# ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ ರ್ಯಾಗಿಂಗ್‌ ಪ್ರಕರಣ ದಾಖಲು

- Link: https://hosakannada.com/crime/deralkatte-ragging-case-registered-in-medical-college/
- Published: 2026-10-28T06:38:40+00:00
- Author: ಹೊಸಕನ್ನಡ ನ್ಯೂಸ್

**ಮಂಗಳೂರು: ದೇರಳಕಟ್ಟೆಯ ಮೆಡಿಕಲ್‌ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು
ರಾಗಿಂಗ್‌ ಮಾಡಿರುವ ಕುರಿತು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.**

Sponsored

ಕೇರಳದ ಕೊಲ್ಲಂ ಜಿಲ್ಲೆಯ ಕೊಟ್ಟಾರಕ್ಕರ್‌ ನಿವಾಸಿ ಅಕ್ಷಯ ವಿ ಎಸ್‌ (21) ದೂರು ನೀಡಿದವರು.

Advertisement

Advertisement

ಅ.2 ರಂದು ಮಧ್ಯಾಹ್ನ ರೆಸ್ಟೋರೆಂಟ್‌ ಬಳಿ ಇರುವಾಗ ಸೀನಿಯರ್‌ ವಿದ್ಯಾರ್ಥಿಗಳಾದ ಅಶಬ್‌ ಹಾಗೂ ಅಸ್ಫಕ್‌
ಎಂಬುವವರು ಬಂದಿದ್ದು, ಈ ಪೈಕಿ ಅಸ್ಫಕ್‌ ಎನ್ನುವಾತ ಯೂನಿಫಾರಂ ಇಲ್ಲದೆ ಸುತ್ತಾಡಿದರೆ ಕೈಕಾಲು ಮುರಿದು
ಕಾಲೇಜಿಗೆ ದೂರು ನೀಡುತ್ತೇವೆ ಎಂದು ಹೇಳಿ ಬೆದರಿಕೆ ಹಾಕಿದ್ದಾನೆ.

ಅ.15 ರಂದು ಅಪರಾಹ್ನ 1 ಗಂಟೆಗೆ ಅಕ್ಷಯ ಮತ್ತು ಸ್ನೇಹಿತರಾದ ಝಾಹಿದ್‌, ಶಹಜಾದ್‌, ಹುಸೈರ್‌, ರೋವನ್‌,
ಅಲ್ಫಾಝ್‌, ಆದಿರ್‌ ಊಟಕ್ಕೆಂದು ಹೋಟೆಲ್‌ಗೆ ಹೋದಾಗ ಆರೋಪಿ ಅಶಬ್‌ ಝಾಹಿದ್‌ನ ಮೊಬೈಲ್‌ಗೆ ಕರೆ ಮಾಡಿ
ಕ್ಲಾಕ್‌ ಟವರ್‌ ಬಳಿ ಕರೆಸಿಕೊಂಡಿದ್ದು, ಅಲ್ಲಿಂದ ಹೋಟೆಲ್‌ ರೂಮ್‌ಗೆ ಕರೆದುಕೊಂಡು ಹೋಗಿ ಕೂಡಿ ಹಾಕಿದ್ದಾರೆ.

ಅ.22 ರಂದು ಅಶಬ್‌ ಮತ್ತು ಇತರರು ಸೇರಿ ಬೇರೊಬ್ಬ ವಿದ್ಯಾರ್ಥಿಗೂ ರಾಗಿಂಗ್‌ ಮಾಡಿದ್ದಾರೆ. ಈ ವಿಚಾರ
ಯಾರಿಗಾದರೂ ತಿಳಿಸಿದರೆ ಕೈಕಾಲು ಮುರಿದು ಕಬರಿಸ್ತಾನ್‌ಗೆ ಹಾಕುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ
ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಅಶಬ್‌, ಅಸ್ಫಕ್‌ ಹಾಗೂ ಇತರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.

Advertisement
