋಸಾಗಾಟ ನಡೆಸುತ್ತಿದ್ದ ದುಷ್ಕರ್ಮಿಗಳಿಗೆ ಪೊಲೀಸರು ಬೆಳ್ಳಂಬೆಳಗ್ಗೆ ಶಾಕ್‌ ನೀಡಿದ್ದಾರೆ.
ಪುತ್ತೂರು ತಾಲೂಕಿನ ಈಶ್ವರಮಂಗಲ ಸಮೀಪದ ಬೆಳ್ಳಿಚಡವು ಎಂಬಲ್ಲಿ ಗೋಕಳ್ಳರ ಮೇಲೆ ಪೊಲೀಸರು ಗುಂಡಿನ 
ದಾಳಿ ನಡೆಸಿರುವ ಕುರಿತು ವರದಿಯಾಗಿದೆ. ಈ ಘಟನೆಯಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿದ್ದು, ಇನ್ನೋರ್ವ
ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು,
ಈತ ದೇಲಂಪಾಡಿ ನಿವಾಸಿ ಎಂದು ಗುರುತಿಸಲಾಗಿದೆ.

Sponsored

ವರದಿ ಪ್ರಕಾರ, ಗೋವುಗಳನ್ನು ಕದ್ದು ಸಾಗಿಸಲಾಗುತ್ತಿದ್ದು, ಈ ಕುರಿತು ಖಚಿತ ಮಾಹಿತಿಯನ್ನು ಪೊಲೀಸರ
ತಂಡ ಬುಧವಾರ ಬೆಳಗಿನ ಜಾವ ಬೆಳ್ಳಿಚಡವು ಪ್ರದೇಶಕ್ಕ ತೆರಳಿತ್ತು. ಈ ವೇಳೆ ಅಕ್ರಮವಾಗಿ ಗೋವುಗಳನ್ನು
ಸಾಗಿಸುತ್ತಿದ್ದ ಲಾರಿಯೊಂದು ಪತ್ತೆಯಾಗಿದೆ. ಪೊಲೀಸರು ಅದನ್ನು ಹಿಂಬಾಲಿಸಲು ಆರಂಭ ಮಾಡಿದ್ದಾರೆ. 
ಪೊಲೀಸರಿಂದ ತಪ್ಪಿಸಿಕೊಳ್ಳಲು ಲಾರಿ ಚಾಲಕ, ಪೊಲೀಸ್‌ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ ಎಂದು ವರದಿಯಾಗಿದೆ.
ಪೊಲೀಸರ ಮೇಲೂ ದಾಳಿಯನ್ನು ನಡೆಸಿದ್ದಾನೆ ಎನ್ನಲಾಗಿದೆ.

Advertisement

Advertisement

ಈ ಸಂದರ್ಭದಲ್ಲಿ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದು, ಲಾರಿ ಚಾಲಕನಿಗೆ ತಗುಲಿ ಗಾಯವಾಗಿರುವುದಾಗಿ
ವರದಿಯಾಗಿದೆ. ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ. ಪೊಲೀಸ್‌ ಇಲಾಖೆ ಈ ಕುರಿತು
ಯಾವುದೇ ಮಾಹಿತಿಯನ್ನು ಅಧಿಕೃತವಾಗಿ ಒದಗಿಸಿಲ್ಲ ಎನ್ನುವುದಾಗಿಯೂ ವರದಿಯಾಗಿದೆ.

Advertisement
